ಹಾಸನ

'ಗ್ರಾಮ ಸಹಾಯಕರನ್ನು ಡಿ ದರ್ಜೆಗೆ ಸೇರಿಸಿ'

Published On :

ಕ.ಪ್ರ. ವಾರ್ತ್ಣೆ ಅರಸೀಕೆರೆ  ಜ.3
ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು ಡಿ ದರ್ಜೆಯ ನೌಕರರನ್ನಾಗಿ ಸರ್ಕಾರ ಆದೇಶ ಹೊರಡಿಸಬೇಕೆಂದು ಅಖಿಲ ಕರ್ನಾಟಕ ಗ್ರಾಮ ಸಹಾಯಕ ಸಂಘದ ಕಾನೂನು ಸಲಹೆಗಾರ ಪಾವಗಡ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 10,450 ಗ್ರಾಮ ಸಹಾಯಕರಿದ್ದು 34 ವರ್ಷಗಳಿಂದ ಅತ್ಯುತ್ತಮ ಸೇವೆ ಮಾಡುತ್ತಾ ಬಂದರೂ, ಅವರಿಗೆ ಉದ್ಯೋಗದ ಭದ್ರತೆ ಸಿಕ್ಕಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮಾನ್ಯ ಯಡಿಯೂರಪ್ಪನವರ ಮಂತ್ರಿಮಂಡಲದಲ್ಲಿ ಮಾಜಿ ಕಂದಾಯ ಸಚಿವ  ಕೆ.ಎಸ್. ಈಶ್ವರಪ್ಪ ಅವರು, ಇವರ ವೇತನವನ್ನು 3500 ರು.ನಿಂದ ರು. 7000 ರು.ಗೆ ಹೆಚ್ಚಿಸಿದ್ದರು.
ಭರವಸೆ ಈಡೇರಿಲ್ಲ: ಡಿ ದರ್ಜೆ ನೌಕರರನ್ನಾಗಿ ಮಾಡಲು ಬೆಳಗಾವಿಯಲ್ಲಿ ನಡೆದ ಸುವರ್ಣ ಸೌಧಕ್ಕೆ ನಂದಘಡದ ಸಂಗೊಳ್ಳಿ ರಾಯಣ್ಣನವರ ಸಮಾಧಿಯಿಂದ ಬೆಳಗಾವಿಯವರೆಗೂ 53 ಕಿ.ಮೀ. ಪಾದಯಾತ್ರೆ ನಡೆಸಲಾಗಿದೆ. ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಮ್ಮ ಬೇಡಿಕೆಯನ್ನು ಈಡೇರಿಸುವೆ ಎಂದು ಭರವಸೆ ನೀಡಿದ್ದರಿಂದ ತಾತ್ಕಾಲಿಕವಾಗಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿತ್ತು ಎಂದು ಹೇಳಿದ್ದರಾದರೂ, ಯಾವುದೇ ರೀತಿಯ ಪ್ರಗತಿ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ತಪ್ಪಿದರೆ ಹೋರಾಟ: ಚತ್ತೀಸ್‌ಗಢ, ಆಂಧ್ರ, ಕೇರಳ, ತಮಿಳುನಾಡು ಈಗಾಗಲೇ ಗ್ರಾಮ ಸಹಾಯಕರನ್ನು 309ರ ಅಡಿಯಲ್ಲಿ ವಿಲೇಜ್ ಆಫೀಸರ್ ಎಂದು ಪರಿಗಣಿಸಿ ಉದ್ಯೋಗ ಭದ್ರತೆಯನ್ನು ನೀಡಿದೆ. 24 ಗಂಟೆಗಳು ಕೆಲಸ ಮಾಡಿಸಿಕೊಳ್ಳುವ ಗ್ರಾಮ ಸಹಾಯಕರಿಗೆ ಕೆ.ಎ.ಟಿ.ಪ್ರಕಾರ ಡಿ ಗ್ರೂಪಿನ ನೌಕರರೆಂದು ರಾಜ್ಯಪಾಲರ ವಿಮೋಚನಾ ಅಡಿಯಲ್ಲಿ ನಮ್ಮನ್ನು ಅಂಗೀಕರಿಸಬೇಕಾಗಿ ಈ ಮೂಲಕ ಸರ್ಕಾರವನ್ನು ಮುಂಬರುವ ಬಜೆಟ್ ಅಧೀವೇಶನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ದಯೆ ತೋರಿಸುವರೆಂದು ಈ ಮೂಲಕ ನಂಬಿರುತ್ತೇವೆ. ಇದರಲ್ಲಿ ವಿಳಂಬವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮಂಜಪ್ಪ, ಕಾರ್ಯದರ್ಶಿ ಹಾರನಹಳ್ಳಿ ಸಿದ್ದಪ್ಪ, ಕೊಟ್ರೇಶ್, ಚಂದ್ರಶೇಖರ್, ಗುಂಡ್ಕಾನಹಳ್ಳಿ ಉಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.