ಹಾಸನ

ಮುನ್ನಡೆ ಸಾಧಿಸಲು ಸಾಕ್ಷರತೆ ಹೆಚ್ಚಬೇಕು

Published On :

ಕ.ಪ್ರ.ವಾರ್ತೆ  ಬೇಲೂರು ಜ. 2
ಜಾಗತಿಕ ಮಟ್ಟದಲ್ಲಿ ಭಾರತ ಮುನ್ನಡೆ ಸಾಧಿಸಲು ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕೆಂದು ಶಾಸಕ ವೈ.ಎನ್. ರುದ್ರೇಶಗೌಡ ಹೇಳಿದರು.
ಪಟ್ಟಣದ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಹೊಯ್ಸಳ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುತ್ತಾರೆ. ಭಾರತದಲ್ಲಿ ಸರ್ಕಾರಿ ನೌಕರಿಗೋಸ್ಕರ ಎಂಬಂತೆ ಶಿಕ್ಷಣ ಪಡೆಯುತ್ತಿದ್ದು ಉನ್ನತ ಸ್ಥಾನಕ್ಕೇರಲು ತೊಡಕಾಗಿದೆ ಎಂದು ತಿಳಿಸಿದರು.
ಮನವಿ: ತಾಲೂಕು ಪಂಚಾಯ್ತಿ  ಸದಸ್ಯ ಪವರ್ತಯ್ಯ ಮಾತನಾಡಿ, ಪೋಷಕ ವರ್ಗ ಮಕ್ಕಳಿಗೆ ಕೇವಲ ವಿಜ್ಞಾನ ಮತ್ತು ಎಂಜಿನಿಯರ್ ಹುದ್ದೆಗಳ ಆಕರ್ಷಣೆ ತೋರಿಸುತ್ತಿದ್ದಾರೆ.
ಈ ಹುದ್ದೆಗಳು ಎಷ್ಟು ಮುಖ್ಯವೋ ಅಷ್ಟೇ ದೇಶದ ರಕ್ಷಣೆ ಹೊಣೆ ಹೊತ್ತಿರುವ ಸೈನಿಕ ಹುದ್ದೆಯತ್ತಲೂ ಯುವಕರು ಗಮನ ಹರಿಸಬೇಕು. ಈ ಬಗ್ಗೆ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಗಮನ ಸೆಳೆಯಬೇಕು. ವೃತ್ತಿ ಶಿಕ್ಷಣದ ಮಹತ್ವ ಮತ್ತು ಪರಿಚಯ ಪಠ್ಯದಲ್ಲಿ ಅಳವಡಿಸಿ, ಮಕ್ಕಳು ತಮ್ಮ ಉತ್ತಮ ಭವಿಷ್ಯ ರೂಪಿಸಿಲು ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಬಿ.ಎಂ. ರವಿಕುಮಾರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಬಹುಪಾಲು ಅನುದಾನ ನೀಡಿದ್ದರೂ ಅದರ ಸಮರ್ಪಕ ಬಳಕೆ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೇ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಇಳಿಮುಖವಾಗಲು ಹಳ್ಳಿಗರು ಪಟ್ಟಣದತ್ತ ವಲಸೆ ಬರುತ್ತಿರುವುದೇ ಕಾರಣ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಬಿ. ಸುಂದ್ರೇಶ್, ಕಾಲೇಜು ಪ್ರಾಶುಂಪಾಲ ಧರ್ಮೇಗೌಡ, ಮು.ಶಿ.ಹನುಮೇಗೌಡ, ಎಎಸ್‌ಐ ಚಂದ್ರಪ್ಪ, ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.