ಹಾಸನ

49 ದಲಿತರಿಂದ ಬೌದ್ಧ ಧರ್ಮ ಸ್ವೀಕಾರ

Published On :

ಕನ್ನಡಪ್ರಭ ವಾರ್ತೆ, ಹಾಸನ. ಜ 5
ಇಲ್ಲಿನ ನಿಟ್ಟೂರಿನಲ್ಲಿ 49 ಮಂದಿ ದಲಿತರು ಭಾನುವಾರ ಬೌದ್ಧ ಧಮ್ಮ ದೀಕ್ಷೆಯನ್ನು ತೆಗೆದುಕೊಂಡರು. ತಾಲೂಕಿನ ನಿಟ್ಟೂರು ಹೋಬಳಿಯ ದಲಿತರು ದೌರ್ಜನ್ಯ, ದಬ್ಬಾಳಿಕೆ, ಅಸ್ಪೃಶ್ಯತೆಯ ಮನೋಭಾವ, ವ್ಯವಹಾರ ನಡೆಸಲು ಅವಕಾಶ ಇಲ್ಲದಿರುವುದು, ಕುಳುವಾಡಿಕೆಯಿಂದ ಬೇಸತ್ತು ಇಲ್ಲಿನ 12 ದಲಿತ ಕುಟುಂಬಗಳ 32 ಮಂದಿ ಹಾಗೂ ಇತರೆ ದಲಿತ 12 ಮಂದಿ ಪಂಚಶೀಲವನ್ನು ಅನುಸರಿಸುವ ಮೂಲಕ ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿದರು.
ಸುಮಾರು 200 ದಲಿತ ಕುಟುಂಬಗಳಿದ್ದು, ಹರೀಶ್, ದೇವರಾಜು, ಮಧು, ಪುನೀತ್, ವಿನೋದ್, ಕುಮಾರ್, ರಾಜಶೇಖರ್, ಮೋಹನ್ ಕುಮಾರ್, ನಿತೀಶ್, ಸುರೇಶ್, ಕರಿಯಯ್ಯ ಸೇರಿದಂತೆ 49 ಮಂದಿ ದೀಕ್ಷೆ ಸ್ವೀಕರಿಸಿದರು.
ಈ ಹಿಂದೆ 4 ಕುಟುಂಬಗಳು ಇಲ್ಲಿ ದೀಕ್ಷೆ ಪಡೆದಿದ್ದರು. ಅವರು ಈಗ ಸವರ್ಣೀಯರೊಂದಿಗೆ ವ್ಯವಹರಿಸುವುದು, ಕುಳುವಾಡಿಗೆ ಇಲ್ಲದಿರುವುದು, ಸವರ್ಣೀಯರ ಮನೆಗಳಿಗೆ ಹೋಗುವಂತಹ ಪ್ರವೃತ್ತಿಗಳು ನಡೆಯುತ್ತಿವೆ.  ದಲಿತರು ಬೌದ್ಧ ದೀಕ್ಷೆ ಪಡೆದ ನಂತರ ಅವರ ಮೇಲೆ ನಡೆಯುತ್ತಿದ್ದಂತಹ ಕೆಲಮೊಂದು ಅನಿಷ್ಟ ಪದ್ಧತಿಗಳು, ಅಸ್ಪೃಶ್ಯತೆ ಹಾಗೂ ಆಚರಣೆಗಳು ಕಡಿಮೆಯಾಗಿದೆ. ಇದರಿಂದ ಅವರಿಗೆ ಸ್ವತಂತ್ರ ಸಿಕ್ಕಿದಂತಾಗಿದೆ.
ಆದರೆ, ಈ ಹಿಂದೆ ಎಲ್ಲಾ ರೀತಿಯ ಕುಳುವಾಡಿಕೆ, ಅಸ್ಪೃಶ್ಯತೆಯ ಆಚರಣೆಗಳು ನಡೆಯುತ್ತಿದ್ದವು. ಅದಕ್ಕಾಗಿ ಬೌದ್ಧ ದೀಕ್ಷೆ ಪಡೆದು ಪರಿವರ್ತನೆಯ ಕಡೆಗೆ ದಲಿತರು ನಡೆಯುತ್ತಿದ್ದಾರೆ.
ಅಸಮಾಧಾನ: ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿಯವರು ದೀಕ್ಷೆ ನೀಡಿ ಮಾತನಾಡಿದ ಅವರು, ಬೌದ್ಧ ದೀಕ್ಷೆ ಪಡೆದಂತಹವರಿಗೆ ಯಾವುದೇ ರೀತಿಯ ಚಿಹ್ನೆ ಅಥವಾ ಲಾಂಛನದ ಅವಶ್ಯಕತೆ ಇಲ್ಲ.
