ಹಾಸನ

ನಿರ್ಲಕ್ಷ್ಯದಿಂದ ಹಾಳುಕೊಂಪೆಯಾದ ಜಾಗ

Published On :

ಬೇಲೂರು:ಪ್ರವಾಸೋದ್ಯಮ ಇಲಾಖೆ ಸಾರ್ವಜನಿಕ ಅನುಕೂಲಕ್ಕಾಗಿ ಪಡೆದಿರುವ ಜಾಗವನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯ ವಹಿಸಿದ್ದು ಹಾಳು ಕೊಂಪೆಯಾಗಿದೆಯಲ್ಲದೆ, ಅಕ್ರಮ ಅನೈತಿಕ ತಾಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಹಾಗೂ ಪುರಸಭೆ ಸದಸ್ಯ ಬಿ.ಎಲ್. ಧರ್ಮೇಗೌಡ ಕಿಡಿಕಾರಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ವರ್ಷದ ಹಿಂದೆ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಹಿಂಭಾಗ 8 ಜನರ ನಿವೇಶನನಗಳನ್ನು ಸರ್ಕಾರ ವಶ ಮಾಡಿಕೊಂಡು, ಈ ಪ್ರದೇಶದಲ್ಲಿ ಪ್ರವಾಸಿಗರ ಹಾಗೂ ಭಕ್ತರು ಅನುಕೂಲಕ್ಕಾಗಿ ಶೌಚಾಲಯ, ವಾಹನ ನಿಲುಗಡೆ,ಮತ್ತು ಯಾತ್ರಿನಿವಾಸ ಮಾಡುವ ಉದ್ದೇಶದಿಂದ ಜಾಗ ಪಡೆದಿತ್ತು.
ಡಿಸಿಗೆ ಒತ್ತಾಯ: ಅದರೆ, ಇಲ್ಲಿಯ ತನಕ 8 ಜನರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಮಾತ್ರ ಮುಂದಾಗಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ ಅವರು, 5 ಎಕರೆ ಸ್ಥಳದಲ್ಲಿ ಪ್ರತಿ ವರ್ಷ ಕೆಲ ಉನ್ನತ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದರೂ ಯಾವ ಪ್ರಯೋಜನವಾಗಿಲ್ಲ. ಈ ನಿವೇಶನನದಲ್ಲಿ ಸುಮಾರು 5 ಬಾರಿ ಲಕ್ಷಾಂತರ ರು. ಮೊತ್ತದ ಕಾಮಗಾರಿಗಳು ನಡೆಸಿ ಹಣ ಲೂಟಿ ಮಾಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲಾಗುವುದು ಎಂದರು.
ಮನವಿ: ಜಾಗ ಪಡೆಯುವ ಪ್ರವಾಸೋದ್ಯಮ ಇಲಾಖೆ, 8 ಫಲಾನುಭವಿಗಳಿಗೆ ಒಂದು ಅಡಿಗೆ ಕೇವಲ ರು. 197 ನಿಗದಿ ಮಾಡುವ ಮೂಲಕ ಫಲಾನುಭವಿಗಳಿಗೆ ಅನ್ಯಾಯವೆಸಗಿದೆ. ಇಂದಿನ ದರದಲ್ಲಿ ಪರಿಹಾರ ನೀಡಬೇಕು ಹಾಗೂ ದೇವಾಲಯ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ದೇವಾಸ್ಥಾನದ ಹಿಂಭಾಗದ ಖಾಲಿ ಜಾಗದಲ್ಲಿ ವಾಹನ ನಿಲುಗಡೆ, ಯಾತ್ರಿ ನಿವಾಸ, ಹೋಟೆಲ್, ಶೌಚಾಲಯಗಳ ಸೌಕರ್ಯಗಳನ್ನು ನಿರ್ಮಿಸಿಕೊಡಬೇಕು.
ಈ ಬಗ್ಗೆ ಪ್ರಸ್ತುತ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಂತ್ರಿಗಳಲ್ಲಿ ಮನವಿ ಮಾಡಲಾಗುತ್ತದೆ ಎಂದರು.
ತಕ್ಷಣ ಗಮನ ಹರಿಸಬೇಕು: ಅರ್ಚಕ ಬಿ.ಎನ್. ಸುಧೀಂದ್ರ ಮಾತನಾಡಿ, ಸರ್ಕಾರ ಈ ಹಿಂದೆ, ನಮ್ಮ ಮನೆ ಹಾಗೂ ನಿವೇಶನಗಳನ್ನು ಪ್ರವಾಸೋದ್ಯಮ ಇಲಾಖೆ ವಹಿಸಿಕೊಂಡು ನಮಗೆ ಇಲ್ಲಿಯ ತನಕ ಯಾವ ಪರಿಹಾರ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸಕಲೇಶಪುರ ಉಪವಿಭಾಗ ಅಧಿಕಾರಿಗಳು ಸಲ್ಲದ ಕಾರಣ ಹೇಳುತ್ತಾರೆ. ಇಲಾಖೆ, ದೇವಾಲಯದ ಹಿಂಭಾಗದಲ್ಲಿ ನಮ್ಮಗಳ ಮನೆ ಇದ್ದು, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ಯಾರ ಅಂಕೆ ಇಲ್ಲದೆ ನಡೆಯುತ್ತವೆ, ಸರ್ಕಾರ ತಕ್ಷಣ ನಮಗೆ ಇಂದಿನ ದರದ ಅನ್ವಯ ಪರಿಹಾರ ನೀಡಬೇಕು ಹಾಗೂ ಪುನರ್ವಸತಿ ಸೌಲಭ್ಯ ಮಾಡಬೇಕು. ನಮ್ಮ ಪುರಾತನರು ಉಳಿಸಿಕೊಂಡು ಬಂದ ಅಸ್ತಿ ಸಮಾಜಕ್ಕೆ ಉತ್ತಮ ಕೆಲಸಕ್ಕೆ ಉಪಯೋಗಲಿ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಗಮನ ಹರಿಸಬೇಕು ಎಂದರು. ಡಾ. ರಾಜಕುಮರ್ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥ ಶಂಕರ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ಸಂಬಂಧಪಟ್ಟ ಪರಿಹಾರ ನೀಡಬೇಕು, ಹಾಗೂ ಖಾಲಿ ಜಾಗದ ಅಭಿವೃದ್ಧಿಯಾಗಬೇಕು. ಇಲ್ಲವಾದರೆ, ಜಿಲ್ಲಾಡಳಿತ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಎಚ್.ಎಂ.ರಾಜು, ಶ್ರೀನಿವಾಸ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.