ಹಾಸನ

ಪ್ರತಿ ರೈತನಿಗೆ ರು. 50 ಸಾವಿರ ಆದಾಯ ಸಿಗುವವರೆಗೂ ರಾಜಕೀಯ ನಿವೃತ್ತಿ ಇಲ್ಲ

Published On :

ಹಾಸನ: ಜಿಲ್ಲೆಯ ಪ್ರತಿಯೊಬ್ಬ ಅನ್ನದಾತನ ಕುಟುಂಬಕ್ಕೆ ಮಾಸಿಕ 50 ಸಾವಿರ ರು. ಆದಾಯ ಪಡೆಯುವಂತೆ ಮಾಡುವ ಉದ್ದೇಶ ಹೊಂದಿದ್ದು, ಅದನ್ನು ಮಾಡಿಯೇ ರಾಜಕೀಯದಿಂದ ದೂರ ಹೋಗುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ತಾಲೂಕಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಕೃಷಿ ವಿಶ್ವವಿದ್ಯಾನಿಲಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಜಿಲ್ಲಾ ಕೃಷಿ ಮಾಹಿತಿ ಆಂದೋಲನ, ಪ್ರಗತಿಪರ ರೈತರ ಸಮಾವೇಶ ಮತ್ತು ಕಿರುಧಾನ್ಯಗಳ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ರೈತನು ಸಹ ಆರ್ಥಿಕವಾಗಿ ಸದೃಢನಾಗಬೇಕು ಎಂಬ ಕನಸನ್ನು ಹೊಂದಿದ್ದೆ. ಅದನ್ನು ಪೂರ್ಣಗೊಳಿಸುವವರೆಗೆ ಹಿಂದೆ ಸರಿಯುವುದಿಲ್ಲ ಎಂದರು.
ರೈತರಿಗಾಗಿ ಏರ್ಪೋರ್ಟ್: ಅದಕ್ಕಾಗಿ ರೈತರು ಬೆಳೆದಂತಹ ಬೆಳೆಗಳನ್ನು ವಿದೇಶಗಳಿಗೆ ರಫ್ತು ಮಾಡಿದರೆ ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಉದ್ದೇಶವನ್ನು ಹೊಂದಿ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಮುಂದಾಗಿರುವುದಾಗಿ ಅವರು ಹೇಳಿದರು.
ಕೃಷಿ ಬಜೆಟ್ನಿಂದ ಪ್ರಯೋಜನವಾಗಲಿಲ್ಲ: ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಕೃಷಿ ಕಾಲೇಜು ದೇವೇಗೌಡರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಅದಕ್ಕೆ ನದಿಯಿಂದ ನೇರವಾಗಿ ನೀರನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಕೃಷಿ ಕಾಲೇಜನ್ನು ರದ್ದು ಪಡಿಸಿ ಇಲ್ಲಿಂದ ಶಿವಮೊಗ್ಗಕ್ಕೆ ವರ್ಗಾಹಿಸಲು ಮುಂದಾಗಿದ್ದಾರೆ ಎಂದ ಅವರು, ಸರ್ಕಾರ ಅನ್ನದಾತದ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಮುಂದಿನ ದಿನಗಳ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಬಿಜೆಪಿ ಸರ್ಕಾರವು ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡಿಸಿದ್ದರೂ ಅದು ಪ್ರಯೋಜನವಾಗಲಿಲ್ಲ ಎಂದು ಹೇಳಿದರು.
ಪುಸ್ತಕ ಬಿಡುಗಡೆ: ಕಾರ್ಯಕ್ರಮಕ್ಕೂ ಮುನ್ನ ಕೃಷಿ ವಸ್ತು ಪ್ರದರ್ಶನವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಉದ್ಘಾಟಿಸಿ ವೀಕ್ಷಿಸಿದರು. ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಉದ್ಘಾಟನೆ ಕೂಡ ನೆರವೇರಿಸಿದ ಅವರು, ಕೃಷಿಗೆ ಸಂಬಂಧಿಸಿದ ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಜೊತೆಗೆ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಮಾಹಾವಿದ್ಯಾಲಯದ ಆವರಣದಲ್ಲಿ ರೈತರಿಗೆ ಅನುಕೂಲಕರವಾದ ನಾನಾ ಬೆಳೆಯ ಬಗ್ಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಾವಿರಾರು ಜನ ರೈತರು ಇದರ ಉಪಾಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಉಪೇಂದ್ರ ಪ್ರತಾಪ್ ಸಿಂಗ್, ಕೃಷಿ (ಡೀನ್) ಎಲ್. ಮಂಜುನಾಥ್, ಕೃಷಿ ಇಲಾಖೆ ಕೃಷಿ ನಿರ್ದೇಶಕ ಡಾ.ಬಿ.ಕೆ. ಧರ್ಮರಾಜನ್, ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಸಂಶೋಧನ ನಿರ್ದೇಶಕ ಎಂ.ಎ. ಶಂಕರ್, ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜ್ ಹಾಗೂ ಇತರರು ಇದ್ದರು.
ರೈತರ ಮಕ್ಕಳು ಅಧಿಕಾರಕ್ಕೆ ಬಂದ್ರೆ ತಪ್ಪಾ?
ನನ್ನ ಮಗ ಬಾಲಕೃಷ್ಣನನ್ನು ಎಸಿ ಮಾಡುತ್ತಾರೆ ಅಂತಿದ್ದರು. ಆದರೆ ನಾನು ಹಾಗೇ ಮಾಡಲಿಲ್ಲ ಎಂದ ದೇವೇಗೌಡರು, ಇವತ್ತಿನ ನಾಯಕರು ನನ್ನನ್ನು ಹಾಟಿಕೊಳ್ಳುತ್ತಿದ್ದಾರೆ. ಹಿಂದೆ ದೇವಿಲಾಲ್, ಚರಣ್ ಸಿಂಗ್ ಹಾಗೂ ನಾನು ಪ್ರಧಾನಿಯಾಗಿದ್ದಾಗ ನಕ್ಕವರೇ ಹೆಚ್ಚು ಎಂದ ಅವರು, ರೈತರ ಬಗ್ಗೆ ಚಿಂತನೆ ಮಾಡೋದೆ ತಪ್ಪಾ... ರೈತರ ಮಕ್ಕಳು ಅಧಿಕಾರಕ್ಕೆ ಬರೋದೆ ತಪ್ಪಾ...  ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.