ಸಾಮಾಜಿಕ ಸಮಸ್ಯೆ ನಿರ್ಮೂಲನೆ ಗುರಿಯಾಗಲಿ
ಆಲೂರು: ನಾಡು, ನುಡಿ, ನೆಲ, ಜಲ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಜಯ ಕರ್ನಾಟಕ ಸಂಘಟನೆಯ ಸದಸ್ಯರೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ತಿಳಿಸಿದರು.
ಪಟ್ಟಣದ ಕಬೀರ್ ಕನ್ವೆನ್ಷನ್ ಹಾಲ್ನಲ್ಲಿ ತಾಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ನಾನು ಓಟು ಕೊಡಿ ಎಂದೋ ಅಥವಾ ನಿಮ್ಮಿಂದ ಸಹಾಯ ಯಾಚಿಸಿ ಎಂದೋ ನಿಮ್ಮ ಬಳಿಗೆ ಬರುವುದಿಲ್ಲ. ನಾನು ಜೀವಮಾನದಲ್ಲಿ ರಾಜಕೀಯಕ್ಕೆ ಬರುವುದಿಲ್ಲ ಎಂದರು.
ದೀನ ದಲಿತರ, ಬಡಬಗ್ಗರ ಕುಂದುಕೊರತೆಗಳನ್ನು ನೀಗಿಸಲು ಸಂಘಟನೆ ಕೆಲಸ ಮಾಡುತ್ತಿದ್ದು ನಾನು ನಿಮ್ಮ ಬೆನ್ನಿಗಿರುತ್ತೇನೆ. ನೀವು ಯಾವ ಪಕ್ಷಕ್ಕೆ ಬೇಕಾದರೂ ಓಟು ಹಾಕಿ. ಆದರೆ ನಿಮ್ಮೂರಿನ ಸಮಸ್ಯೆಗಳನ್ನು ನೀವೇ ಬಗೆಹರಿಸಲು ಪ್ರಯತ್ನಿಸಿ. ರಾಜಕೀಯ ಪಕ್ಷದವರು ವೇಷ ಹಾಕಿಕೊಂಡು ನಾಟಕವಾಡುತ್ತಾರೆ ಎಂದರು.
ಸಂಘಟನೆಗಳು ಬಲಗೊಂಡರೆ ರಾಜಕಾರಣಿಗಳು ಬುದ್ಧಿ ಕಲಿಯುತ್ತಾರೆ. ಹಿಂದೆ ಅತ್ಯಂತ ಬಲಿಷ್ಠ ಸಂಘಟನೆಯಾಗಿದ್ದ ರೈತ ಸಂಘ ಒಗ್ಗಟ್ಟಿಲ್ಲದೆ ನಾನಾ ಬಣಗಳಾಗಿ ತನ್ನ ಶಕ್ತಿಯನ್ನು ಕಳೆದುಕೊಂಡಿದೆ.
ನಮ್ಮ ಸಂಘಟನೆಯಲ್ಲಿ ವಂಶಪಾರಂಪರ್ಯ ಅಧಿಕಾರವಿಲ್ಲ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ನೇತ್ರ ಪರೀಕ್ಷಾ ಶಿಬಿರ, ರಕ್ತದಾನ ಶಿಬಿರ ಹಾಗೂ ಆರೋಗ್ಯ ಶಿಬಿರಗಳನ್ನು ನಡೆಸಿದೆ.
ನಾಡಿನ ಹತ್ತು ಹಲವು ಸಮಸ್ಯೆಗಳ ವಿರುದ್ಧ ಹೋರಾಡಬೇಕಾಗಿದೆ. ನಮ್ಮ ಸಂಘಟನೆ ಸದಾ ಜನಪರ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಂಘಟನೆಗೆ ಸದಸ್ಯರು ಸೇರಬೇಕೆಂದು ಮನವಿ ಮಾಡಿದರು.
ಆಲೂರಿನಲ್ಲಿಯೂ ಆನೆ ಹಾವಳಿ ಸೇರಿದಂತೆ ಅನೇಕ ಸಮಸ್ಯೆಗಳಿದ್ದು ಸಂಘಟನೆ ಇದರ ಬಗ್ಗೆ ಗಮನ ಹರಿಸಬೇಕು. ನಾನೂ ಈಗ ನಿಮ್ಮೂರಿನವನೇ ಆಗಿ ಹೋಗಿದ್ದು, ನೀವು ಯಾವ ವೇಳೆಯಲ್ಲಿ ಕರೆ ಮಾಡಿದರೂ ನಿಮ್ಮ ಸೇವೆಗೆ ಓಡಿ ಬರುವೆ ಎಂದರು.
ಜಿಲ್ಲಾಧ್ಯಕ್ಷ ಉಮೇಶ್, ತಾಲೂಕು ಅಧ್ಯಕ್ಷ ಹನುಮಂತೇಗೌಡ, ಕಾರ್ಯದರ್ಶಿ ಪ್ರದೀಪ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

