ಹಾಸನ

ಚಿಕ್ಕಮಗಳೂರಿಗೆ ನೀರು ಸರಬರಾಜು ಸ್ಥಗಿತಗೊಳಿಸಿದ ಪ್ರತಿಭಟನಾಕಾರರು

Published On :

ಬೇಲೂರು: ಯಗಚಿ ಜಲಾಶಯದ ಕುಡಿಯುವ ನೀರಿನ ಸರಬರಾಜು ಪೈಪನ್ನು ಆಕ್ರಮವಾಗಿ ಕೊರೆದು ನೀರು ಪಡೆಯುತ್ತಿರುವುದನ್ನು ವಿರೋಧಿಸಿ ಚಿಕ್ಕಮಗಳೂರು ಪಟ್ಟಣಕ್ಕೆ ನೀರು ಸರಬರಾಜನ್ನು ಸಾಂಕೇತಿಕವಾಗಿ ಸ್ಥಗಿತಗೊಳಿಸಲಾಯಿತು.
ಜಾವಗಲ್, ಹಳೇಬೀಡು ಭಾಗದ ನೂರಾರು ಸಾರ್ವಜನಿಕರು ಜಾಕ್‌ವೇಲ್‌ನಿಂದ ನೀರು ಸರಬರಾಜು ಮಾಡುತ್ತಿರುವುದನ್ನು ಸ್ಥಗಿತಗೊಳಿಸಿದರು. ಯಗಚಿ ಜಲಾಛಶಯದಿಂದ ರಾಜೀವ್ ಗಾಂಧಿ ಕುಡಿಯುವ ನೀರು ಯೋಜನೆಯಿಂದ ಹಳೇಬೀಡು, ಜಾವಗಲ್, ಅರಸೀಕೆರೆ ಪ್ರದೇಶಗಳಿಗೆ ಪೈಪ್ ಮೂಲಕ ನೀರು ಹರಿಸುವ ಯೋಜನೆ ರೂಪಿಸಿದ್ದು, ಮಾರ್ಗ ಮಧ್ಯ ಚಿಕ್ಮಮಗಳೂರು ಜಿಲ್ಲೆಯ ಕೆ.ಬಿ.ಹಾಳ್ ಗ್ರಾಮದಲ್ಲಿ ಪೈಪ್‌ಲೈನ್ ಹಾದು ಹೋಗಿದೆ. ಆದರೆ ಈ ಭಾಗದ ಜನರು ಆಕ್ರಮವಾಗಿ ಪೈಪ್‌ಗಳನ್ನು ಕೊರೆದು ನೀರು ಪಡೆಯುತ್ತಿದ್ದರು.
ಶಾಸಕ ವೈ.ಎನ್.ರುದ್ರೇಶಗೌಡ ಮಾತನಾಡಿ, ಯಗಚಿ ಜಲಾಶಯದಿಂದ 58 ಹಳ್ಳಿಗಳಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿದ್ದು, ಅದರಂತೆ ಎಲ್ಲಾ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ. ಪೈಪ್‌ಲೈನ್ ಮೂಲಕ ಕೆ.ಬಿ.ಹಾಳ್ ಹತ್ತಿರ ಹಾದುಹೋಗಿರುವ ನೀರನ್ನು ಅಕ್ರಮವಾಗಿ ಈ ಭಾಗದ ಜನರು ಪಡೆದಿದ್ದರಿಂದ ಮೂಲ ಯೋಜ ನೆಯಿಂದ ಎಲ್ಲಾ ಗ್ರಾಮಗಳು ಕುಡಿಯುವ ನೀರಿನಿಂದ ವಂಚಿತರಾಗುವ ಭೀತಿಯಿದೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಶಿವರಾಂ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಜಾವಗಲ್ ಸ್ವಾಮಿ, ನಾಗರಾಜು, ಚಿಕ್ಕಮಗಳೂರು ಎಂಜಿನಿಯರ್ ಪುರುಷೋತ್ತಮ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.