ಹಾಸನ

ಅಂಚೆ ನೌಕರರ ಬೇಡಿಕೆ ಈಡೇರಿಸಿ: ವಿಭಾಗೀಯ ಕಾರ್ಯದರ್ಶಿ ಶಿವಾಜಿ

Published On :

ಹಾಸನ: ಗ್ರಾಮೀಣ ಅಂಚೆ ನೌಕರರ ಕೆಲಸಕ್ಕೆ ಸೂಕ್ತ ವೇತನ ನೀಡಬೇಕು ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾ ವಿಭಾಗೀಯ ಕಾರ್ಯದರ್ಶಿ ಕೆ.ಜೆ. ಶಿವಾಜಿ ಒತ್ತಾಯಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಅಂಚೆ ಕಚೇರಿಯ ಮುಂದೆ ಕಳೆದ ನಾಲ್ಕು ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರೂ ಈವರೆಗೂ ಯಾರೂ ಇದಕ್ಕೆ ಸ್ಪಂದಿಸಿಲ್ಲ ಎಂದ ಅವರು, ಜಿಡಿಎಸ್ ನೌಕರರನ್ನು ಪೌರನೌಕರ ಎಂದು ಪರಿಗಣಿಸಬೇಕು. ಇಲಾಖೆಯ ನೌಕರರಿಗೆ ಕೊಡುವ ಎಲ್ಲಾ ಸೌಲಭ್ಯ ನೀಡಬೇಕು. ಕೇಂದ್ರದ ಏಳನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.  ಅನುಕಂಪದ ಆಧಾರದ ನೌಕರಿಯ ಸೌಲಭ್ಯವನ್ನು ಶೇ.100 ರಷ್ಟು ಕೊಡಬೇಕು. ಪೋಸ್ಟ್ ಮೆನ್ ಮತ್ತು ಎಂಟಿಎಸ್‌ಗಳ ಶೇ. 25ರಷ್ಟು ಹುದ್ದೆಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ಕೊಡಬೇಕು. ಹೊರ ಗುತ್ತಿಗೆ ಆಧಾರದ ಮೇಲೆ ಶೇ. 25ರಷ್ಟು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಜಿಡಿಎಸ್ ನೌಕರರನ್ನು ಖಾಯಂಗೊಳಿಸಬೇಕು. ಶೇ. 50ರಷ್ಟು ಡಿಎ ಮರ್ಜ್ ಮಾಡಿ, ಜ. 1, 2006ರಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ, ಕಾಂಟಿಜೆಂಟಿ, ಪಾರ್ಟ್ ಟೈಂ ಕೆಲಸಗಾರರಿಗೆ ಡಿಎ ನೀಡಬೇಕು. ಎಲ್ಲಾ ಬೇಡಿಕೆಯನ್ನು ಈಡೇರುವವರೆಗೂ ಕೇಂದ್ರ ಸರ್ಕಾರದ ವಿರುದ್ಧ ಅನಿರ್ದಿಷ್ಟಕಾಲ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ವಿಭಾಗೀಯ ಸ್ವಾಮಿ, ಮಂಜಯ್ಯ, ದೇವರಾಜ್, ಶಿವಣ್ಣ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.