ಹಾಸನ

'ಯುವಶಕ್ತಿಯಿಂದ ಮಾತ್ರ ನಾಡು ನುಡಿ ಉಳಿವು'

Published On :

ಹಾಸನ: ನಮ್ಮ ನಾಡು-ನುಡಿ ಉಳಿಸುವುದು ಯುವ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ನವ ಕರ್ನಾಟಕ ಯುವ ಶಕ್ತಿ ಸಂಘದ ರಾಜ್ಯಾಧ್ಯಕ್ಷ ಕೆ.ಎನ್. ಲಿಂಗೇಗೌಡ  ಹೇಳಿದರು.
ತಾಲೂಕಿನ ಕಟ್ಟಾಯ ಹೋಬಳಿ ಗೋಳೇನಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ನವ ಕರ್ನಾಟಕ ಯುವ ಶಕ್ತಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಸರಿಗೆ ಮಾತ್ರ ರಣಹೇಡಿ ಮಂತ್ರಿಗಳು ನಾಡನ್ನು ಆಳುತ್ತಿದ್ದಾರೆ. ದೇಶದಲ್ಲಿ ನಮ್ಮ ಸಂಸ್ಕೃತಿಗೆ ಒಂದು ಇತಿಹಾಸವೇ ಇದೆ. ಹೊಯ್ಸಳರ ಗಂಡು ಮೆಟ್ಟಿನ ನಾಡು ನಮ್ಮ ಕರ್ನಾಟಕ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಸರ್ಕಾರದಿಂದ ಬಂದ ಅನುದಾನ ಗ್ರಾಮೀಣ ಮಟ್ಟದವರೆಗೂ ತಲುಪುತ್ತಿದೆಯೇ  ಎಂಬುದನ್ನು ಸಂಘಟನೆಯು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಆತಂಕ: ರೈತರು ಬೆವರು ಸುರಿಸಿ ದುಡಿದರೇ ನಾವು  ಉಳಿಯುತ್ತೇವೆ. ಅನೇಕ ಸಮಯದಲ್ಲಿ ರೈತರು ಬೆಳೆದ ಬೆಳೆ ನಾಶ ಇಲ್ಲವೇ ಉತ್ತಮ ಬೆಲೆ ಸಿಗದೆ ಸಾಲಗಾರನಾಗುತ್ತಾನೆ. ಸಾಲ ಮನ್ನಾ ಮಾಡುವಂತಹ ಕೆಲಸ ರಾಜಕಾರಣಿಗಳು ಮಾಡದೆ ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ನಿಜವಾದ ಮಾಲೀಕರು ರೈತರು. ಅವರ ಬಗ್ಗೆ ಗಮನ ನೀಡಲಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಕುಳಿತು ಕರ್ನಾಟಕವನ್ನು ಉದ್ಧಾರ ಮಾಡುತ್ತೇನೆ ಎಂಬ ಮಾತು ಸುಳ್ಳು. ಯಾವುದೇ ಅಭಿವೃದ್ಧಿಗೆ ಅಲ್ಲಿನ ಜನರ ಕೈಲಿ ಇರುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನವ ಕರ್ನಾಟಕ ಯುವ ಶಕ್ತಿ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ, ಮಹಿಳಾ ಉಪಾಧ್ಯಕ್ಷೆ ಎಸ್.ಜೆ. ಸವಿತಾ, ಉಪಾಧ್ಯಕ್ಷ ಎ.ಎಂ. ಬಸವರಾಜ್, ತಾಲೂಕು ಅಧ್ಯಕ್ಷ ಹೆಚ್. ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಹೆಚ್. ಸಂತೋಷ್ ಗೌಡ, ನಗರಾಧ್ಯಕ್ಷ ಎಸ್.ಎಂ. ಪ್ರಸಾದ್, ಚಾಮುಂಡೇಶ್ವರಿ ಕ್ರಷರ್ ಮಾಲೀಕ  ಹನುಮಂತೇಗೌಡ, ಲಕ್ಷ್ಮಿ ಹ್ಯಾಲೋ ಬ್ರಿಕ್ಸ್ ಮಾಲೀಕ ಸಣ್ಣೇಗೌಡ, ಗ್ರಾಪಂ ಸದಸ್ಯ ಜಿ.ಎಚ್. ಸತೀಶ್, ಪತ್ರಕರ್ತ ರವಿನಾಕಲಗೂಡು, ಕ್ರಷರ್ ಮಾಲೀಕ ಗೋಪಾಲ್, ಮಂಜೇಗೌಡ, ಸಂತೋಷ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.