ಹಾಸನ

ಸಹಾಯಧನ: ಬ್ಯಾಂಕ್‌ಗಳ ಧೋರಣೆಗೆ ಅಸಮಾಧಾನ

Published On :

ಚನ್ನರಾಯಪಟ್ಟಣ: ಸರ್ಕಾರ ವಿವಿಧಯೋಜನೆಗಳಡಿಯಲ್ಲಿ ಸಾಲದೊಂದಿಗೆ ಸಹಾಯಧನವನ್ನು ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಬ್ಯಾಂಕ್‌ನವರು ಅದನ್ನು ತಿರಸ್ಕರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು ಎಂದು ತಾಪಂ ಸದಸ್ಯೆ ವಿಜಯಾ ಶಿವಲಿಂಗಪ್ಪ ಆಗ್ರಹಿಸಿದರು.
ಜಿಲ್ಲಾಧಿಕಾರಿಗೆ ಪತ್ರ: ತಾಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಜಯ ಶಿವಲಿಂಗಪ್ಪ ತಾಲೂಕು ಪಂಚಾಯಿತಿ ವತಿಯಿಂದ ವಿವಿಧ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸಾಲದ ಜತೆಗೆ ಸಹಾಯಧನವನ್ನು ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಿಸುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ರೂಪಿಸಿದ್ದು, ಬ್ಯಾಂಕ್‌ನವರು ಮಾತ್ರ ಯೋಜನೆಯ ಫಲಾನುಭವಿಗಳಿಗೆ ಸಾಲ ನೀಡದೇ ಅವರನ್ನು ಅಲೆಸಿ ಕಡೆಯಲ್ಲಿ ಸಾಲ ನೀಡದೆ ಬರಿಗೈಲಿ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಲೀಡ್ ಬ್ಯಾಂಕ್‌ನ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು.
ಆಗ್ರಹ: ಚರ್ಚೆ ಮುಂದುವರಿಸಿದ ಸದಸ್ಯ ಬಸವರಾಜು, ರೈತರು ತಮ್ಮ ಜಮೀನನ್ನು ಅಡವು ಮಾಡಿ ತೆಗೆದುಕೊಂಡಿರುವ ಸಾಲದ ಬಾಕಿಗಾಗಿ ಸರ್ಕಾರದಿಂದ  ಬಂದ ಸಹಾಯಧನ ಹಾಗೂ ಇತರೆ ಹಣವನ್ನು ಜಮಾ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಲೀಡ್ ಬ್ಯಾಂಕ್‌ಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಆರೋಪ: ಸರ್ಕಾರ ಬಡವರು ತಮ್ಮ ನಿತ್ಯದ ಜೀವನಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ಕೂಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದು, ಆ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವುದರಿಂದ ಬಡವರ ಬದುಕು ದುಸ್ತರವಾಗುತ್ತಿದೆ ಎಂದು ಆರೋಪಿಸಿದರು. ತಾಲೂಕು ಪಂಚಾಯಿತಿ ಅನುದಾನವನ್ನು ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಕ್ಕಾಗಿ ಹಂಚಿಕೆ ಮಾಡಿ ಅದನ್ನು ಜಿಲ್ಲಾ ಪಂಚಾಯಿತಿ ಇಂಜನಿಯರಿಂಗ್ ವಿಭಾಗಕ್ಕೆ ಯೋಜನೆ ತಯಾರಿ ಹಾಗೂ ತಾಂತ್ರಿಕ ಒಪ್ಪಿಗೆಗಾಗಿ ಕಳುಹಿಸಿದ ಸಂದರ್ಭದಲ್ಲಿ ಸದಸ್ಯರು ಹಾಗೂ ಗುತ್ತಿಗೆದಾರರಿಂದ ಹಣಕ್ಕಾಗಿ ಪೀಡಿಸಿ ಹಣ ನೀಡದಿದ್ದರೆ ಯಾವುದೇ ದಾಖಲೆಗಳಿಗೆ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, 169 ಯೋಜನೆ ವರದಿಗಳು ಹಾಗೂ ತಾಂತ್ರಿಕ ಒಪ್ಪಿಗೆಗಾಗಿ ಕಳುಹಿಸಿರುವ ಫೈಲ್‌ಗಳು ಜಿಲ್ಲಾ ಪಂಚಾಯಿತಿ ಇಂಜನಿಯರಿಂಗ್ ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ ಎಂದು ಮಲ್ಲೇಶ್ ಆರೋಪಿಸಿದರು.
