10ರಿಂದ ಬೈಲಹಳ್ಳಿ ಬ್ರಹ್ಮೋತ್ಸವ
ಹಾಸನ: ಇಲ್ಲಿನ ಇತಿಹಾಸ ಪ್ರಸಿದ್ಧ ಬೈಲಹಳ್ಳಿ ಭೂವೈಕುಂಠ ಶ್ರೀಲಕ್ಷ್ಮೀಜನಾರ್ದನ ಸ್ವಾಮಿಯ ಬ್ರಹ್ಮೋತ್ಸವ ಜ.10ರಿಂದ 27ರವರೆಗೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವರು ಎಂದು ಶ್ರೀರಾಮ ಸೇವಾ ಸಮಿತಿ ಟ್ರಸ್ಟ್ ಖಜಾಂಚಿ ಜನಾರ್ಧನ್ ಅಯ್ಯಂಗಾರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 10ರಂದು ಸ್ವಾಮಿಗೆ ಮಹಾಭಿಷೇಕ, ದೇವತಾ ಪ್ರಾರ್ಥನೆ, ಮೃತ್ತಿಕಾ ಸಂಗ್ರಹಣ ಪೂರ್ವಕ ಅಂಕುರಾರ್ಪಣ, ಪುಷ್ಟ ಮಂಟಪೋತ್ಸವ ಮಹಾಮಂಗಳಾರತಿ, ಜ. 11ರಂದು ನಿತ್ಯೋತ್ಸವ, ದೇವತಾಹ್ವಾನ, ಧ್ವಜಾರೋಹಣ, ಶೇಷವಾಹನೋತ್ಸವ, ಪ್ರಹ್ಲಾದ ಪರಿಪಾಲನೋತ್ಸವ, ಪುರಾಣವಚನ ಪ್ರಭಾವಳಿ ಗರುಡೋತ್ಸವ ನಡೆಯಲಿದೆ ಎಂದು ಹೇಳಿದರು.
3ನೇ ದಿನದ ಕಾರ್ಯಕ್ರಮ: ಜ.12ರಂದು ಲಕ್ಷ್ಮೀಜನಾರ್ದನ ಸ್ವಾಮಿಗೆ ಹಂಸವಾಹನೋತ್ಸವ, ವೇದ ಪಾರಾಯಣ ಮತ್ತು ದಿವ್ಯ ಪ್ರಬಂಧಸೇವೆ ಭಾಗವತ ತದಿಯಾರಾಧನೆ, ಕಲ್ಯಾಣೋತ್ಸವ, ದಿವ್ಯ ಪುಷ್ಪಾಲಂಕೃತ ಸಂಜನಗರುಡೋತ್ಸವ, ಗಜವಾನೋತ್ಸವ ವಿಶೇಷವಾಗಿ ನಡೆಯಲಿದೆ. ಜ.13ರಂದು ಸೂರ್ಯಮಂಡಲೋತ್ಸವ, ವೇದ ಪಾರಾಯಣ ಮತ್ತು ದಿವ್ಯ ಪ್ರಬಂಧ ಸೇವೆ, ಶಾತ್ತುಮೊರೆ ಸೇವೆ, ಶ್ರೀಕೃಷ್ಣಗಂಧೋತ್ಸವ, ಪುಷ್ಪಾಲಂಕೃತ ದಿವ್ಯ ರಥಾರೋಹಣ ನಡೆಯಲಿದೆ ಎಂದರು.
4ನೇ ದಿನದ ಕಾರ್ಯಕ್ರಮ: ಜ.14 ರಂದು ನಿತ್ಯೋತ್ಸವ, ಜ.15 ರಂದು ಅಶ್ವವಾಹನೋತ್ಸವ, ಪುಷ್ಪಾಲಂಕೃತ ದಿವ್ಯ ತೆಪ್ಪೋತ್ಸವ, ಜ. 16ರಂದು ಜನಾರ್ದನ ಸ್ವಾಮಿಗೆ ಕಲ್ಯಾಣೋತ್ಸವ, ಪುಷ್ಪಾಲಂಕೃತ ದಿವ್ಯಗರುಡೋತ್ಸವ, ಪುಷ್ಪಯಾಗೋತ್ಸವ ವಿಶೇಷವಾಗಿದೆ.
ಜ.17 ರಂದು ಹರಗೆ ಗರುಡೋತ್ಸವ, ಪುಷ್ಪಾಲಂಕೃತ ದಿವ್ಯಗರುಡೋತ್ಸವ, ಜ.18 ರಂದು ಹರಕೆಗರುಡೋತ್ಸವ, ಮಹಾಮಂಗಳಾರತಿ, ಪುಷ್ಪಾಲಂಕೃತ ದಿವ್ಯ ಗರುಡೋತ್ಸವ ನಡೆಯಲಿದೆ. ಜ. 27ರವರಗೆ ಹರಗೆ ಗರುಡೋತ್ಸವ, ಪುಷ್ಪಾಲಂಕೃತ ದಿವ್ಯ ಗರುಡೋತ್ಸವ ನಡೆಯಲಿದೆ ಎಂದರು. ಈ ಮಹೋತ್ಸವದಲ್ಲಿ ಸುಮಾರು 1 ಲಕ್ಷದವರೆಗೆ ಭಕ್ತಾಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ಸ್ವಾತಂತ್ರ್ಯ ಹೋರಾಟಗಾರ ವೆಂಕಟಸುಬ್ಬಯ್ಯ (ಕಸ್ತೂರಿ), ಟ್ರಸ್ಟ್‌ನ ಸಹ ಕಾರ್ಯದರ್ಶಿ ರಾಮಪ್ರಸಾದ್, ಕಾರ್ಯದರ್ಶಿ ಸುರೇಶ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

