ಕುಡಿಯುವ ನೀರಿಗಾಗಿ ಜಾವಗಲ್ ಬಂದ್ ಯಶಸ್ವಿ
ಜಾವಗಲ್: ಕುಡಿಯುವ ನೀರಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಲಾಗಿದ್ದ ಜಾವಗಲ್ ಬಂದ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸದಾ ಗಿಜುಗುಡುತ್ತಿದ್ದ ಕೆಎಸ್ಆರ್ಟಿಸಿಬಸ್ ನಿಲ್ದಾಣ, ಎನ್.ಎಚ್ 234 ವಾಹನ ಸಂಚಾರವಿಲ್ಲದೆ ಬಣಗುಡುತ್ತಿತ್ತು, ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಅರಸೀಕೆರೆ ತಾಲೂಕಿನ ಫ್ಲೋರೈಡ್ಯುಕ್ತ ನೀರಿನ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಒಂದು ವರ್ಷದ ಹಿಂದೆ 28 ಕೋಟಿ ವೆಚ್ಚದಲ್ಲಿ ಜಾವಗಲ್ ಹೋಬಳಿಯ 30 ಹಳ್ಳಿಗಳು ಸೇರಿದಂತೆ 58 ಹಳ್ಳಿಗಳಿಗೆ ಯಗಚಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಕಳೆದ ನವೆಂಬರ್ ತಿಂಗಳಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆ.ಬಿ.ಹಾಳ್ ಗ್ರಾಮದಲ್ಲಿ ಅಕ್ರಮವಾಗಿ ಯೋಜನೆಯ ಕೊಳಾಯಿ ಮೂಲಕ ನೀರು ಸಂಪರ್ಕ ತೆಗೆದುಕೊಂಡಿರುವುದು ಗಮನಕ್ಕೆ ಬಂದು ಈ ಬಗ್ಗೆ ಯೋಜನೆಯ ಉಸ್ತುವಾರಿ ಅರಸೀಕೆರೆ ಜಿಪಂ ಎಇಇ ಅವರು ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ದರೂ ಕ್ರಮ ತೆಗೆದುಕೊಂಡಿಲ್ಲ.
ಹೀಗಾಗಿ ಯಗಚಿ ಯೋಜನೆ ಅಧಿಕಾರಿಗಳು ಜಲಾಶಯದಿಂದ ನೀರು ಸರಬರಾಜು ವ್ಯವಸ್ಥೆಯನ್ನು ನಿಲುಗಡೆ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ, ಚುನಾಯಿತ ಪ್ರತಿನಿಧಿಗಳಿಗೆ ಹಲವು ಸಲ ಮನವಿ ಮಾಡಿದ್ದರೂ ು ಪ್ರಯೋಜನವಾಗಿಲ್ಲ. ಇದನ್ನು ಪ್ರತಿಭಟಿಸಿ ಗ್ರಾಮದ ಆಂಜನೇಯ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಸ್ಪಂದಿಸಿ ಪಟ್ಟಣದ ಎಲ್ಲಾ ವ್ಯಾಪಾರ ಮುಗ್ಗಟ್ಟುಗಳು ವಹಿವಾಟನ್ನು ನಿಲ್ಲಿಸಿ ಸಂಪೂರ್ಣ ಸಹಕಾರ ನೀಡಿಲಾಯಿತು. ರಾಷ್ಟ್ರೀಯ ಹೆದ್ದಾರಿ 234ರಲ್ಲಿ ದರ್ಗಾದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೆಲವು ಕಾಲ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಎನ್.ಬಿ.ರಾಜಶೇಖರ್, ಶಕ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ನಾಗರಾಜು, ಹೋಬಳಿ ಕರವೇ ಘಟಕ ಅಧ್ಯಕ್ಷ ದಯಾನಂದ್, ಮುಖಂಡರಾದ ಜೆ.ಆರ್.ಇಂದ್ರೇಶ್, ಜೆ,ಕೆ, ಚಿಕ್ಕಯ್ಯ, ಲಕ್ಷ್ಮೀ ನಾರಾಯಣ, ಭಾನುಪ್ರಕಾಶ್, ಡಿಗ್ಗೇನಹಳ್ಳಿ ರಾಜಶೇಖರ್, ಫೈರೋಜ್ಗಾಂಧಿ, ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್, ಗ್ರಾಪಂ ಸದಸ್ಯರಾದ ಶ್ರೀನಿವಾಸ್, ರಮೇಶ್, ಪುರುಷೋತ್ತಮ, ಗ್ರಾಮಸ್ಥರಾದ ಜಗನ್ನಾಥ್ಶೆಟ್ಟಿ, ಚೇತನ್, ಧಮೇಂದ್ರ, ನಿಂಗಮ್ಮ, ರಂಗಮ್ಮ, ಶೈಲಮ್ಮ, ಧಮೇಂದ್ರ, ರೈತಸಂಘದ ಶಿವಪ್ಪ ಮಲ್ಲಿಕಾರ್ಜುನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