ಒಂದು ತುಂಡು ಗುತ್ತಿಗೆಯ ಕಾಮಗಾರಿಯ ತಾಂತ್ರಿಕ ಒಪ್ಪಿಗೆ ಹಾಗೂ ಯೋಜನೆ ಒಪ್ಪಿಗೆಗಾಗಿ ಮೂರರಿಂದ ನಾಲ್ಕು ಸಾವಿರ ಲಂಚ ನೀಡುವ ಪರಿಸ್ಥಿತಿ ಬಂದಿದೆ. ತಾಲೂಕು ಪಂಚಾಯಿತಿಗೆ ನೀಡುವ ಅನುದಾನವೇ ಕಡಿಮೆಯಾಗಿದ್ದು, ಇದರಲ್ಲಿ ಇಂಜನಿಯರ್‌ಗಳು ಹಾಗೂ ಜಿಲ್ಲಾ ಪಂಚಾಯಿತಿ ನೌಕರರ ಕಾಟವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು. 
ಪಿ.ಕೆ ಮಂಜೇಗೌಡ ಮಾತನಾಡಿ, ಕಳೆದ ಸಾಲಿನಲ್ಲಿ ಇಂಜನಿಯರ್‌ಗಳಿಗೆ ಲಂಚ ನೀಡಲಿಲ್ಲ ಎಂಬ ಕಾರಣದಿಂದ ತಾಲೂಕು ಪಂಚಾಯಿತಿಗೆ ಸೇರಿದ ರು. 25 ಲಕ್ಷ ಹಣ ಸರ್ಕಾರಕ್ಕೆ ವಾಪಸಾಗಿದ್ದು, ಪ್ರಸಕ್ತ ಸಾಲಿನಲ್ಲಿಯೂ ಇದೇ ರೀತಿಯಾಗಲು ಬಿಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು. ತಾಲೂಕು  ಪಂಚಾಯಿತಿಗೆ ಸರ್ಕಾರ ಅನುದಾನ ನೀಡುವುದೇ ಕಡಿಮೆಯಾಗಿದ್ದು, ಅದರಲ್ಲಿ ಕ್ಷೇತ್ರಗಳ ಸಮಸ್ಯೆಯಿದ್ದರೂ ತಾಲೂಕು ಪಂಚಾಯಿತಿ ಆವರಣ ಸುಂದರವಾಗಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅನುದಾನ ನೀಡುತ್ತಿದ್ದರೂ ಕುಳಿತುಕೊಳ್ಳಲು ಸರಿಯಾದ ಕುರ್ಚಿ ಇಲ್ಲ ಎಂದು ಅಧಿಕಾರಿಗಳ ವಿರುಧ್ಧ ವಾಗ್ದಾಳಿ ನಡೆಸಿದರು.  ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್ ಇದ್ದರು.
ಸರ್ಕಾರ ವಿವಿಧಯೋಜನೆಗಳಡಿಯಲ್ಲಿ ಸಾಲದೊಂದಿಗೆ ಸಹಾಯಧನವನ್ನು ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಬ್ಯಾಂಕ್‌ನವರು ಅದನ್ನು ತಿರಸ್ಕರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು ಎಂದು ತಾಪಂ ಸದಸ್ಯೆ ವಿಜಯಾ ಶಿವಲಿಂಗಪ್ಪ ಆಗ್ರಹಿಸಿದರು.
ಜಿಲ್ಲಾಧಿಕಾರಿಗೆ ಪತ್ರ: ತಾಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಜಯ ಶಿವಲಿಂಗಪ್ಪ ತಾಲೂಕು ಪಂಚಾಯಿತಿ ವತಿಯಿಂದ ವಿವಿಧ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸಾಲದ ಜತೆಗೆ ಸಹಾಯಧನವನ್ನು ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಿಸುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ರೂಪಿಸಿದ್ದು, ಬ್ಯಾಂಕ್‌ನವರು ಮಾತ್ರ ಯೋಜನೆಯ ಫಲಾನುಭವಿಗಳಿಗೆ ಸಾಲ ನೀಡದೇ ಅವರನ್ನು ಅಲೆಸಿ ಕಡೆಯಲ್ಲಿ ಸಾಲ ನೀಡದೆ ಬರಿಗೈಲಿ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಲೀಡ್ ಬ್ಯಾಂಕ್‌ನ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು.
