ವಾಣಿಜ್ಯ ಮಳಿಗೆಗೆ ಸೌಲಭ್ಯ ಒದಗಿಸಲು ಆಗ್ರಹ
ಬೇಲೂರು: ಪಟ್ಟಣದ ಹೃದಯ ಭಾಗದ ಐಡಿಎಸ್ಎಂಟಿ ವಾಣಿಜ್ಯ ಮಳಿಗೆಯ ವ್ಯಾಪಾರಸ್ಥರಿಗೆ ಕೇವಲ ಮಳಿಗೆ ಮಾಡಿದರೆ ಸಾಲದು, ಅವರಿಗೆ ಸೂಕ್ತ ಮೂಲಸೌಲಭ್ಯಗಳನ್ನು ನೀಡಬೇಕು ಎಂದು ತಾಲೂಕು ಕರವೇ ಅಧ್ಯಕ್ಷ ಚಂದ್ರಶೇಖರ್ ಒತ್ತಾಯಿಸಿದರು.
ಸೋಮವಾರ ಇಲ್ಲಿನ ನೂತನ ಹೊಯ್ಸಳ ಮಾರುಕಟ್ಟೆ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರಸಭೆಯಿಂದ ನಿರ್ಮಿತವಾಗಿರುವ ಈ ಮಳಿಗೆಗಳು ಬೀಡಾಡಿ ದನಗಳ ಬೀಡಾಗಿದೆ. ಅಲ್ಲದೆ ಸೂಕ್ತ ಭದ್ರತೆ, ಕುಡಿಯುವ ನೀರು ಮತ್ತು ಬೆಳಕು ಇಲ್ಲದೆ ವ್ಯಾಪಾಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯ ಮಳಿಗೆ ಒಳ ಭಾಗದಲ್ಲಿ ಫುಟ್ಪಾತ್ ವ್ಯಾಪಾರಸ್ಥರಿಗೆ ನಿರ್ಮಾಣ ಮಾಡಿರುವ ಕಟ್ಟೆಗಳು ಕಿರಿದಾಗಿದ್ದು, ಪುರಸಭೆಯವರು ತಕ್ಷಣ ಮುಟ್ಟುಗೋಲು ಹಾಕಿಕೊಂಡು ಬಡ ವ್ಯಾಪಾಸ್ಥರಿಗೆ ನ್ಯಾಯ ನೀಡಬೇಕು ಎಂದರು.
ತಾಪಂ ಅಧ್ಯಕ್ಷೆ ಶಾಂತಮ್ಮ ಮಹದೇವಯ್ಯ ಮಾತನಾಡಿ, ಉತ್ಪಾದಕ, ವ್ಯಾಪಾರಿ ಹಾಗೂ ಗ್ರಾಹಕನ ನಡುವೆ ಉತ್ತಮ ಸಂಬಂಧ ಇದ್ದಾಗ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಬೇಲೂರು ಪುರಸಭೆ ಫುಟ್ಪಾತ್ ವ್ಯಾಪಾರಿಗಳಿಗೆ ಒಂದು ಕಡೆಯಲ್ಲಿ ವ್ಯವಸ್ಥೆ ಮಾಡಿದ್ದು, ಅವರಿಗೆ ಮೂಲ ಸೌಕರ್ಯ ನೀಡಬೇಕು. ತಾಪಂನಿಂದ ಲಭ್ಯ ಇರುವ ಸವಲತ್ತು ನೀಡುವ ಭರವಸೆ ನೀಡಿದರು.
ಪುರಸಭೆ ಸದಸ್ಯ ಬಿ.ಗಿರೀಶ್ ಮಾತನಾಡಿ, ವಾಣಿಜ್ಯ ಮಳಿಗೆ ಹರಾಜು ಮಾಡುವ ಸಂದರ್ಭದಲ್ಲಿ ಜನರು ಸ್ಪರ್ಧೆಗೆ ಬಿದ್ದು, ಮನ ಬಂದಂತೆ ಹರಾಜು ಮಾಡಿಕೊಂಡು ಸದ್ಯ ಬಾಡಿಗೆಗೆ ಹಣ ಕಟ್ಟಲು ಹಿಂದು ಮುಂದೆ ನೋಡುತ್ತಿದ್ದಾರೆ. ಕಾರಣ ಇಲ್ಲಿ ವ್ಯಾಪಾರ ಇನ್ನೂ ಚುರುಕಾಗಿಲ್ಲ. ಪುರಸಭೆಯಿಂದ ಅವರಿಗೆ ಮೂಲಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.
ಪುರಸಭೆ ಸದಸ್ಯ ರವಿ ಅಣ್ಣೇಗೌಡ, ಸಂಘದ ಅಧ್ಯಕ್ಷ ಗೀರಿಶ್, ಖಾದರ್, ಪ್ರಕಾಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

