ಒತ್ತುವರಿ ಪರ ನಿರ್ಣಯ: ಪ್ರತಿಭಟನೆ
ಸಕಲೇಶಪುರ: ಮಳಲಿ ಗ್ರಾ.ಪಂ ಅಧ್ಯಕ್ಷರು ಶ್ರಿಮಂತರಪರವಾಗಿ ಜಾರಿಗೊಳಿಸಿರುವ ನಿರ್ಣಯವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮಳಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಗ್ರಾಮಾಭಿವೃದ್ದಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪಟ್ಟಣದ ತಾಲೂಕು ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ಆಕ್ರೋಶ: ಮಳಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಗರಳ್ಳಿ ಮಠಸಾಗರ ಗ್ರಾಮಗಳಲ್ಲಿ ತಾಲೂಕು ಆಡಳಿತ ಕಳೆದ ಆರು ತಿಂಗಳ ಹಿಂದೆ ಒತ್ತುವರಿಯಾದ ಗ್ರಾಮಠಾಣೆ ಜಾಗವನ್ನು ಗುರುತಿಸಿದ್ದು ಈ ಜಾಗವನ್ನು ಖುಲ್ಲಾ ಮಾಡಿಸಿ ಸೂಕ್ತಕ್ರಮ ಜರುಗಿಸುವಂತೆ ಗ್ರಾಪಂ ಪಂಚಾಯ್ತಿಗೆ ತಿಳಿಸಿತ್ತು. ಆದರೆ ಗ್ರಾಪಂ ಅಧ್ಯಕ್ಷರು ವಸತಿ ರಹಿತರಿಗೆ ಒತ್ತುವರಿಯಾದ ಜಾಗವನ್ನು ಖುಲ್ಲಾಗೊಳಿಸಿ ಹಂಚುವ ಬದಲಿಗೆ ಗ್ರಾ.ಪಂ ವಿಶೇಷ ಸಭೆ ಕರೆದು ಒತ್ತುವರಿ ಮಾಡಿರುವವರ ಪರವಾಗಿ ನಿರ್ಣಯ ಕೈಗೊಂಡು ಬಡವರ ವಿರೋಧಿ ನಿಲುವು ತಳೆದಿದ್ದಾರೆಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.
ಜಾಗವನ್ನು ಹಂಚಿಕೆ ಮಾಡಿ: ಒತ್ತುವರಿಯಾದ ಗ್ರಾಮಠಾಣ ಜಾಗವನ್ನು ಖುಲ್ಲಗೊಳಿಸಿ ವಸತಿ ರಹಿತರಿಗೆ ನೀಡದೆ ಶ್ರೀಮಂತರ ಪರ ನಿಂತು, ಕೆಲವೇ ದಿನಗಳ ಅಂತರದಲ್ಲಿ ಎರಡೆರಡು ನಿರ್ಣಯಗಳನ್ನು ಕೈಗೊಂಡು ಪಂಚಾಯ್ತಿ ರಾಜ್ ಅಧಿನಿಯಮ 1993 ಪ್ರಕರಣ 210ರ ಉಲ್ಲಂಘಿಸಿರುವ ಗ್ರಾಮ ಪಂಚಾಯ್ತಿಯನ್ನು ಜಿಲ್ಲಾಧಿಕಾರಿಗಳು ತಕ್ಷಣಕ್ಕೆ ಬರುವಂತೆ ವಜಾಗೊಳಿಸಬೇಕು. ತಾಲೂಕು ಆಡಳಿತ ಗುರುತಿಸಿರುವ ಒತ್ತುವರಿ ಗ್ರಾಮಠಾಣ ಜಾಗವನ್ನು ಕೂಡಲೇ ತೆರವುಗೊಳಿಸಿ ವಸತಿ ರಹಿತರಿಗೆ ಹಂಚಬೇಕು ಎಂದು ಆಗ್ರಹಿಸಿದರು.
ತಾಪಂ ಅಧ್ಯಕ್ಷರ ಭರವಸೆ: ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಂಜುಳಾ ಮಳಲಿ ಗ್ರಾಪಂ ಅಧ್ಯಕ್ಷರು ಜಾರಿಗೊಳಿಸಿದ್ದ ನಿರ್ಣಯವನ್ನು ಈ ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಒತ್ತುವರಿ ಗ್ರಾಮ ಠಾಣ ಜಾಗವನ್ನು ಇನ್ನು 10 ದಿನಗಳಲ್ಲಿ ತೆರವುಗೊಳಿಸಲಾಗುವುದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಬೈರಮುಡಿ ಚಂದ್ರು, ಸುಲೋಚನಾ ರಾಮಕೃಷ್ಣ, ಮಂಜಮ್ಮ, ತಾಪಂ ಉಪಾಧ್ಯಕ್ಷ ವೇದಾವತಿ, ಸದಸ್ಯ ಸಿದ್ದಯ್ಯ, ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬೈರಪ್ಪಶೆಟ್ಟಿ ಮತ್ತು ಮುಖಂಡ ಸತೀಶ್, ಕೊಲ್ಲಹಳ್ಳಿ ಸಲೀಂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

