ಹಾಸನ

'ಕನ್ನಡ ಕೇವಲ ಭಾಷೆಯಲ್ಲ'

Published On :

ಆಲೂರು: ಕನ್ನಡ ಕೇವಲ ಭಾಷೆಯಲ್ಲ, ಅದು ಒಂದು ಸಂಸ್ಕೃತಿ, ಒಂದು ಪರಂಪರೆ ಮತ್ತು ಕನ್ನಡಿಗರ ಅಸ್ತಿತ್ವದ ಕುರುಹು. ಇದನ್ನು ತಿಳಿದು ಕನ್ನಡತನವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಡಿ.ಕೆ. ಮಂಜಯ್ಯ ಹೇಳಿದರು.
ಕಲಿಕೆಗೆ ಸೌಲಭ್ಯವಿದೆ: ಅವರು ಪಟ್ಟಣದ ಖಾಲಿಮೊಹಲ್ಲಾ ಅಬ್ದುಲ್ ಖುದ್ದೂರ್ ಸ್ನೇಕ್ ಬಾಬು ಅವರ  ಮನೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮನೆಗೊಂದು ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಷೆ ಅತ್ಯಂತ ಪ್ರಾಚೀನವಾದುದು. ಇದು ಒಂದು ಜನಾಂಗದ ಭಾಷೆಯಲ್ಲ, ಕಲಿಕೆಗೆ ಸಾಕಷ್ಟು ಸೌಲಭ್ಯವಿದೆ ಎಂದರು.
ಕಿರಿಯ ಎಂಜಿನಿಯರ್ ವೆಂಕಟೇಶ್ ಪ್ರಸಾದ್, ತಾಲೂಕು  ಕಸಾಪ ಅಧ್ಯಕ್ಷ ವೀರಭದ್ರಸ್ವಾಮಿ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಶಂಶುದ್ದೀನ್, ಹಾಜಿ ಅಬ್ದುಲ್ ವಹಾಬ್, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಸ್ನೇಕ್ ಬಾಬು ಇದ್ದರು.
ತಾಲೂಕು ಕಸಾಪ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕತಿಕ ಕಾರ್ಯಕ್ರಮ ಏರ್ಪಡಿಸಿ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಎ.ಟಿ. ಮಲ್ಲೇಶ್ ಸ್ವಾಗತಿಸಿದರು. ಸಾಂಸ್ಕೃತಿಕ  ವೇದಿಕೆ ಅಧ್ಯಕ್ಷೆ ಲಲಿತಮ್ಮ ವಂದಿಸಿದರು.
'ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮ'
ಹೊಳೆನರಸೀಪುರ: ಹದಿಮೂರನೇ ಹಣಕಾಸು ಯೋಜನೆಯಡಿಯಲ್ಲಿ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನು
 ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದ ಅವರು, 2012-13ನೇ ಹಣಕಾಸು ಯೋಜನೆಯ ಜನರಲ್ ಪರ್ಫಾಮೆನ್ಸ್ ಅನುದಾನದಡಿಯಲ್ಲಿ ಬಿಡುಗಡೆಯಾಗಿರುವ ರು. 32.49 ಲಕ್ಷ ಅನುದಾನದಲ್ಲಿ ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿವರ: ಸದರಿ ಅನುದಾನದಡಿಯಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆ ವಿಭಾಗಕ್ಕೆ 3.50ಲಕ್ಷರೂಗಳಲ್ಲಿ ದ್ವಿತೀಯ ಹಂತದ ತ್ಯಾಜ್ಯ ಶೇಖರಣೆಗಾಗಿ ಕಂಟೇನರ್‌ಗಳನ್ನು ಖರೀದಿಸುವುದು ಸೇರಿದಂತೆ, ಪಟ್ಟಣದ ಘನ ತ್ಯಾಜ್ಯ ವಿಲೇ ಘಟಕದಲ್ಲಿ ತ್ಯಾಜ್ಯವನ್ನು ವಿಭಾಗಿಸುವ ಯಂತ್ರವನ್ನು ರು. 4.72 ಲಕ್ಷಗಳಲ್ಲಿ ಖರೀದಿಸಲಾಗುವುದು ಎಂದ ಅವರು, ನೀರು ಸರಬರಾಜು ವಿತರಣಾ ಜಾಲದ ನವೀಕರಣಕ್ಕಾಗಿ ಪಟ್ಟಣದ 1ನೇ ವಾರ್ಡ್‌ನಿಂದ 12ನೇ ವಾರ್ಡ್‌ವರೆಗಿನ ನೀರಿನ ಟ್ಯಾಂಕ್‌ಗಳನ್ನು ರು. 3.25 ಲಕ್ಷ   ವೆಚ್ಚದಲ್ಲಿ ಹಾಗೂ 13ನೇ ವಾರ್ಡ್‌ನಿಂದ 23ನೇ ವಾರ್‌ಡಿನ ವರೆಗಿನ ನೀರಿನ ಟ್ಯಾಂಕ್‌ಗಳನ್ನು ರು. 3 ಲಕ್ಷ ವೆಚ್ಛದಲ್ಲಿ ಸ್ವಚ್ಛಗೊಳಿಸಲು ಉದ್ದೇಶಿಸಲಾಗಿದೆ ಎಂದು ವಿವರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.