ಆಗ್ರಹ: ಚರ್ಚೆ ಮುಂದುವರಿಸಿದ ಸದಸ್ಯ ಬಸವರಾಜು, ರೈತರು ತಮ್ಮ ಜಮೀನನ್ನು ಅಡವು ಮಾಡಿ ತೆಗೆದುಕೊಂಡಿರುವ ಸಾಲದ ಬಾಕಿಗಾಗಿ ಸರ್ಕಾರದಿಂದ  ಬಂದ ಸಹಾಯಧನ ಹಾಗೂ ಇತರೆ ಹಣವನ್ನು ಜಮಾ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಲೀಡ್ ಬ್ಯಾಂಕ್‌ಗೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಆರೋಪ: ಸರ್ಕಾರ ಬಡವರು ತಮ್ಮ ನಿತ್ಯದ ಜೀವನಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ಕೂಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದು, ಆ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವುದರಿಂದ ಬಡವರ ಬದುಕು ದುಸ್ತರವಾಗುತ್ತಿದೆ ಎಂದು ಆರೋಪಿಸಿದರು. ತಾಲೂಕು ಪಂಚಾಯಿತಿ ಅನುದಾನವನ್ನು ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯಕ್ಕಾಗಿ ಹಂಚಿಕೆ ಮಾಡಿ ಅದನ್ನು ಜಿಲ್ಲಾ ಪಂಚಾಯಿತಿ ಇಂಜನಿಯರಿಂಗ್ ವಿಭಾಗಕ್ಕೆ ಯೋಜನೆ ತಯಾರಿ ಹಾಗೂ ತಾಂತ್ರಿಕ ಒಪ್ಪಿಗೆಗಾಗಿ ಕಳುಹಿಸಿದ ಸಂದರ್ಭದಲ್ಲಿ ಸದಸ್ಯರು ಹಾಗೂ ಗುತ್ತಿಗೆದಾರರಿಂದ ಹಣಕ್ಕಾಗಿ ಪೀಡಿಸಿ ಹಣ ನೀಡದಿದ್ದರೆ ಯಾವುದೇ ದಾಖಲೆಗಳಿಗೆ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ, 169 ಯೋಜನೆ ವರದಿಗಳು ಹಾಗೂ ತಾಂತ್ರಿಕ ಒಪ್ಪಿಗೆಗಾಗಿ ಕಳುಹಿಸಿರುವ ಫೈಲ್‌ಗಳು ಜಿಲ್ಲಾ ಪಂಚಾಯಿತಿ ಇಂಜನಿಯರಿಂಗ್ ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ ಎಂದು ಮಲ್ಲೇಶ್ ಆರೋಪಿಸಿದರು.
ಒಂದು ತುಂಡು ಗುತ್ತಿಗೆಯ ಕಾಮಗಾರಿಯ ತಾಂತ್ರಿಕ ಒಪ್ಪಿಗೆ ಹಾಗೂ ಯೋಜನೆ ಒಪ್ಪಿಗೆಗಾಗಿ ಮೂರರಿಂದ ನಾಲ್ಕು ಸಾವಿರ ಲಂಚ ನೀಡುವ ಪರಿಸ್ಥಿತಿ ಬಂದಿದೆ. ತಾಲೂಕು ಪಂಚಾಯಿತಿಗೆ ನೀಡುವ ಅನುದಾನವೇ ಕಡಿಮೆಯಾಗಿದ್ದು, ಇದರಲ್ಲಿ ಇಂಜನಿಯರ್‌ಗಳು ಹಾಗೂ ಜಿಲ್ಲಾ ಪಂಚಾಯಿತಿ ನೌಕರರ ಕಾಟವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.  
ಪಿ.ಕೆ ಮಂಜೇಗೌಡ ಮಾತನಾಡಿ, ಕಳೆದ ಸಾಲಿನಲ್ಲಿ ಇಂಜನಿಯರ್‌ಗಳಿಗೆ ಲಂಚ ನೀಡಲಿಲ್ಲ ಎಂಬ ಕಾರಣದಿಂದ ತಾಲೂಕು ಪಂಚಾಯಿತಿಗೆ ಸೇರಿದ ರು. 25 ಲಕ್ಷ ಹಣ ಸರ್ಕಾರಕ್ಕೆ ವಾಪಸಾಗಿದ್ದು, ಪ್ರಸಕ್ತ ಸಾಲಿನಲ್ಲಿಯೂ ಇದೇ ರೀತಿಯಾಗಲು ಬಿಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು. ತಾಲೂಕು  ಪಂಚಾಯಿತಿಗೆ ಸರ್ಕಾರ ಅನುದಾನ ನೀಡುವುದೇ ಕಡಿಮೆಯಾಗಿದ್ದು, ಅದರಲ್ಲಿ ಕ್ಷೇತ್ರಗಳ ಸಮಸ್ಯೆಯಿದ್ದರೂ ತಾಲೂಕು ಪಂಚಾಯಿತಿ ಆವರಣ ಸುಂದರವಾಗಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅನುದಾನ ನೀಡುತ್ತಿದ್ದರೂ ಕುಳಿತುಕೊಳ್ಳಲು ಸರಿಯಾದ ಕುರ್ಚಿ ಇಲ್ಲ ಎಂದು ಅಧಿಕಾರಿಗಳ ವಿರುಧ್ಧ ವಾಗ್ದಾಳಿ ನಡೆಸಿದರು.  ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.