ಕೇವಲ ಪಂಚಶೀಲವನ್ನು ಅನುಸರಿಸಿ ಪ್ರಾರ್ಥಿಸಿದರೆ ಸಾಕು ಎಂದ ಅವರು, ಅಮರ್ಥಸೇನ್ ಅವರು ಪುಸ್ತಕವನ್ನು ರಚಿಸಿ ಅದರಲ್ಲಿ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ತಮ್ಮ ಹಕ್ಕನ್ನು ಕೇಳುವ ಶಕ್ತಿ ಬಗ್ಗೆ ಪ್ರಶ್ನಿಸಿದರು. ಇದನ್ನು ಪ್ರತಿನಿತ್ಯ ಅನುಭವಿಸುತ್ತಿರುವವರು ದಲಿತರು, ಶೋಷಿತರು, ಅಸ್ಪೃಶ್ಯರು, ಹಿಂದುಳಿದವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೀಕ್ಷೆ ಅನಿವಾರ್ಯ: ದೇಶದಲ್ಲಿ ಕೇವಲ ಶೇ.11ರಷ್ಟು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯಲಾಗುತ್ತಿದೆ. ಆದ್ದರಿಂದ ಉನ್ನತ ಶಿಕ್ಷಣದ ಪ್ರಮಾಣ ಹೆಚ್ಚಾಗಬೇಕಾದ ಅವಶ್ಯಕತೆ ಇದೆ.
ಬದುಕಿನಲ್ಲಿ ನಾವು ಇದ್ದರು ಸತ್ತು ಹೋಗಿದ್ದೇವೆ ಎಂದ ಅವರು, ಅಂಬೇಡ್ಕರ್ ಅವರು ಸಹ ಬೌದ್ಧ ದೀಕ್ಷೆಯನ್ನು ಪಡೆದು ಬುದ್ಧನ ತತ್ವಗಳನ್ನು ಸಾರಿದರು. ಭಾರತೀಯರು ಮಾನಸಿಕವಾಗಿ ಬಡವರಾಗಿದ್ದಾರೆ. ಆದ್ದರಿಂದ ಅವರಿಗೆ ಬೌದ್ಧ ದೀಕ್ಷೆ ಅನಿವಾರ್ಯವಾಗಿದೆ ಎಂದು ಬಂತೇಜಿ ಹೇಳಿದರು.
ಧರ್ಮ ಪಾಲಿಸಬೇಕು: ಬುದ್ಧನಿಲ್ಲದ ಭಾರತ ಬಡವಾಗಿದ್ದು, ಎಲ್ಲರು ಬೌದ್ಧ ಧರ್ಮವನ್ನು ಅನುಸರಿಸಬೇಕು ಎಂದ ಅವರು, ಭಯೋತ್ಪಾದನೆ ಅನ್ನೋದು ಮನೆಯಿಂದಲೇ ಸೃಷ್ಟಿಯಾಗುತ್ತಿದೆ. ಮೊದಲು ಅದನ್ನು ಸರಿಪಡಿಸಬೇಕು.
ಕುಟುಂಬಗಳಲ್ಲಿನ ಗದ್ದಲ, ಒಳಜಗಳ ಸರಿಪಡಿಸಿಕೊಳ್ಳುವ ಮೂಲಕ ನೆಮ್ಮದಿಯ ಹಾಗೂ ಶಾಂತಿಯ ಜೀವನ ನಡೆಸುವಂತಾಗಬೇಕು. ಇದಕ್ಕೆ ಬೌದ್ಧ ಸಹಕಾರಿಯಾಗಲಿದ್ದು, ಎಲ್ಲರೂ ಬೌದ್ಧ ಧರ್ಮ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಅನುರುದ್ಧ ಬಂತೇಜಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.