ಹಾಸನ

'ಸವಾಲುಗಳನ್ನೆದುರಿಸುವ ಶಿಕ್ಷಣ ನೀಡಬೇಕಿದೆ'

Published On :

ಸಕಲೇಶಪುರ: ಮಕ್ಕಳಿಗೆ ಜೀವನದಲ್ಲಿ ಎದುರಾಗುವ ಸಾವಲುಗಳನ್ನು ಎದುರಿಸುವಂತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಪಟ್ಟಣದ ಪುರಸಭೆಯಲ್ಲಿ ಸೆಂಟ್ ಆಗ್ನೇಸ್ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಭಕ್ತ ಕುಟುಂಬಗಳು ಹೆಚ್ಚಿದಂತೆ ಮಕ್ಕಳಿಗೆ ನೀಡುತ್ತಿರುವ ಸೌಕರ್ಯಗಳು ಹೆಚ್ಚಿದ್ದು, ಇವರಿಗೆ ಕಷ್ಟಗಳು ಅರಿವು ಬಾರದ ಹಿನ್ನೆಲೆಯಲ್ಲಿ ಜೀವನದಲ್ಲಿ ಸವಾಲುಗಳು ಎದುರಾದಂತೆ ಅತ್ಮಹತ್ಯೆ ಸಂಖ್ಯೆಗಳು ಹೆಚ್ಚುತ್ತಿವೆ ಎಂದರು.
ಈ ಹಿನ್ನೆಲೆಯಲ್ಲಿ, ಮಕ್ಕಳಿಗೆ ಆರಂಭದಿಂದಲೂ ಕಷ್ಟಗಳ ಅರಿವಿರುವಂತೆ ಬೆಳಸುವ ಮೂಲಕ ಜೀವನದಲ್ಲಿ  ಎದುರಾಗುವ ಸಂಕಷ್ಟಗಳನ್ನು ಎದುರಿಸುವ ಅತ್ಮವಿಶ್ವಾಸ ಬೆಳಸುವಂತ ಶಿಕ್ಷಣವನ್ನು ಶಾಲೆ ಹಾಗೂ ಮನೆಯಲ್ಲಿ ನೀಡಬೇಕು ಎಂದರು.
ಧರ್ಮಗುರು ಮಾತನಾಡಿ, ಮಕ್ಕಳನ್ನು ರೋಬೋಟ್‌ಗಳನ್ನಾಗಿ ಮಾಡದೇ ಜೀವನದ ಸಕಲ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಬೆಳಸಿದರೆ ಮಕ್ಕಳು ದೊಡ್ಡವರಾದ ನಂತರ ಪೋಷಕರು ಸಂಕಷ್ಟಪಡುವುದು ತಪ್ಪಲಿದೆ.
ಅತಿಯಾದ ಪ್ರೀತಿಯಿಂದ ಬೆಳೆಸಿದ ಮಕ್ಕಳು ಸಂಕಷ್ಟದ ಸಮಯದಲ್ಲಿ ಅತ್ಮಹತ್ಯೆ ದಾರಿ ಹಿಡಿಯುವುದರಿಂದ ಪೋಷಕರು ಅಂತ್ಯಕಾಲದಲ್ಲಿ ಕಣ್ಣೀರಿನಲ್ಲಿ ದಿನ ದೂಡಬೇಕಾಗುತ್ತದೆ ಎಂದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರಕಾಶ್ ಫರ್ನಾಂಡಿಸ್, ಮುಖ್ಯ ಶಿಕ್ಷಕ ರಂಗೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.