ಚರಂಡಿ ವ್ಯವಸ್ಥೆ ಇಲ್ಲದೆ ದುರ್ನಾತ ಬೀರುವ ಮಲ್ಲಾಪುರ ಕಾಲೋನಿ
ರಾಮನಾಥಪುರ: ಹೋಬಳಿಯ ಲಕ್ಕೂರು ಗ್ರಾಮ ಪಂಚಾಯ್ತಿಗೆ ಸೇರಿದ ಮಲ್ಲಾಪುರದಲ್ಲಿ ಹೊಸದಾಗಿ 25 ಮನೆಗಳು ನಿರ್ಮಾಣವಾಗಿರುವ ಕಾಲೋನಿಯಲ್ಲಿ ಚರಂಡಿ ಇಲ್ಲದೇ ಕೊಳಚೆ ನೀರು ಮನೆಯ ಮುಂದೆ ಶೇಖರಣೆಯಾಗಿ, ರಸ್ತೆಯಲ್ಲಿಯೇ ಕೊಳೆತು ಇಡೀ ಪ್ರದೇಶ ದುರ್ನಾತ ಬೀರುತ್ತಿದೆ.
ಸೊಳ್ಳೆ, ನೊಣ ಸೇರಿದಂತೆ ಇತರೆ ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿದೆ. ಇದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಅದರೆ ಲಕ್ಕೂರು ಗ್ರಾಮ ಪಂಚಾಯ್ತಿ ಶುಚಿತ್ವದತ್ತ ಸ್ವಲ್ಪವೂ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಅನಿಯಮಿತ ವಿದ್ಯುತ್ ನಿಲುಗಡೆ ಪರಿಣಾಮ ಮಲ್ಲಾಪುರ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಕೆಲವೇ ನಿಮಿಷ ನೀರು ಬಿಡಲಾಗುತ್ತದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ದಲಿತರ ಕಾಲೋನಿಯ ಬೋರ್ವೆಲ್ ಹಾಳಾಗಿ ಅರು ತಿಂಗಳೇ ಕಳೆದಿದೆ. ಈ ಬೋರ್ವೆಲ್ ರಿಪೇರಿಯತ್ತ ಸಂಬಂದಪಟ್ಟವರು ಗಮನ ಹರಿಸುತ್ತಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಸಿಡಿಪಿಓ ಹಾಗೂ ಕಾರ್ಯದರ್ಶಿಗಳು ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ. ಕುಡಿಯುವ ನೀರಿನ ನಿವಾರಣೆಗೆ ಕೈಪಂಪು ರಿಪೇರಿಯನ್ನು ಕೂಡಲೇ ಜನ ಪ್ರತಿನಿಧಿಗಳು. ಗ್ರಾಮ ಪಂಚಾಯ್ತಿಯವರು ಅಧಿಕಾರಿಗಳು ಕ್ರಮ ಕೈಗೊಂಡು ರಿಪೇರಿ ಮಾಡಿಸಿಕೋಡುವಂತೆ ಒತ್ತಾಯಿಸಿದ್ದಾರೆ.
ಮಲ್ಲಾಪುರದ ಕಾಲೋನಿ ರಸ್ತೆ ಇಷ್ಟು ವರ್ಷವಾದರೂ ಡಾಂಬರು ಕಂಡಿಲ್ಲ. ದಲಿತರು ಮತ್ತು ಹಿಂದುಳಿದ ವರ್ಗದವರು ವಾಸಿಸುವ ಕಾಲೋನಿಯ ಅಭಿವೃದ್ಧಿಯತ್ತ ಸಂಬಂಧಪಟ್ಟವರು ನಿರ್ಲಕ್ಷ್ಯ ತಾಳಿದ್ದಾರೆ ಎಂಬುದಕ್ಕೆ ಕೇವಲ 1 ಕಿ.ಮೀ. ಕೂಡಾ ಡಾಂಬರು ಕಾಣದ ರಸ್ತೆ ಹಾಗೂ ಕೆಟ್ಟು ನಿಂತಿರುವ ಬೋರ್ವೆಲ್ ಹಾಗೂ ಕೊಳಚೆ ಚರಂಡಿಗಳೇ ಸಾಕ್ಷಿ ಎಂದು ಕಾಲೋನಿಯ ಸಿಂಗ್ರಯ್ಯ, ಹಾಲಯ್ಯ, ಬೋರಯ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

