ಹಾಸನ

ಸುದ್ದಿ ಸಂಕ್ಷೇಪ

Published On :

ಛಾಯಾಚಿತ್ರ ಪ್ರದರ್ಶನ
ಹಾಸನ: ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ಭ್‌ವನದಲ್ಲಿ ಏರ್ಪಡಿಸಲಾಗಿದ್ದ ಛಾಯಾಚಿತ್ರವನ್ನು ಸಾರ್ವಜನಿಕರು ವೀಕ್ಷಿಸಿದರು. ನಾನಾ ಸ್ಟುಡಿಯೋ ಛಾಯಾಗ್ರಹಕರು, ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ ಸುಂದರ ಚಿತ್ರವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಶನಿವಾರದಿಂದ ಭಾನುವಾರದವರೆಗೂ ಸಾರ್ವಜನಿಕರ ಪ್ರದರ್ಶನಕ್ಕೆ ಛಾಯಾಚಿತ್ರವನ್ನು ಇಡಲಾಗಿದೆ. ಭಾನುವಾರ ಮಧ್ಯಾಹ್ನ ಉತ್ತಮ ಛಾಯಾಚಿತ್ರಕ್ಕೆ ಬಹುಮಾನ ವಿತರಿಸಲಾಗುವುದು.
'ಕನ್ನಡಕ್ಕೆ ಎಲ್ಲೆಡೆ ಆದ್ಯತೆ ಇರಲಿ'
ಎಚ್.ಡಿ. ಕೋಟೆ: ಕನ್ನಡ ಭಾಷೆಯನ್ನು ಉತ್ತಮವಾಗಿ ಕಲಿಯುವ ಜತೆಗೆ ಇತರೆ ಭಾಷೆಗಳನ್ನು ಕಲಿಯಬೇಕು. ಆದರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಡಿ.ಆರ್. ಮಹೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಚಿಕ್ಕೆರೆಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಸರ್ಕಾರದಿಂದ ಉಚಿವಾಗಿ ನೀಡುವ ಸೈಕಲ್ ಬಳಸಿಕೊಂಡು ಶಾಲೆಗೆ ತಪ್ಪದೆ ಹಾಜರಾಗಬೇಕು. ಎಂತಹ ಪ್ರತಿಭಾವಂತನಾದರು ಸಹ ತನ್ನ ಮಾತೃಭಾಷೆಯಲ್ಲಿ ಉತ್ತಮ ಪರಿಣಿತಿಯನ್ನು ಹೊಂದಿದ ನಂತರ ಇತರೆ ಭಾಷೆಗಳನ್ನು ಕಲಿಯಬೇಕು ಎಂದರು. ಕಸ್ತೂರಿ ಸಂಸ್ಥೆಯ ಸತೀಶ್, ಬಿಆರ್‌ಪಿ ಗಿರೀಶ್‌ಮೂರ್ತಿ, ಸಿಆರ್‌ಪಿ ಸೋಮಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಮಂಜೇಗೌಡ, ಜಗದೀಶ್, ಶಾಲಾ ಮುಖ್ಯೋಪಾಧ್ಯಾಯ ಸಿ.ಎಸ್. ಕುಮಾರಸ್ವಾಮಿ ಇದ್ದರು.
ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ
ಎಚ್.ಡಿ. ಕೋಟೆ: ಎಚ್.ಡಿ. ಕೋಟೆ ತಾಲೂಕಿನ ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ಸೈಕಲ್ ವಿತರಿಸಿದರು. ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಉಚಿತ ಪುಸ್ತಕ, ಬಿಸಿಯೂಟ ಯೋಜನೆ, ಕ್ಷೀರಭಾಗ್ಯ, ಬೈಸಿಕಲ್ ನೀಡುವಂತಹ ಮಹತ್ತರವಾದ ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಮುಳ್ಳೂರು ಗ್ರಾಪಂ ಅಧ್ಯಕ್ಷೆ ಶಿವಮ್ಮ, ಸೋಮಣ್ಣ, ಎಸ್‌ಡಿಎಂಸಿ ಅಧ್ಯಕ್ಷೆ ಸುಮತಿ ಸರಗೂರಯ್ಯ, ಪುಟ್ಟಸ್ವಾಮಿ, ಮಹದೇವಮೂರ್ತಿ, ರಾಜೇಂದ್ರನ್, ದೊಡ್ಡನಾಯಕ, ಶಿವರಾಜಾಚಾರ್, ಚಿಕ್ಕನಾಯಕ, ಗ್ರಾಪಂ ಸದಸ್ಯರಾದ ಗೌರಮ್ಮ, ಪುಟ್ಟಮ್ಮ, ಪಿಡಿಒ ಮಹೇಶ್, ಸಿಆರ್‌ಪಿ ಸುರೇಶ್, ಮುಖ್ಯ ಶಿಕ್ಷಕರು ಇದ್ದರು.

ರಸ್ತೆ ಡಿವೈಡರ್‌ಗೆ ಡಿಕ್ಕಿ: ಟಿಂಬರ್ ಲಾರಿ ಪಲ್ಟಿ
ಹಾಸನ: ನಗರದ ಸಮೀಪ ಬಿಟ್ಟಗೋಡನಹಳ್ಳಿ ವೃತ್ತದಲ್ಲಿ ಟಿಂಬರ್ ಲಾರಿಯೊಂದು ಪಲ್ಟಿಯಾಗಿರುವ ಘಟನೆ ತಡರಾತ್ರಿ ಸಂಭವಿಸಿದೆ. ಬೈಪಾಸ್ ರಸ್ತೆಯಲ್ಲಿ ಮರಗಳ ತುಂಬಿದ ಲಾರಿಯೊಂದು ಬರುತ್ತಿದಾಗ ಬಿಟ್ಟಗೋಡನಹಳ್ಳಿ ವೃತ್ತದಲ್ಲಿ ಗುಂಡಿಯೊಂದು ಇದ್ದುದರಿಂದ ಅದನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿದೆ. ಶನಿವಾರ ಬೆಳಗ್ಗೆ ಲಾರಿಯಲ್ಲಿ ತುಂಬಲಾಗಿದ್ದ ಮರಗಳನ್ನು ತೆರವು ಮಾಡಿ, ಲಾರಿಯನ್ನು ಮೇಲೆತ್ತಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.