ಹಾಸನ

ನಿರ್ದಯಿ ವೈದ್ಯನ ಅಮಾನತು

Published On :

ಕ.ಪ್ರ.ವಾರ್ತೆ ,  ರಾಮನಾಥಪುರ ,  ಜ 8
ವೃದ್ಧೆಗೆ  ಸೂಜಿ ಮುರಿಯುವ ಹಾಗೆ ಚುಚ್ಚುಮದ್ದು ನೀಡಿರುವ ಪ್ರಕರಣಕ್ಕೆ  ಸಂಬಂಧಿಸಿದಂತೆ ಆಯರ್ವೇದಿಕ್ ವೈದ್ಯ ಮೋಹನ್ ಅವರನ್ನು ಅಮಾನತುಗೊಳಿಸಲಾಗಿದೆ.
ಇಲ್ಲಿನ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದ ಹಿರೇಹಳ್ಳಿಕೊಪ್ಪಲು ವೃದ್ಧೆ ಮಾಳಮ್ಮ ಅವರಿಗೆ ನಿರ್ಲಕ್ಷ್ಯದಿಂದ ಚುಚ್ಚುಮದ್ದು ನೀಡಿ, ಸೂಜಿ ಮುರಿದು ಸೊಂಟದಲ್ಲಿ ಹುಣ್ಣಾಗುವಂತೆ ಮಾಡಿದ್ದ ವೈದ್ಯನ ಕುರಿತು 7ರಂದು ಕನ್ನಡಪ್ರಭದಲ್ಲಿ ವರದಿ ಪ್ರಕಟಿಸಲಾಗಿತ್ತು.  
ಇದರಿಂದ ಕೂಡಲೇ ಎಚ್ಚೆತ್ತ ಆರೋಗ್ಯ ಇಲಾಖೆ ಜಿಲ್ಲಾ ಆಯುರ್ವೇದಿಕ್ ವೈದ್ಯಾಧಿಕಾರಿ ನಂಜರಾಜ್ ಹಿರೇಹಳ್ಳಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ವೃದ್ಧೆ ಮಾಳಮ್ಮ ಅವರಿಂದ ನಡೆದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ನಡೆದಿರುವ ಸಂಗತಿ ಸತ್ಯವೆಂದು ಪರಾಮರ್ಶೆಗೊಳಿಸಿದ ನಂತರ, ರಾಮನಾಥಪುರದಲ್ಲಿ ಇರುವ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯ ಮೋಹನ್ ಅವರನ್ನು ಪ್ರಶ್ನಿಸಿದ್ದಾರೆ.
ಅಲೋಪತಿ ಚಿಕಿತ್ಸೆ: ಈ ಸಂದರ್ಭದಲ್ಲಿ, ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ವೈದ್ಯಾಧಿಕಾರಿ ಅವರ ಗಮನಕ್ಕೆ ಬಂದಿದೆ.  ಈ ಹಿನ್ನೆಲೆಯಲ್ಲಿ, ಸರ್ಕಾರದಿಂದ ಪ್ರತಿ ತಿಂಗಳು ಆಸ್ಪತ್ರೆಗೆ ಕಳುಹಿಸುವ ಆಯುರ್ವೇದಿಕ್  ಔಷಧಿ ಕುರಿತು ಮಾಹಿತಿ ನೀಡುವಂತೆ ವೈದ್ಯ ಮೋಹನ್ ಅವರನ್ನು ವಿಚಾರಿಸಿದ್ದಾರೆ. ಆಗ, ಮೋಹನ್ ಅವರಿಂದ ಯಾವುದೇ ಮಾಹಿತಿ ದೊರಕಿಲ್ಲ.  
ಈ ಎಲ್ಲಾ ಲೋಪದೋಷಗಳನ್ನು ಮನಗಂಡು ನಂಜರಾಜ್ ಅವರು ವೈದ್ಯರ ಮೇಲೆ ಕ್ರಮ ಕೈಗೊಂಡಿದ್ದಾರೆ. ಮಾಧ್ಯಮಗಳಿಗೆ ಈ ವಿಷಯ ತಿಳಿಸಿರುವ ಅವರು, ಮಾಹನ್ ಅವರನ್ನು ಅಮಾನತು ಮಾಡಿರುವುದಾಗಿ ಮತ್ತು ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮತ್ತು ಇಲಾಖೆಗೆ ಪತ್ರ ಬರೆದಿರುವುದಾಗಿ ತಿಳಿಸಿದರು.   ಇದೇ ವೇಳೆ ಅಧಿಕಾರಿಗಳ ಲೋಪದೋಷವನ್ನು 'ಕನ್ನಡಪ್ರಭ' ಬೆಳಕಿಗೆ ತಂದಿದ್ದನ್ನು ಅವರು ಶ್ಲಾಘಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.