ಸುದ್ದಿ ಸಂಕ್ಷೇಪ
ತರಬೇತಿ ಶಿಬಿರ
ಹಾಸನ: ವಿಶೇಷ ಯೋಜನೆ ಅಡಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ 10 ದಿನಗಳ ಯುವ ಚೇತನ ಮತ್ತು ಯುವ ಪ್ರೇರಣಾ ಉಚಿತ ತರಬೇತಿ ಶಿಬಿರವನ್ನು ಜ.18ರಿಂದ ಜ. 27ರವರೆಗೆ ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ಈ ತರಬೇತಿ ಶಿಬಿರದಲ್ಲಿ 15 ರಿಂದ 35 ವರ್ಷ ವಯಸ್ಸಿನ ಪರಿಶಿಷ್ಟ ಪಂಗಡದ ಯುವಕ, ಯುವತಿಯರು ಮಾತ್ರ ಭಾಗವಹಿಸಲು ಅರ್ಹರು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 246056 ಸಂಪರ್ಕಿಸಲು ಕೋರಲಾಗಿದೆ.
ಜಲ್ಲಿ ಸಮಸ್ಯೆ
ಸಕಲೇಶಪುರ: ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಜಲ್ಲಿ ಸಮಸ್ಯೆ ತಲೆದೋರಿದೆ. ಹೌದು, ಸರ್ಕಾರ ಜಲ್ಲಿ ಕ್ರಷರ್ಗೆ ನಿಷೇಧ ಹೇರಿರುವ ಪರಿಣಾಮ ಜಲ್ಲಿ ಅಭಾವ ತಲೆದೋರಿದೆ. ಇದುವರೆಗೆ ಹಾಸನ ತಾಲೂಕಿನ ಕಟ್ಟಾಯ, ಆಲೂರು ತಾಲೂಕಿನ ಮಗ್ಗೆ, ಚಿನ್ನಹಳ್ಳಿ ಭಾಗದಿಂದ ತಾಲೂಕಿಗೆ ಬರುತ್ತಿದ್ದ ಜಲ್ಲಿ ಸ್ಥಗಿತಗೊಂಡಿದ್ದು, ಈಗ ಬೇಲೂರು ತಾಲೂಕಿನ ಶಾಲವಾರ ಕೋರೆಯಿಂದ ತಾಲೂಕಿಗೆ ಜಲ್ಲಿ ಸರಬರಾಜಾಗುತ್ತಿದ್ದು ಇಲ್ಲಿನ ಜಲ್ಲಿ ಅತಿ ದುಬಾರಿಯಾಗಿದೆ. 40 ಎಂ.ಎಂ ಜಲ್ಲಿಯ ಒಂದು ಅಡಿಗೆ ಸ್ಥಳದಲ್ಲೇ ರು. 25 ಆಗಿದೆ. ಇದುವರೆಗೆ ಬೇರೆಡೆಯಿಂದ ಇಲ್ಲಿಗೆ ಸರಬರಾಜಾಗುತ್ತಿದ್ದ ಜಲ್ಲಿಗೆ ರು. 14 ರಿಂದ 16 ಇದ್ದರೆ ಬೇರೆ ಎಲ್ಲಾ ಕೋರೆಗಳು ಸ್ಥಗಿತಗೊಂಡಿರುವ ಪರಿಣಾಮ ಜಲ್ಲಿ ಸಮಸ್ಯೆ ತಲೆದೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

