ಹಾಸನ

2,149 ಮತದಾರರ ಪೈಕಿ 2020 ಮತ ಚಲಾವಣೆ

Published On :

ಅರಸೀಕೆರೆ: ರಾಜ್ಯ ವಕ್ಕಲಿಗರ ಸಂಘಕ್ಕೆ ಜಿಲ್ಲೆಯಿಂದ 3 ಮಂದಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ತಾಲೂಕಿನ 2149 ಮಂದಿ ಮತದಾರರ ಪೈಕಿ 2020 ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.
ಪಟ್ಟಣದ ಸರ್ಕಾರಿ ಹಳೇಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳಿಗ್ಗೆ ಮತದಾನಕ್ಕಾಗಿ ತೆರದ 4 ಕೇಂದ್ರಗಳಲ್ಲಿ ಮತದಾರರು ಸರದಿಸಾಲಿನಲ್ಲಿ ನಿಂತು ಬಿರುಸಿನ ಮತದಾನ ಮಾಡಿದರು.
ಇದೇ ಪ್ರಥಮ ಬಾರಿಗೆ ತಾಲೂಕಿನಲ್ಲಿ ಬಾರಿ ಹಣಾಹಣಿಯಲ್ಲಿ ನಡೆದ ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ ಕುತೂಹಲವನ್ನು ಮೂಡಿಸುವಂತೆ ಮಾಡಿದ್ದು, ಚನ್ನರಾಯಪಟ್ಟಣ ಶಾಸಕ ಸಿ.ಎನ್. ಬಾಲಕೃಷ್ಣ ಸ್ಪರ್ಧೆಗೆ ಇಳಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕ್ಷೇತ್ರದ ಶಾಸಕ ಕೆ.ಎಸ್. ಶಿವಲಿಂಗೇಗೌಡ ಅವರ ಗೆಲುವಿಗೆ ಶ್ರಮವಹಿಸಿದ್ದು, ಮತದಾನದ ಕೇಂದ್ರದ ಮುಂದೆ ನಿಂತು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದ್ದು ವಿಶೇಷವಾಗಿತ್ತು.
ಅವರೊಂದಿಗೆ ಪುರಸಭಾಧ್ಯಕ್ಷ ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಎನ್.ಎಸ್.ಸಿದ್ದರಾಮಶೆಟ್ಟಿ, ಜಿ.ಟಿ. ಗಣೇಶ್, ಮುಖಂಡರಾದ ಯೋಗೀಶ್, ಧರ್ಮೇಶ್, ಗಿರೀಶ್, ಶಿವೇಗೌಡ, ಶಾಮಣ್ಣ, ಭೀಮೇಗೌಡ ಹಾಗೂ ಇನ್ನಿತರರು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದರು. ಸಹಕಾರ ಸಂಘದ ಅಧಿಕಾರಿ ಮಂಜುನಾಥ್ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.