'ಶಾಲೆಗಳನ್ನು ಆಕರ್ಷಣೀಯವಾಗಿಸಲು ಶಿಕ್ಷಕರು ಶ್ರಮಿಸಬೇಕು'
ಜಾವಗಲ್: ಶಾಲೆಗಳ ಭೌತಿಕ ಸೌಂದರ್ಯವನ್ನು ಆಕರ್ಷಣೀಯವಾಗಿಡಲು ಶಿಕ್ಷಕರು ಶ್ರಮಿಸಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜ್ ಕರೆ ನೀಡಿದರು.
ಜಾವಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾವಗಲ್ ಹೋಬಳಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶಾಲೆಯ ಮೂಲಭೂತ ಸೌಕರ್ಯಗಳು, ಸದ್ಬಳಕೆ, ನಿರ್ಹಹಣೆ ಮಾಡುವ ಬಗ್ಗೆ ವಿವರಿಸಿದರು.
ಮುಖ್ಯವಾಗಿ ಶೈಕ್ಷಣಿವಾಗಿ ಮಕ್ಕಳ ಕಲಿಕೆ ಯಾವ ಮಟ್ಟದಲ್ಲಿ ಸಾಗಿದೆ ಎಂಬುದರ ಬಗ್ಗೆ ಚರ್ಚಿಸಿ ಉಳಿದ 3ತಿಂಗಳ ಅವಧಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಿದರು. ಶಿಕ್ಷಕರು ರಜೆ ಮತ್ತು ತರಬೇತಿ ಅವಧಿಯಲ್ಲಿದ್ದಾಗ ಉಳಿದ ಶಿಕ್ಷಕರು ಸಾಮಥ್ರ್ಯಾಧಾರಿತ ಬಹುವರ್ಗ ಬೋಧನೆ ಮಾಡುವ ಬಗ್ಗೆ ಮತ್ತು ತರಗತಿ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಹೋಬಳಿ ಶಿಕ್ಷಣ ಸಂಯೋಜಕ ಮತ್ತು ಹಾಜರಾತಿ ಅಧಿಕಾರಿ ಯೋಗೀಶ್ ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕೆಂದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ಜೆ.ಆರ್.ಗಂಗಾಧರ ಶೆಟ್ಟಿ, ಎನ್.ಜಿ.ಒ ನಿರ್ದೇಶಕ ಮಹೇಶ್, ಇಸಿಓ ರವಿಕುಮಾರ್ ಮಾತನಾಡಿದರು. ವಿಷ್ಣುವರ್ಧನ್, ಚಂದ್ರಪ್ಪ, ಶಿವಪ್ರಕಾಶ್, ರಮೇಶ್ ನಾಯ್ಕ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

