ಹಾಸನ

ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ

Published On :

ಕ.ಪ್ರ. ವಾರ್ತೆ   ಅರಸೀಕೆರೆ   ಜ. 2
ತಾಲ್ಲೂಕಿನ ನರಸೀಪುರ ಗ್ರಾಪಂ ವ್ಯಾಪ್ತಿಯಲ್ಲಿ 13 ಸಮುದಾಯ ಭವನಗಳನ್ನು ನಿರ್ಮಿಸದೇ ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಅವರನ್ನು ಹೆದರಿಸಿ ಶಾಸಕರು ಬಿಲ್ಲನ್ನು ಪಡೆದಿದ್ದಾರೆಂದು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣ್ಣನಾಯಕನಹಳ್ಳಿ ವಿಜಯಕುಮಾರ್ ಮತ್ತು ಇನ್ನಿತರರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡರು ಸಮುದಾಯ ಭವನಗಳ ಭಾವಚಿತ್ರ ಹಾಗೂ ಇನ್ನಿತರ ದಾಖಲೆಗಳನ್ನು ಪ್ರದರ್ಶಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಒಂದಾದರೂ ಆರೋಪವನ್ನು ಸಾಬೀತುಪಡಿಸಿದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ.
ತಮ್ಮ ಅವಯಲ್ಲಿ ಸಾಕಷ್ಟು  ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದಿದ್ದು ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರು. 121 ಕೋಟಿ ವೆಚ್ಚದಲ್ಲಿ  ಹೇಮಾವತಿ ಮೂಲದ ಘನ್ನಿಘಡದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸುವ  ಯೋಜನೆ ಮುಕ್ತಾಯದ ಹಂತದಲ್ಲಿದ್ದು ಏಪ್ರಿಲ್ ವೇಳೆಗೆ ಪಟ್ಟಣದ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ದೊರೆಯಲಿದೆ ಎಂದರು.
ಆರೋಪ: ಅಲ್ಲದೇ, ಪ್ಲೋರೈಡ್ ಮಿಶ್ರಿತ  ನೀರನ್ನು ಕುಡಿದು ಅನೇಕ ರೋಗಗಳಿಗೆ  ತುತ್ತಾಗುತ್ತಿದ್ದ 477 ಗ್ರಾಮಗಳಿಗೆ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿ ಸರ್ವೆ ಕಾರ್ಯ ಭರದಿಂದ ಸಾಗಿದೆ. ಈ ಹಿಂದೆ ತಾಲ್ಲೂಕಿಗೆ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಅವಯಲ್ಲಿ ಅದನ್ನು ಅನುಷ್ಠಾನಕ್ಕೆ ತರುವ ಮೂಲಕ ಜನಹಿತಕ್ಕಾಗಿ ತಾವು ದುಡಿಯುತ್ತಿದ್ದು ಇದನ್ನು ಸಹಿಸದ ಕೆಲವರು ದಿನನಿತ್ಯ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಕ್ಷೇತ್ರದ ಜನರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಜನರ ಆಶೀರ್ವಾದವಿದೆ: ತಾವು ಶಾಸಕರಾಗುವುದಕ್ಕೆ ಮುನ್ನ ಅಭಿವೃದ್ಧಿಯಲ್ಲಿ ಅರಸೀಕೆರೆ ಕ್ಷೇತ್ರ ಜಿಲ್ಲೆಯಲ್ಲೇ ಹಿಂದುಳಿದಿದ್ದು ತಾವು ಶಾಸಕರಾದ ನಂತರ ಹಂತ ಹಂತವಾಗಿ ಅಭಿವೃದ್ಧಿಪಡಿಸಿ, ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನ, ಹಾಗೂ ಪಟ್ಟಣದಲ್ಲೂ ಶುಭಕಾರ್ಯಗಳನ್ನು  ನಡೆಸಲು ಅಗತ್ಯವಿರುವ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಿದ್ದೇನೆ.  