'ಜಮೀನು ತೆರವುಗೊಳಿಸಿದರೆ ನಕ್ಸಲ್ ಚಟುವಟಿಕೆ ಹೆಚ್ಚಳ'
ಕ.ಪ್ರ.ವಾರ್ತೆ , ಸಕಲೇಶಪುರ , ಜ.8
ಅನಧಿಕೃತ ಸಾಗುವಳಿ ಜಮೀನನ್ನು ತೆರವುಗೊಳಿಸಲು ರಾಜ್ಯ ಉಚ್ಛ ನ್ಯಾಯಲಯ ಆದೇಶ ಹೊರಡಿಸಿರುವುದರಿಂದ ಮಲೆನಾಡ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಲಿದೆ ಎಂದು ಹಾಸನ ಬೆಳಗಾರರ ಸಂಘದ ಅಧ್ಯಕ್ಷ ಮುಜಾಹೀದ್ ಆಲಂ ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡುಗೆ: ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಪ್ರಕ್ರಿಯೆಯು ಹಲವು ಉದ್ದೇಶಗಳಿಂದ ನಡೆಯುತ್ತಿದೆ. ಸಹಸ್ರಾರು ಕುಟುಂಬಗಳು ಸರ್ಕಾರಿ ಜಮೀನನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲಾ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಾಗಿದ್ದಾರೆ. ಒತ್ತುವರಿ ತೆರವು ಕಾರ್ಯದಿಂದ ಅವರುಗಳೆಲ್ಲಾ ನಿರ್ಗತಿಕರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಗಾಗಿ ಭೂಮಿಯನ್ನು ಒತ್ತುವರಿ ಮಾಡಿದ್ದು, ರಾಷ್ಟ್ರದ ಬೊಕ್ಕಸಕ್ಕೆ ಆದಾಯ ತಂದುಕೊಡುತ್ತಿರುವುದರ ಜೊತೆಗೆ ಪರಿಸರಕ್ಕೂ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ.
ತೆರವುಗೊಳಿಸಿದ್ದೇ ಸಾಕ್ಷಿ: ಕೃಷಿ ಭೂಮಿಯಲ್ಲಿ ಒತ್ತುವರಿ ಮಾಡಿರುವವರಲ್ಲಿ ಭೂಹೀನರು, ಹಿಡುವಳಿ ಇಲ್ಲದವರ ಸಂಖ್ಯೆಯೇ ಹೆಚ್ಚಾಗಿದೆ. ಇವರು ಒತ್ತುವರಿ ಮಾಡಿದ ಜಮೀನನ್ನು ಖುಲ್ಲ ನೆಡಿಸಿದರೆ, ಅದರಿಂದ ಉದ್ಭವಿಸುವ ಪರಿಣಾಮಗಳು ಒಂದೆರಡಲ್ಲ. ಹಾಲಿ ಇರುವ ನಕ್ಸಲ್ ಸಮಸ್ಯೆ, ಕುದುರೆ ಮುಖ ರಾಷ್ರೀಯ ಉದ್ಯಾನವನ ಸರ್ವೋಚ್ಛ ನ್ಯಾಯಾಲಯವು ರಕ್ಷಿತ ಅರಣ್ಯದಲ್ಲಿ ವಾಸಿಸುತ್ತಿರುವವರನ್ನು, ತೆರವುಗೊಳಿಸಿದ್ದರ ಪರಿಣಾಮವೇ ಇದಕ್ಕೆ ಸಾಕ್ಷಿ. ಸ್ವತಂತ್ರ ಪೂರ್ವದಿಂದ ಇರುವ ಸಮಸ್ಯೆಯನ್ನು ಇಂತಹ ವಿಭಿನ್ನ ಕೃಷಿ ಕೈಗಾರಿಕೆಯಲ್ಲಿ ತೆರವುಗೊಳಿಸುವಾಗ ಇದನ್ನು ಅವಲಂಬಿಸಿರುವ ಲಕ್ಷಾಂತರ ಜನರ ಸಮಸ್ಯೆಯನ್ನು ಗಮನಿಸಬೇಕು.
ಒತ್ತಾಯ: ಕೃಷಿಕ ಬೆಳೆಗಾರರ ಸಾಗುವಳಿಯನ್ನು ತೆರವು ಮಾಡಿಸುವುದರಿಂದ ಲಕ್ಷಾಂತರ ಕೃಷಿಕ ಕುಟುಂಬಗಳು ನಿರ್ಗತಿಕರಾಗಿ ಬೀದಿಗೆ ಬೀಳಲಿದ್ದು, ಇವರೆಲ್ಲರ ಪುನರ್ವಸತಿಗೆ ಸರ್ಕಾರಿ ಸಾವಿರಾರು ಕೋಟಿ ರು. ಖರ್ಚು ಭರಿಸಬೇಕಾಗುತ್ತದೆ. ಆದ್ದರಿಂದ, ಕರ್ನಾಟಕ ಸರ್ಕಾರ ಮತ್ತು ಉಚ್ಛ ನ್ಯಾಯಾಲಯ ತೀರ್ಪು ಪುನರ್ ಪರಿಶೀಲನೆ ನಡೆಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

