ಮಸೀದಿ ಸನಿಹವೇ ಮದ್ಯದಂಗಡಿ: ದೂರು
ಬೇಲೂರು: ಮಂದಿರ ಮಸೀದಿ ಚರ್ಚ್ ಸಮೀಪ ಮದ್ಯದಂಗಡಿ ತೆರೆಯಬಾರದು ಎಂದು ನಿಯಮವನ್ನು ಉಲ್ಲಂಘಿಸಿ ಮದ್ಯದಗಂಡಿಯನ್ನು ತೆರೆಯಲಾಗುತ್ತಿದೆ ಎಂದು ಮಸೀದಿಯ ಮದಿನಾ ಅಧ್ಯಕ್ಷ ಬಿ.ಕೆ. ಅಬ್ದುಲ್ ಅಹಮದ್ ದೂರಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ಮದ್ಯದಂಗಡಿಯನ್ನು ನೆಹರೂ ನಗರದ ರಸ್ತೆ ಬದಿಯ ಅಂಗಡಿಯೊಂದಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆದರೆ, ಸ್ಥಳಾಂತರಿಸುವ ಸಂದರ್ಭದಲ್ಲಿ ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಅವರು ಆರೋಪಿಸಿದರು.
ಮಸೀದಿ ಬಳಿಯಲ್ಲೇ...: ಮಂದಿರ ಮಸೀದಿ ಚರ್ಚ್ ಹಾಗೂ ಶಾಲಾ ಅವರಣದಿಂದ 100 ಮೀಟರ್ ದೂರದಲ್ಲಿ ಮದ್ಯದಂಗಡಿ ಇರಬೇಕು ಎಂದು ಕಾನೂನಿದೆ. ಆದರೆ, ನೆಹರೂ ನಗರದಲ್ಲಿರುವ ಮದಿನಾ ಮಸೀದಿಯಿಂದ ಕೇವಲ 90 ಮೀಟರ್ ಅಂತರದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶವನ್ನು ಇಲ್ಲಿನ ಅಬಕಾರಿ ಅಧಿಕಾರಿಗಳು ನೀಡಿದ್ದಾರೆ ಎಂದು ಅವರು ದೂರಿದರು.
ಸತ್ಯಾಸತ್ಯತೆ ಮುಂದಿಡಿ: ಮಸೀದಿಯ ಬಳಿ ಬಾರ್ ತೆರೆಯುವುದನ್ನು ವಿರೋಧಿಸಿ, ಅಬಕಾರಿ ಡಿ.ಸಿ. ಹಾಗೂ ಇತರೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಈಗಾಗಲೇ ಅಳತೆಯನ್ನು ಬಾರ್ ಮಾಲೀಕರ ಎದುರು ನಾವು ಮಾಡಿಸಿದ್ದು 90 ಮೀಟರ್ ಬಂದಿದೆ. ಅಬಕಾರಿ ಅಧಿಕಾರಿಗಳು ಬಂದು ಮತ್ತೆ ನಮ್ಮೆದುರು ಅಳತೆಯನ್ನು ಮಾಡಿ ಸತ್ಯಾಸತ್ಯತೆಯನ್ನು ಮುಂದಿಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ, ಮಸೀದಿಯ ಉಪಾಧ್ಯಕ್ಷ ಫಯಾಜ್ ಅಹಮದ್, ನಿವಾಸಿಗಳಾದ ಇರ್ಷಾದ್, ಶರೀಫ್, ರಿಯಾಜ್ ಅಹಮದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

