ಒತ್ತುವರಿ ಜಾಗ ತೆರವಿಗೆ ಗ್ರಾಮಸ್ಥರ ಆಗ್ರಹ, ಮನವಿ
ಆಲೂರು: ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಿ ಕೊಡಬೇಕೆಂದು ತಾಲೂಕಿನ ಪಾಳ್ಯ ಹೋಬಳಿಯ ಕಲ್ಲುಕೆರೆ, ಹುಣಿಸೆ ಹಾಗೂ ಕಾಮತಿ ಕೂಡಿಗೆ ಗ್ರಾಮಸ್ಥರು ಗುರುವಾರ ತಹಸೀಲ್ದಾರ್ ಕಚೇರಿ ಬಳಿ ಧರಣಿ ನಡೆಸಿ ತಹಸೀಲ್ದಾರ್ ಶಾರದಾಂಬಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಗ್ರಾಮಸ್ಥರು ಗ್ರಾಮದ ದೇವರಕಟ್ಟೆಯ ಸರ್ವೇ ನಂ.9 ರಲ್ಲಿರುವ ಸ್ಮಶಾನದ ಜಾಗವನ್ನು ಕಲ್ಲುಕೆರೆ ಗ್ರಾಮದ ಕೆಂಚೇಗೌಡ ಹಾಗೂ ಅವರ ಪತ್ನಿ ಕಮಲ (ಮರಿತಾಯಮ್ಮ) ಹಾಗೂ ಮಕ್ಕಳಾದ ಲೋಕೇಶ್, ರಾಜೇಶ್ ಎಂಬುವವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ಈ ದಾರಿಯಾಗಿ ಬರುವ ಹೆಂಗಸರು ಹಾಗು ಮಕ್ಕಳನ್ನು ಹೀನಾಯವಾಗಿ ಬೈಯ್ಯುವುದಲ್ಲದೆ ನಿಮ್ಮ ಗಂಡ ಮಕ್ಕಳನ್ನು ಕೊಲೆ ಮಾಡಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ.
ಇದರಿಂದಾಗಿ ದನ ಕರುಗಳಿಗೆ ನೀರು ಕುಡಿಸಲು ಹೋಗುವುದಕ್ಕೆ ಹಾಗೂ ಇತರರು ತಮ್ಮ ಜಮೀನುಗಳಿಗೆ ಹೋಗುವುದಕ್ಕೆ ತುಂಬಾ ತೊಂದರೆಯಾಗುತ್ತದೆ. ಕಳೆದ ವಾರ ಕಾಮತಿ ಕೂಡಿಗೆಯ ಎಚ್.ಕೆ.ತಿಮ್ಮೇಗೌಡ ಎಂಬುವವರ ಪುತ್ರ ಬಸವರಾಜು ಎಂಬಾತ ಸಂಜೆ ಕೆರೆಯಿಂದ ದನಗಳನ್ನು ಹೊಡೆದುಕೊಂಡು ಬರುವಾಗ ಆತನನ್ನು ಅಡ್ಡಗಟ್ಟಿ ಜಗಳ ಮಾಡಿ ಆತನ ಜೊತೆಯಲ್ಲಿದ ಚಂದ್ರೇಗೌಡ ಎಂಬಾತನ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿದ್ದಾರೆ.
ಈ ಹಿಂದೆಯೂ ನಾವು ಈ ಬಗ್ಗೆ ಅರ್ಜಿಗಳನ್ನು ನೀಡಿದ್ದು ಏನೂ ಪ್ರಯೋಜನವಾಗಿಲ್ಲ. ಈಗಲಾದರೂ ಈ ಬಗ್ಗೆ ಪರಿಶೀಲನೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಿ ಗ್ರಾಮಸ್ಥರು ಓಡಾಡಲು ಹಾಗು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ತಹಸೀಲ್ದಾರ್ಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುಟ್ಟೇಗೌಡ, ಕೆ.ಎಸ್.ಶಂಕರ, ಚಂದ್ರು, ನೀಲಮ್ಮ, ನಾಗವೇಣಿ ರಾಣಿ, ಶಾರದ, ಗೌಡೇಗೌಡ, ಹರೀಶ, ಕುಮಾರ, ಕೃಷ್ಣನಾಯಕ, ಯೋಗೀಶ್, ಮಹೇಶ್, ಮಂಜುನಾಥ, ಸೋಮೇಗೌಡ, ಸುರೇಶ ನಾಯ್ಕ, ಕೆ.ಎಂ.ಹರೀಶ್, ಕೆ.ಆರ್.ಶಂಕರ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

