'ವಿದ್ಯಾರ್ಥಿಗಳನ್ನು ಶಿಕ್ಷಕರು ತಮ್ಮ ಮಕ್ಕಳೆಂದು ಭಾವಿಸಬೇಕು'
ಕನ್ನಡಪ್ರಭ ವಾರ್ತೆ, ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.), ಜ.8
ಬಡ ವಿದ್ಯಾರ್ಥಿಗಳ ಮನೋಭಾವ ಬದಲಾವಣೆ ಮಾಡಿ ಶಿಸ್ತು ಬದ್ಧ ನಡವಳಿಕೆ ಜೊತೆಗೆ ಶಿಕ್ಷಕರು ತಮ್ಮ ಮಕ್ಕಳೆಂಬ ಭಾವನೆಯಿಂದ ಒಳ್ಳೆಯ ಶಿಕ್ಷಣ ನೀಡಿದರೆ ಮಾದರಿ ವಿದ್ಯಾರ್ಥ್ಥಿಗಳಾಗಿ ಯಶಸ್ಸು ಕಾಣುತ್ತಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಜಗದೀಶ್ ಅಭಿಪ್ರಾಯಪಟ್ಟರು.
ಅವರು ಇಲ್ಲಿಗೆ ಸಮೀಪದ ನುಗ್ಗೇಹಳ್ಳಿ ಮತ್ತು ಗೂರಮಾರನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಆಶ್ರಯದಲ್ಲಿ ಸೋಮವಾರ ನಡೆದ ವಾರ್ಷಿಕೋತ್ಸವ ಸಮಾರಂಭ ಮತ್ತು ಹಳೆಯ ವಿದ್ಯಾರ್ಥಿಗಳ ಚಿಗುರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉನ್ನತ ವ್ಯಕ್ತಿಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಲಿ ಎಂದು ವಸತಿ ಶಾಲೆಗೆ ಪೋಷಕರು ತಮ್ಮ ಮಕ್ಕಳಿಗೆ ಅವರಿಗೆ 6 ವರ್ಷ ವಯಸ್ಸಾಗಿದ್ದಾಗಲೇ ಇಲ್ಲಿಗೆ ಕರೆತಂದು ಸೇರಿಸಿರುತ್ತಾರೆ. ಈ ಮಕ್ಕಳಿಗೆ ವಸತಿ ಜತೆಗೆ ಒಳ್ಳೆಯ ಊಟ ಮಾದರಿ ಶಿಕ್ಷಣ ನೀಡಿ ಆತ್ಮಸ್ಥೈರ್ಯ ತುಂಬಿದರೆ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಇದಕ್ಕೆ ಶಿಕ್ಷಕರು ಹಾಗೂ ನಿಲಯ ಪಾಲಕರು ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದರು. ಉಪನ್ಯಾಸಕ ಕಸ್ತೂರಿ ಕುಮಾರ ಅವರನ್ನು ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನಿಸಿದರು. ತಾ.ಪಂ. ಅಧ್ಯಕ್ಷೆ ಹೇಮಲತಾ ಕೃಷ್ಣಾ ನಾಯಕ್, ಪ್ರಾಂಶುಪಾಲ ಹನುಮಂತಯ್ಯ, ಭಾಗ್ಯಜೋತಿ, ವಿಸ್ತರಣಾಧಿಕಾರಿ ಬೆಟಗೇರಿ, ಉಪನ್ಯಾಸಕ ರವಿ, ಸಿ.ಜೆ. ಮಂಜೇಗೌಡ, ರಾಮಚಂದ್ರ, ಧರಣೀಶ್, ರಂಗಸ್ವಾಮಿ, ಕೆ.ಎಂ ಸಂತೋಷ್, ಮೃತ್ಯುಂಜಯ, ಕೆ. ಹಿರೆಮಠ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

