ಹಾಸನ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿಂಗಮ್ಮ ದೇವಿ ಪುನರ್ ಪ್ರತಿಷ್ಠಾಪನೆ

Published On :

ಹೊಳೆನರಸೀಪುರ: ಇಲ್ಲಿನ ಬಹುಜನರ ಆರಾಧ್ಯ ದೈವವಾದ ಶ್ರೀ ಸಿಂಗಮ್ಮದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರದಂದು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜಂೃಭಣೆಯಿಂದ ನೆರವೇರಿತು.
ಅತ್ಯಂತ ಹಳೆಯದಾಗಿದ್ದ ಸಿಂಗಮ್ಮ ದೇವಿಯ ದೇವಾಲಯವನ್ನು ದೇವಾಲಯದ ಪೂಜಾ ಸಮಿತಿಯ ಪದಾಧಿಕಾರಿಗಳು ಭಕ್ತಾದಿಗಳ ಉದಾರ ಸಹಕಾರವನ್ನು ಪಡೆದು ದೇವಾಲಯವನ್ನು ವಿಶಾಲವಾಗಿ ನಿರ್ಮಿಸಲಾಗಿದ್ದು, ದೇವಾಲಯದ ಕಾಮಗಾರಿಯು ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಆದರೆ ಸಿಂಗಮ್ಮ ದೇವರ ಗರ್ಭಗುಡಿಯನ್ನು ನವೀಕರಿಸಲಾಗಿದ್ದು, ಶುಕ್ರವಾರದಂದು ನೂತನ ಗರ್ಭಗುಡಿಯಲ್ಲಿ ಪುನರ್ ಪ್ರತಿಷ್ಠಾಪಿಸಲಾಯಿತು.
ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಫೆ. 20ರಿಂದ ಹರಿಹರಪುರದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ಟರ ಪ್ರಧಾನಾಚಾರ್ಯತ್ವದಲ್ಲಿ ಶ್ರೀ ಗಣಪತಿ ಹೋಮ, ದೇವನಾಂದಿ, ರಕ್ಷಾಬಂಧನ, ಕಲಶಸ್ಥಾಪನೆ, ಪೂರ್ಣಾಹುತಿ, ನವಗ್ರಹ ಪುರಸ್ಸರ ವಾಸ್ತುಹೋಮ, ರಾಕ್ಷೋಘ್ನ ಹೋಮ. ಬಲಿಪ್ರಧಾನ ಕಾರ್ಯಗಳು ನೆರವೇರಿದವು.
ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಚ್.ಸಿ. ಬಸವರಾಜ್, ಅರ್ಚಕರಾದ ಶಿವಣ್ಣ, ಸಿದ್ದರಾಜು, ಶಿವಕುಮಾರ, ಬೇಕರಿ ಶಂಕರ್, ಪುರಸಭೆ ಮಾಜಿ ಸದಸ್ಯ ಎಚ್.ಸಿ. ಬಸವರಾಜು, ಬೇಕರಿ ರಮೇಶ್, ಕಾರ್ಯಕರ್ತ ಮಲ್ಲೇಶ್ ಮೊದಲಾದವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ತಹಸೀಲ್ದಾರ್ ಆರ್.ಬಿ. ಶಿವಶಂಕರಪ್ಪ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.