ಹಾಸನ

ವಿಎಚ್‌ಪಿ, ಬಜರಂಗದಳ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,  ಹಾಸನ ,  ಜ. 9
ಭಾರತಕ್ಕೆ ಆಗಮಿಸುತ್ತಿರುವ ಕ್ರೈಸ್ತ ಮತ ಪ್ರಚಾರಕ ಬೆನ್ನಿಹಿನ್ ಬಂಧಿಸಿ ಗಡಿಪಾರು ಮಾಡುವಂತೆ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜ.15ರಿಂದ 19ರ ವರೆಗೆ ಭಾರತಕ್ಕೆ ಬರುತ್ತಿರುವ ವಿದೇಶಿ ಕ್ರೈಸ್ತ ಮತ ಪ್ರಚಾರಕ ಬೆನ್ನಿಹಿನ್ ಬಾರದಂತೆ ತಡೆಗಟ್ಟಬೇಕು. ಕರ್ನಾಟಕದಲ್ಲಿಯೇ ಅತೀ ಹೆಚ್ಚು ಮತಾಂತರಗೊಳ್ಳುತ್ತಿರುವ ಜಿಲ್ಲೆ ಎಂಬುದು ಬಹಿರಂಗವಾಗಿದೆ. ಇದು ಆತಂಕಕಾರಿ ಸಂಗತಿಯಾಗಿದೆ ಎಂದು ಆರೋಪಿಸಿದರು.  ಈ ಹಿಂದೆ 2005 ರಲ್ಲಿ ಬೆಂಗಳೂರಿಗೆ ಬೆನ್ನಿಹಿನ್ ಬಂದ ವೇಳೆ ಅಂದಿನ ಕಾಂಗ್ರೆಸ್ ಸರ್ಕಾರ ರತ್ನಗಂಬಳಿ ಹಾಕಿ ಮತಾಂತರಕ್ಕೆ ಅವಕಾಶ ಮಾಡಿಕೊಟ್ಟಿತ್ತು ಎಂದು ಆರೋಪಿಸಿದ ಪ್ರತಿಭಟನಾಕಾರರು ಬೆಂಗಳೂರಿನ ಯಲಹಂಕದ ಸೂಪರ್‌ನೋವಾ ಎರೆನಾ ಸಭಾಂಗಣದಲ್ಲಿ ಸಮಾವೇಶದ ಹೆಸರಿನಲ್ಲಿ ಕಡುಬಡವ, ಅನಕ್ಷರಸ್ಥ ಮುಗ್ಧ ಹಿಂದೂಗಳಿಗೆ ಆಮಿಷ ಒತ್ತಡ ಹೇರಿ ಹೀಲಿಂಗ್ ನೆಪದಲ್ಲಿ ಬೆನ್ನಿಹಿನ್ ಮತಾಂತರ ಮಾಡಿದ್ದಾಗಿ ದೂರಿದರು.
ಇದೇ ರೀತಿ ಅಮೇರಿಕಾದಲ್ಲೂ ಕೂಡ ಹಣಗಳಿಕೆಗಾಗಿ ಹೀಲಿಂಗ್ ನಾಟಕವಾಡಿರುವ ಬೆನ್ನಿಹಿನ್ ಅಲ್ಲಿನ ಸರ್ಕಾರ ಆತನನ್ನು ಉಚ್ಛಾಟನೆ ಮಾಡಿಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರವಾಸಿ ವೀಸಾದಲ್ಲಿ ಬರಮಾಡಿ ಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ರಾಜ್ಯ ಸರ್ಕಾರ ಹಿಂದುಗಳ ಧಾರ್ಮಿಕ ನಂಬಿಕೆ ದಮನಮಾಡಲು ಹೊಂಚು ಹಾಕಿರುವುದು ಆತಂಕಕಾರಿ. ಹಿಂದೂ ಆಚಾರ ವಿಚಾರಗಳನ್ನು ಮೂಢ ನಂಬಿಕೆಯೆಂದು ವಿರೋಧಿಸುವ ಸ್ವಘೋಷಿತ ಪ್ರಗತಿಪರರು, ಸೋಗಲಾಡಿ ಸೆಕ್ಯುಲರ್ ವಾದಿಗಳು, ಬೂಟಾಟಿಕೆ ಬುದ್ಧಿ ಜೀವಿಗಳು ಈತನ ವಿರುದ್ಧ ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ನುಡಿದರು.  ಭಾರತದ ಕ್ರೈಸ್ತೀಕರಣಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಪಿತೂರಿ ಮಾಡಲಾಗಿದೆ. ವಿದೇಶಿ ಶಕ್ತಿಗಳ ನೇರ ಪ್ರಭಾವದಿಂದ ಬೆನ್ನಿ ಹಿನ್ ಸಭೆ ಆಯೋಜಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದರು.
ಕೂಡಲೇ ನಯವಂಚಕ ಬೆನ್ನಿಹಿನ್‌ನನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು. ಜಿಲ್ಲಾ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಜಿಲ್ಲಾ ಸಂಚಾಲಕ ಎ.ಜೆ.ಪಾರ್ಥಸಾರಥಿ, ವಿಜಯಕುಮಾರ್, ನಾಗೇಶ್, ಯಶ್ವಂತ್, ಅವಿನಾಶ್, ಪ್ರವೀತ್, ಸಂತೋಷ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.