ಹಾಸನ

ಗಾಯಕ ಕ್ಷಮತೆ ಕಾಯ್ದುಕೊಳ್ಳಬೇಕು: ವಿದ್ವಾನ್ ಪದ್ಮನಾಭ್

Published On :

ಹಾಸನ: ಗಮಕಿಯಾಗಿರಬಹುದು, ಶಾಸ್ತ್ರೀಯ, ಸುಗಮ ಸಂಗೀತಗಾರನಾಗಿರಬಹುದು ತನ್ನ ಕ್ಷಮತೆಯನ್ನು ಬಹುಕಾಲ ಕಾಯ್ದಿಟ್ಟುಕೊಳ್ಳಬೇಕು ಎಂದು ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ್ ಅಭಿಪ್ರಾಯಪಟ್ಟರು.
ಗಮಕ ಕಲೆಯ ಶಕ್ತಿ: ಹಾಸನ ಗಮಕಕಲಾ ಪರಿಷತ್ ವತಿಯಿಂದ ನಡೆದ ಹದಿಮೂರನೇ ವರ್ಷದ ಗಮಕ ಹಬ್ಬ ಕವಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚೀನ ಹಾಗೂ ಜನಪದ ಕಲೆಯಾದ ಗಮಕದ ಪ್ರಸ್ತುತಿಗೆ ಸಾಹಿತ್ಯ ಶುದ್ಧಿ, ಸಂಗೀತ ಜ್ಞಾನ ಪೂರಕ. ಸಂಗೀತದ ರಾಗಗಳ ಔಚಿತ್ಯವನ್ನು ಅರ್ಥೈಸಿಕೊಂಡು ಸಂದರ್ಭೋಚಿತ ಹಾಗೂ ಪಾತ್ರೌಚಿತ್ಯವೆನಿಸುವ ರಾಗಗಳನ್ನು ಅಳವಡಿಸಿಕೊಂಡು, ವಿಸ್ತರಿಸಿ ಹಾಡಿದಾಗ ಅದು ಕೇವಲ ಪಂಡಿತರನ್ನಷ್ಟೇ ಅಲ್ಲ ಸಾಮಾನ್ಯ ಜನರನ್ನೂ ಕೂಡ ತನ್ನೆಡೆಗೆ ಸೆಳೆಯುತ್ತದೆ. ಅಂತಹ ಶಕ್ತಿ ಜನಮಾನಸದ ಮಧ್ಯೆಯೇ ಬೆಳೆದುಬಂದ ಗಮಕ ಕಲೆಗಿದೆ ಎಂದರು.
ಸ್ತುತ್ಯಾರ್ಹ: ಗಮಕವನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ಕನ್ನಡಿಗರ ಕೊಡುಗೆ ಅನನ್ಯ ಎಂದು ಶ್ಲಾಘಿಸಿದರು. ಮೈಸೂರು ಬ್ಯಾಂಕ್‌ನ ಶಾಂತಾರಾಂ ಮಾತನಾಡಿ, ಮೈಸೂರು ಪ್ರಾಂತ್ಯದ ಈ ಕಲೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವಲ್ಲಿ ಗಮಕಿಗಳ ಪಾತ್ರ ಹಾಗೂ ಶ್ರಮ ಸ್ತುತ್ಯಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಗಣೇಶ ಉಡುಪ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗಮಕ ಕಲೆ ತನ್ಮೂಲಕ ಕಾವ್ಯಗಳ ರಸವನ್ನು ಪರಿಚಯಿಸಲು ಶಾಲಾ ಕಾಲೇಜುಗಳ ಕನ್ನಡ ಶಿಕ್ಷಕರು ಅವಕಾಶ ಮಾಡಿಕೊಡಬೇಕೆಂದರು. ಈ ಸಂದರ್ಭದಲ್ಲಿ ವಿದ್ವಾನ್ ಬಿ.ಎನ್.ಎಸ್. ಮುರಳಿ ಮತ್ತು ಜಿ.ಎಸ್. ಮಂಜುನಾಥ್ ಅವರು ಕಾಳಿದಾಸನ ರಘುವಂಶ ಕಾವ್ಯದಿಂದ ಆಯ್ದ ಭಾಗದ ಗಾಯನ ವ್ಯಾಖ್ಯಾನ ನಡೆಸಿಕೊಟ್ಟರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.