ಹಾಸನ

ಅಪರಿಚಿತ ಮಹಿಳೆಯ ಶವ ಪತ್ತೆ

Published On :

ಹಾಸನ: ತಾಲೂಕಿನ ಮಾವಿನಕೆರೆ ರೇಲ್ವೆ ನಿಲ್ದಾಣಗಳ ಮಧ್ಯೆ ಮೊಸಳೆ ಹೊಸಳ್ಳಿ ಹತ್ತಿರ   ರೇಲ್ವೆ  ಟ್ರ್ಯಾಕ್ ಮೇಲೆ  35 ವರ್ಷ ವಯಸ್ಸಿನ ಅಪರಿತ ಹೆಂಗಸಿನ ಶವ ಪತ್ತೆಯಾಗಿದೆ.
ಗೋಧಿ ಮೈಬಣ್ಣ, ತೆಳುವಾದ ಶರೀರ ಹೊಂದಿದ್ದು, ಸುಮಾರು 1 ಅಡಿ ಉದ್ದದ ಕಪ್ಪನೆ ತಲೆ ಕೂದಲು, ಎಡಗೈಯಲ್ಲಿ ಒಖ ಎಂದು ಇಂಗ್ಲಿಷ್ ಅಕ್ಷರದ ಹಚ್ಚೆ ಇದೆ.
ಕಪ್ಪು ನೀಲಿ ಮತ್ತು ಕೇಸರಿ ಬಣ್ಣದ ಪಾಲಿಸ್ಟಾರ್ ಸೀರೆ. ಕೆಂಪುಬಣ್ಣದ ರವಿಕೆ. ಬಿಳಿ, ಗುಲಾಬಿ ಬಣ್ಣದ ತುಂಬುತೋಳಿನ ಉಲನ್ ಸ್ವೆಟರ್. ತಿಳಿ ಪಾಚಿ ಬಣ್ಣದ ಒಳಲಂಗ. ಬಲ ಕೈನಲ್ಲಿ ಹಸಿರು ಬಣ್ಣದ ಗಾಜಿನ ಬಳೆಗಳಿವೆ. ಬಲ ಕಾಲಿನಲ್ಲಿ ಒಂದು ಕಾಲುಂಗುರ ಇದೆ. ಕೊರಳಲ್ಲಿ ಚಿನ್ನದಂತಿರುವ ತಾಳಿ ಹಾಗೂ ಕರಿಮಣಿ ಸರ, ಮೂಗಿನಲ್ಲಿ ಒಂದು ಸಣ್ಣ ಮೂಗುನತ್ತು ಇದೆ. ಅಪರಿಚಿತ ಶವದ ಬಗ್ಗೆ ಮಾಹಿತಿ ಸಿಕ್ಕಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ   ಅಥವಾ ಹಾಸನ ಗ್ರಾಮಾಂತರ ವೃತ್ತ ಕಚೇರಿಗೆ ತಿಳಿಸುವಂತೆ ಆರಕ್ಷಕ ವೃತ್ತ ನಿರೀಕ್ಷಕ ಎಸ್.ಆರ್. ವೀರೇಂದ್ರ ಪ್ರಸಾದ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ದೂ.  08172-268845, ಪೊಲೀಸ್ ಕಚೇರಿ, ಗ್ರಾಮಾಂತರ ವೃತ್ತ ಹಾಸನ, ದೂ. 08172-233980, 9480804737 ಇವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.