ಹಾಸನ

ಸುದ್ದಿ ಸಂಕ್ಷೇಪ

Published On :

4ರಂದು ನಗರಸಭೆ ಸಾಮಾನ್ಯ ಸಭೆ
ಹಾಸನ: ನಗರಸಭೆಯ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಜ.4ರಂದು ಸಂಜೆ 4ಕ್ಕೆ ನಗರಸಭೆ ಅಧ್ಯಕ್ಷೆ  ಎಚ್.ಹೆಚ್.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ನಗರಸಭೆಯ ಸಾಮಾನ್ಯ ಸಭೆ ಕರೆಯಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹುದ್ದೆಗಳಿಗೆ ಅರ್ಜಿ
ಹಾಸನ: ಸಕಲೇಶಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಜ.24ರ ಸಂಜೆ 5.30 ರೊಳಗೆ ನಿಗದಿತ ಅರ್ಜಿ ಹಾಗೂ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಕಲೇಶಪುರ, ಸಂಬಂಧಪಟ್ಟ ಪಿಡಿಒ, ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಬಹುದಾಗಿದೆ.                    
ಕಾರ್ಯಕರ್ತೆ ಹುದ್ದೆಗಳು: ಹಲಸುಲಿಗೆ ಕಾಲೋನಿ ಅಂಗನವಾಡಿ ಕೇಂದ್ರ, ಬೆಳಗೋಡು ಗ್ರಾಪಂ ಸುಂಡಳ್ಳಿ ಅಂಗನವಾಡಿ ಕೇಂದ್ರ, ಮಳಲಿ ಗ್ರಾಪಂ ಕೆಂಪಿಹನಾಲ್, ಮತ್ತು ಕ್ಯಾಮನಹಳ್ಳಿ ಗ್ರಾಪಂ ಚಿಮ್ಮಿಕೋಲು ಕೇಂದ್ರ. ಸಹಾಯಕಿಯರ ಹುದ್ದೆಗಳು: ಹೆತ್ತೂರು ಗ್ರಾಪಂನ ಹಾಡ್ಲಹಳ್ಳಿ ಅಂಗನವಾಡಿ ಕೇಂದ್ರ ಮತ್ತು ಹೆಗ್ಗದ್ದೆ ಗ್ರಾಪಂನ ಮಾರನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಮುಕ್ತ ಸ್ಥಾನ, ಮಳಲಿ ಗ್ರಾಪಂನ ರಾಮೇನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಪರಿಶಿಷ್ಟ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.