ಹಾಸನ

ಪುಟ್ಟಬಸಪ್ಪಗೆ ಅತ್ಯುತ್ತಮ ರೈತ ಪ್ರಶಸ್ತಿ

Published On :

ಕ.ಪ್ರ.ವಾರ್ತೆ ,  ರಾಮನಾಥಪುರ ,  ಜ. 8
ಇಲ್ಲಿಗೆ ಸಮೀಪದ ಬೆಟ್ಟಸೋಗೆ ಗ್ರಾಮದ ರುದ್ರಪ್ಪ ಅವರ ಪುತ್ರ ತಂಬಾಕು ಬೆಳೆಗಾರರಾದ ಪುಟ್ಟಬಸಪ್ಪ  ಅವರು  ರಾಷ್ಟ್ರೀಯ ತಂಬಾಕು ಮಂಡಳಿಯಿಂದ  2012-13ನೇ ಸಾಲಿನ ಅತ್ಯುತ್ತಮ ತಂಬಾಕು ಬೆಳೆಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ.
ರಾಮನಾಥಪುರ ತಂಬಾಕು ಮಂಡಳಿಯ ಫ್ಲಾಟ್ ಫಾರಂ ನಂ. 63ರ ಅಡಿಯಲ್ಲಿ ಬರುವ ರೈತರಾಗಿರುವ ಪುಟ್ಟಬಸಪ್ಪ 1979ರಿಂದಲೂ ತಂಬಾಕು ಬೆಳೆಗಾರರಾಗಿದ್ದಾರೆ. ಈ ಸಾಲಿನಲ್ಲಿ ಎಕರೆವಾರು ಇಳುವರಿಯಲ್ಲಿ ಮತ್ತು ಗುಣಮಟ್ಟದಲ್ಲಿ ಹೆಚ್ಚು ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಶಾಖೆ, ವಾಣಿಜ್ಯ ಮಂತ್ರಾಲಯ ಏರ್ಪಡಿಸಿದ್ದ ಸಮಾರಂಭದಲ್ಲಿ ಗುಂಟೂರಿನ ರಾಷ್ಟ್ರೀಯ ತಂಬಾಕು ಮಂಡಳಿ ಅಧ್ಯಕ್ಷ  ಕೊತಾಟಿ ಗೋಪಾಲ ಅವರು ಬೆಟ್ಟಸೋಗೆಯ ಪುಟ್ಟಬಸಪ್ಪ ಅವರಿಗೆ ನೆನಪಿನ ಕಾಣಿಕೆ, ಪಾರಿತೋಷಕ ಪ್ರಸಸ್ತಿ ಪತ್ರದ ಜತೆಗೆ ರು. 5,000 ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಪುಟ್ಟಬಸಪ್ಪ  ಮಾತನಾಡಿ, ತಮ್ಮ ಎರಡೂವರೆ ಎಕರೆಯಲ್ಲಿ ಉತ್ತಮ ಗುಣಮಟ್ಟದ ತಂಬಾಕನ್ನು ಬೆಳೆದದ್ದೂ ಅಲ್ಲದೆ ಎಕರೆವಾರು ಇಳುವರಿಯನ್ನು ಅಧಿಕವಾಗಿ ತಾಂತ್ರಿಕ ವಿಧಾನದಿಂದ ಬೆಳೆಯಲಾಗಿತ್ತು ಎಂದು ತಿಳಿಸಿದರು.  
ಸುಮಾರು 35 ವರ್ಷಗಳಿಂದ ಈ ತಂಬಾಕು ಬೆಳೆಯನ್ನು ತಾವು ಅವಲಂಬಿಸಿದ್ದು, ರೈತರು ಅಧಿಕ ಇಳುವರಿ ಪಡೆಯಲು ಗಮನ ಹರಿಸಬೇಕು ಎಂದರು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದರ ಬೆಲೆ ಅಧಿಕವಾಗಿದ್ದು, ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ, ಬ್ಯಾಂಕುಗಳು ಮತ್ತು ತಂಬಾಕು ಮಂಡಳಿ ಈ ಬೆಳೆಗಾರರಿಗೆ ಆರ್ಥಿಕ ನೆರವು ಮತ್ತು ನ್ಯಾಯಯುತ ಬೆಲೆ ನೀಡಬೇಕು.  ಬೇರೆ ರಾಜ್ಯಗಳ ರೈತರಿಗೆ ನೀಡುತ್ತಿರುವ ಉತ್ತಮ ಬೆಲೆಯನ್ನೇ ನೀಡಬೇಕು. ಮಲತಾಯಿ ಧೋರಣೆ ತೋರಬಾರದು ಎಂದು ಮನವಿ ಮಾಡಿದರು.
ಇವರಿಗೆ ದೊರೆತಿರುವ ಸನ್ಮಾನಕ್ಕಾಗಿ ಬೆಟ್ಟಸೋಗೆ ಗ್ರಾಮದ ರೈತ ವರ್ಗ ಮತ್ತು ಬಸವಾಪಟ್ಟಣದ ಸುತ್ತಮುತ್ತಲ ಗ್ರಾಮಸ್ಥರು ಪುಟ್ಟಬಸಪ್ಪ ಅವರನ್ನು ಅಭಿನಂದಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.