ಹಾಸನ

ಅಂತ್ಯ ಸಂಸ್ಕಾರ ಮುಗಿಸಿದವರು ಮಸಣಕ್ಕೆ

Published On :

ಕ.ಪ್ರ.ವಾರ್ತೆ , ಹಾಸನ , ಜ. 11
ಪರೀಕ್ಷೆಗೆ ಬರೆಯಲು ಹೆದರಿ ಆತ್ಮಹತ್ಯೆ ಮಾಡಿಕೊಂಡ ಸಂಬಂಧಿಕರ ಯುವತಿಯ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಹೋಗುತ್ತಿದ್ದಾಗ ಹೊರವಲಯದಲ್ಲಿ ಇರುವ ಕೆಂಚಟಹಳ್ಳಿ ಸಮೀಪದ ಬಿ.ಎಂ.ರಸ್ತೆಯಲ್ಲಿ  ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ಸಾವಿಗೀಡಾಗಿ, 6 ಮಂದಿ ಗಾಯಗೊಂಡಿದ್ದಾರೆ.
ಹಾಸನ ನಗರದ ಪೆನ್ಷನ್ ಮೊಹಲ್ಲಾದ ನಿವಾಸಿಗಳಾದ ಅಸ್ಲಂ (38) ಮತ್ತು ಅವರ ಪತ್ನಿ ಹೀನ್ ಕೌಸರ್ (28) ಮೃತಪಟ್ಟವರು. ಅವರ 2 ವರ್ಷದ ಮಗು ಯಾವುದೇ ಗಾಯಗಳಿಲ್ಲದೇ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ. ಮೃತರ ಮೂವರು ಮತ್ತು ತಂದೆ, ತಾಯಿ ಮತ್ತು ನೆಂಟರೊಬ್ಬರು ಗಾಯಗೊಂಡಿದ್ದು. ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುಟುಂಬ, ಶನಿವಾರ ಮೃತರಾದ ಕುಬ್ರಭಾನು ಅವರ ಅಂತ್ಯ ಸಂಸ್ಕಾರ ಮುಗಿಸಿಕೊಂಡು, ಬೆಂಗಳೂರಿನಲ್ಲಿ ಭಾನುವಾರ ನಡೆಯುತ್ತಿದ್ದ ಹತ್ತಿರದ ನೆಂಟರ ಮದುವೆಗೆ ಸ್ಕಾರ್ಪಿಯೋ ಕಾರಿನಲ್ಲಿ ಹೊರಟಿತ್ತು. ರಸ್ತೆಯಲ್ಲಿ ಇದ್ದ ವಿಭಜಕ (ಡಿವೈಡರ್)ಕ್ಕೆ ರಭಸವಾಗಿ ಹೊಡೆದ ಪರಿಣಾಮ ಕಾರು ರಸ್ತೆ ಪಕ್ಕದಲ್ಲಿ ಇದ್ದ ಹಳ್ಳಕ್ಕೆ ಮೂರು ಬಾರಿ ಪಲ್ಟಿ ಹೊಡೆದು ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಹಾಸನ ನಗರ ಸಂಚಾರಿ ಠಾಣೆ ಸಬ್ ಇನ್ಸ್‌ಪೆಕ್ಟರ್‌ಗಳಾದ ಬಾನು, ರಘು ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.