ಇದನ್ನು  ಗಣನೆಗೆ ತೆಗೆದುಕೊಂಡ ಮತದಾರರು ಕ್ಷೇತ್ರದ ಇತಿಹಾಸದಲ್ಲಿ ಎರಡನೇ ಬಾರಿಗೆ ತಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ತಿರುಗೇಟು: ರೈತರ ಸಂಕಷ್ಟಗಳಿಗೆ ನೇರವಾಗಿ, ಸ್ಪಂದಿಸಿ ತಾಲ್ಲೂಕಿನಲ್ಲಿ ಉಂಟಾಗಿರುವ ಕುಡಿಯುವ  ನೀರಿನ ಸಮಸ್ಯೆ ಅಂತರ್ಜಲ ಮಟ್ಟ ಕುಸಿತದಿಂದ ಸಂಕಷ್ಟಕ್ಕೀಡಾಗಿರುವ ತಾಲ್ಲೂಕಿನ ರೈತರ ಹಿತರಕ್ಷಣೆಗಾಗಿ ನೀರಾವರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ನಾನಾ ಜನಾಂಗಗಳಿಗೆ ಗುಂಪುಗಳಿಗೆ ತಾಂಡಗಳಿಗೆ, ಎಸ್ಸಿ ಎಸ್ಟಿ ಕಾಲೋನಿಗಳಿಗೆ ತಮ್ಮ ನಿಧಿಯಿಂದ ಸಾಕಷ್ಟು ಹಣವನ್ನು ಕೊಟ್ಟು ಪ್ರಗತಿಗೆ ದುಡಿಯುತ್ತಿರುವ ವ್ಯಕ್ತಿ ಮೇಲೆ, ಸುಮ್ಮಸುಮ್ಮನೆ ಆಪಾದನೆ ಮಾಡುವುದು ಸರಿಯಲ್ಲ. ಈ ಆಪಾದನೆಯಲ್ಲಿ  ಹುರುಳಿಲ್ಲ. ತೆರೆಯ ಮರೆಯಲ್ಲಿ ಇಂತಹ ಕೆಲಸವನ್ನು ಮಾಡುವುದು ಬಿಟ್ಟು ಜನರ ಬಳಿ ಹೋಗಿ ಸಂಕಷ್ಟವನ್ನು ವಿಚಾರಿಸಿರಿ ಎಂದು ಪರೋಕ್ಷವಾಗಿ ಮಾಜಿ ಸಚಿವರಿಗೆ ತಿರುಗೇಟು ನೀಡಿದರು.
ಮನವಿ: ಇಂಥ ಸುಳ್ಳ ಆರೋಪಗಳಿಂದ ತಾವು ಮಾನಸಿಕವಾಗಿ ನೊಂದಿದ್ದು, ಸಮುದಾಯ ಭವನಗಳ ನಿರ್ಮಾಣದಲ್ಲಿ ಯಾವುದೇ ಲೋಪ ದೋಷಗಳು ಉಂಟಾಗಿದ್ದರೂ, ಅದು ಗ್ರಾಮದ ಜನತೆಗೆ ಮುಕ್ತವಾಗಿ ತಿಳಿಯಲಿ ಎಂಬ ಕಾರಣಕ್ಕೆ ತಾವೇ ಸ್ವತಃ ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಕಾರಿಗಳಿಗೆ ಪತ್ರವನ್ನು ಬರೆದಿದ್ದೇನೆ.  ತಮ್ಮ ಮನವಿಗೆ ಅಕಾರಿಗಳು ಸ್ಪಂದಿಸಿ, ಸಮಗ್ರ ತನಿಖೆ ನಡೆಸಲು ಅಕಾರಿಗಳು ಮತ್ತು ವಾರ್ತಾ ಇಲಾಖೆ ಪ್ರತಿನಿಗಳು, ಪತ್ರಿಕಾ ಮಾದ್ಯಮ, ದೃಶ್ಯ ಮಾಧ್ಯಮಗಳೊಂದಿಗೆ ಜ. 3ರಂದು ಕ್ಷೇತ್ರದದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಆ ಸಮಯದಲ್ಲಿ ಆರೋಪ ಮಾಡುವರು ಅಧಿಕಾರಿಗಳ ತಂಡದ ಮುಂದೆ ಬಂದು ಸಂಪೂರ್ಣ ಮಾಹಿತಿ ನೀಡಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ಮೋಹನ್ ಕುಮಾರ್, ಸತೀಶ್, ಬಾಬು, ಮಾಡಾಳು ಚಂದ್ರಶೇಖರ್, ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.