ಹಾಸನ

ಪಾದ್ರಿಯಿಂದ ಅತ್ಯಾಚಾರ ಆರೋಪ: ಬಂಧನ

Published On :

ಜಾವಗಲ್: ಹೋಬಳಿಯ ನೀಲಗಿರಿ ಕಾವಲು ಗ್ರಾಮದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಒಬ್ಬನನ್ನು ಮಂಗಳವಾರ ಬಂಧಿಸಿದ್ದಾರೆ.
ನೀಲಗಿರಿಕಾವಲ್‌ನ ಮಹಿಳೆಯೊಬ್ಬರಿಗೆ ತಿಂಗಳ ಹಿಂದೆ ಹಳೇಬೀಡು ಹೋಬಳಿ ನರಸೀಪುರ ಚರ್ಚಿನ ಪಾದ್ರಿ ಅಣ್ಣಯ್ಯನ ಪರಿಚಯವಾಗಿತ್ತು. ಕೊಲೆ ಪ್ರಕರಣದಲ್ಲಿ ಮಹಿಳೆಯ ಪತಿ ಜೈಲು ಸೇರಿದ ವಿಚಾರವನ್ನು ಮತ್ತು ನೋವನ್ನು ಆಕೆ ಪಾದ್ರಿಯೊಂದಿಗೆ ಹೇಳಿಕೊಂಡಿದ್ದಳು. ಅಣ್ಣಯ್ಯ ಆಗಾಗ್ಗೆ ಮೊಬೈಲ್ ಕರೆ ಮಾಡಿ ಪ್ರಾರ್ಥನೆ ವಿಚಾರ ಮಾತನಾಡಲು ನಿನ್ನ ಮನೆಗೆ ಬರುತ್ತೇನೆ ಎಂದು ಒತ್ತಾಯಪಡಿಸುತ್ತಿದ್ದ.
ಭಾನುವಾರ ರಾತ್ರಿ 11.30ರ ನೀಲಗಿರಿಕಾವಲಿನ ಆಕೆಯ ದೊಡ್ಡಪ್ಪನ ಮನೆಗೆ ಕರೆಸಿಕೊಂಡು ರಾತ್ರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಆಕೆ ಕೂಗಿಕೊಂಡಾಗ ಅಕ್ಕಪಕ್ಕದ ಮನೆಯವರು ಆಕೆಯ ನೆರವಿಗೆ ಬಂದು ಸೋಮವಾರ ಬೆಳಗ್ಗೆ ಪೊಲೀಸರಿಗೆ ಒಪ್ಪಿಸಿದರು.ಆಕೆ ನೀಡಿದ ದೂರಿನನ್ವಯ ಅರಸೀಕೆರೆ ಗ್ರಾಮಾಂತರ ಇನ್ಸ್‌ಪೆಕ್ಟರ್ ಗಂಗಾಧರಪ್ಪ, ಜಾವಗಲ್ ಪೊಲೀಸ್ ಠಾಣಾಧಿಕಾರಿ ಸಿ.ಪಿ.ನವೀನ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಾದ್ರಿ ಅಣ್ಣಯ್ಯ ಕೂಡ ನನ್ನ ಮೇಲೆ ರಾತ್ರಿ ಹಲ್ಲೆ ನಡೆಸಿದ್ದಾರೆ ಎಂದು ನಾಲ್ವರ ಮೇಲೆ ಪ್ರತಿದೂರು ನೀಡಿದ್ದು, ಮಹಿಳೆಯ ಅಣ್ಣ, ಅತ್ತಿಗೆಯನ್ನು ಪೋಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.