ನೂತನ ವರ್ಷಾಚರಣೆಗೆ ಭಾರತೀಯ ಸಂಸ್ಕೃತಿ ಸ್ಪರ್ಶ
ಹಾಸನ: ಹೊಸ ವರ್ಷದ ಆಮಂತ್ರಣವನ್ನು ಅಪ್ಪಟ ಭಾರತೀಯ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಜನಪದೀಯ ಸೊಗಡಿನೊಂದಿಗೆ ಸ್ವಾಗತಿಸುವ ಸಂಭ್ರಮ ಅಲ್ಲಿ ಮನೆ ಮಾಡಿತ್ತು.
ಶಾಂತಿನಗರದ ಬಿಜಿವಿಎಸ್ ಘಟಕವು ನಗರದ ಶಾಂತಿನಗರದ ಉದ್ಯಾನವನದಲ್ಲಿ ಮಂಗಳವಾರ ರಾತ್ರಿ 8ರಿಂದ 12ರವರೆಗೆ ನಾನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಿತು. ಇದರಲ್ಲಿ ಮಕ್ಕಳಾದಿಯಿಂದ ಮಹಿಳೆಯರು, ವಯೋವೃದ್ಧರು, ಯುವಜನರು ಆಸುಪಾಸಿನ ಬಡಾವಣೆಯ ಜನರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜಿವಿಎಸ್ ಶಾಂತಿನಗರ ಘಟಕ ಕಳೆದ 1 ವರ್ಷದಲ್ಲಿ ನಡೆಸಿದ ಪ್ರತಿಭಾ ಹುಡುಕಾಟದ ಅನಿಸಿಕೆ-ಅಭಿವ್ಯಕ್ತಿಯ 12 ಕಂತುಗಳ, ಬಿಜಿವಿಎಸ್ ಘಟಕಗಳ ವರ್ಷಾನುಪೂರ್ತಿ ಚಟುವಟಿಕೆಗಳ ಸ್ಮರಣ ಸಂಚಿಕೆಯನ್ನು ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಬಿಡುಗಡೆ ಮಾಡಿ ಮಾತನಾಡಿದರು.
ಹೊಸ ವರ್ಷ-2014 ಭಾರತದ ಜನತೆಯಲ್ಲಿ ಹೊಸ ಭರವಸೆಗಳ ಮಹಾಪೂರವನ್ನೇ ಹೊತ್ತು ತರಲಿ. ಜಾತೀಯತೆ ತೊಲಗಿಸುತ್ತಾ, ಭಯೋತ್ಪಾದನೆ ಮೆಟ್ಟುತ್ತಾ, ಅಸ್ಪರ್ಶತೆ ಇಲ್ಲವಾಗಿಸುತ್ತಾ, ಅಂಧಕಾರ ನಿರ್ಮೂಲನಗೊಳಿಸುತ್ತಾ, ವಿಜ್ಞಾನವನ್ನು ಪ್ರಬುದ್ಧವಾಗಿ ಬೆಳೆಸಲಿ ಎಂದು ಆಶಿಸಿದರು.
ಶಾಂತಿನಗರ ಕ್ಷೇಮಾಭಿವೃದ್ಧಿ ಸಂಘದ ಸತೀಶ್ ಬೋಳ ಕ್ಯಾತನಹಳ್ಳಿ ಶಾಂತಿನಗರ ಘಟಕವು ಬಾಲವಿಜ್ಞಾನಿ ಘಟಕವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಭಾರತದ ಭವಿಷ್ಯದ ದೃಷ್ಟಿಯಲ್ಲಿ ಅನಿವಾರ್ಯ. ಈ ನಿಟ್ಟಿನಲ್ಲಿ ಶಾಂತಿನಗರದ ಬಿಜಿವಿಎಸ್ ಬಾಲವಿಜ್ಞಾನಿ ಚಟುವಟಿಕೆಯು ಹೆಚ್ಚು ಹೆಚ್ಚು ವಿಜ್ಞಾನಿಗಳನ್ನು ಹುಟ್ಟು ಹಾಕಲಿ ಎಂದರು.
ಹೊಸ ವರ್ಷಾಚರಣೆಯ ಚಟುವಟಿಕೆಗಳನ್ನು ಉದ್ಘಾಟಿಸಿದ ಆಕಾಶವಾಣಿಯ ಉದ್ಘೋಷಕ ಹನುಮಂತನಾಯಕ್ ಮಾತನಾಡಿ, ಬಿಜಿವಿಎಸ್ ಶಾಂತಿನಗರ ಘಟಕವು ಹೊಸ ವರ್ಷಾಚರಣೆಗೆ ಭಾರತದ ಸಾಂಸ್ಕೃತಿಕ ಸಂಭ್ರಮದ ಮೆರುಗನ್ನು ನೀಡಿ ಹಾಸನ ಜಿಲ್ಲೆಯ ಇತರೆ ಜನ ವೈಜ್ಞಾನಿಕವಾಗಿ ಯೋಚಿಸುವಂತೆ ಮಾಡಿದೆ ಎಂದರು.
ನಂತರ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ಹಾಗೂ ಆಟಗಳನ್ನು ಏರ್ಪಡಿಸಲಾಗಿತ್ತು.
ಪದ್ಮಾ ಮಂಜುನಾಥ, ಎನ್.ಕುಮಾರ್, ದೇವರಾಜೇಗೌಡ, ಜಯಪ್ರಕಾಶ್, ಕವಿತ, ವೇದಶ್ರಿ, ಪದ್ಮಾವತಿ, ರಕ್ಷಿತ್, ದೀಪಕ್, ಚಿತ್ರ ಕಾರ್ಯಕ್ರಮ ನಡೆಸಿಕೊಟ್ಟರು. ಡಿವೈಎಫ್ಐ ಕಾರ್ಯಕರ್ತರು ಸ್ವಯಂಸೇವಕರಾಗಿ ಸಭಾಂಗಣ ನಿರ್ಮಾಣ, ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಟ್ಟರು. ಅನ್ಶಾದ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

