'ಪಾರದರ್ಶಕ ಆಡಳಿತಕ್ಕೆ ಮಾಹಿತಿ ಹಕ್ಕು ಸಹಕಾರಿ'
ಹೊಳೆನರಸೀಪುರ: ಮಾಹಿತಿ ಹಕ್ಕು ಕಾನೂನು ಜಾರಿಯಿಂದಾಗಿ ಸಮಾಜದಲ್ಲಿನ ಬಹುತೇಕ ಕಪ್ಪುಹಣದ ವಾರಸುದಾರರು, ರಾಜಕಾರಣಿಗಳು, ಅಕ್ರಮ ಆಸ್ತಿ ಸಂಪಾದಕರ ನಿಜಬಣ್ಣ ಬಯಲುಗೊಳ್ಳಲು ಮತ್ತು ರಾಜ್ಯದಲ್ಲಿ ಪಾರದರ್ಶಕತೆಯ ಆಡಳಿತ ನಡೆಸಲು ಸಹಕಾರಿಯಾಗಿದೆ ಎಂದು ಹಿರಿಯ ವಕೀಲರಾದ ಎಚ್.ಎಸ್.ಅರುಣ್ ಕುಮಾರ್ ನುಡಿದರು.
ಸದೃಢ ಕಾನೂನು: ಭಾನುವಾರ ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದ ಆವರಣದಲ್ಲಿ ವಾಸವಿ ಕ್ಲಬ್ ಆಯೋಜಿಸಿದ್ದ 2014ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗು ಮಾಹಿತಿ ಹಕ್ಕು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕಿನ ಬಗ್ಗೆ ವಿಶೇಷ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹಕ್ಕು ಮಾಹಿತಿಯಂತಹ ಸದೃಢ ಕಾನೂನು ಇರುವುದರಿಂದಲೇ ಇಂದು ಅನೇಕ ಖದೀಮರುಗಳು ಜೈಲು ಸೇರಿ ಸಮಾಜದ ಶುದ್ಧೀಕರಣಕ್ಕೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸತ್ಯಾಸತ್ಯತೆ ಬೆಳಕಿಗೆ: ಈ ಮಾಹಿತಿ ಹಕ್ಕು ಕಾನೂನು 2005ರಲ್ಲಿ ಆರಂಭವಾದ ನಂತರ ದೇಶದಲ್ಲಿ ಹಲವಾರು ಮಂದಿ ಖದೀಮರ ಮುಖವಾಡವನ್ನು ಕಳಚಲು ಕಾರಣವಾಗಿದ್ದು, ಇದಕ್ಕೆ ನಮ್ಮ ರಾಜ್ಯದಲ್ಲಿನ ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರುಗಳು ಹಾಗೂ ಅಧಿಕಾರಿಗಳೂ ಸೇರಿದ್ದಾರೆ ಎಂದು ವಿಶ್ಲೇಷಿಸಿದ ಅವರು ಜನಾರ್ಧನ ರೆಡ್ಡಿಯಂತಹ ಭೂಗಳ್ಳರು, ಗಣಿಧಣಿಗಳ ನೈಜಬಣ್ಣ ಬಯಲಾಗಿ ಸಮಾಜಕ್ಕೆ ಸತ್ಯಾಸತ್ಯತೆಯ ಬೆಳಕು ಕಾಣಲು ಕಾರಣವಾಯಿತೆಂದರು.
ಕಡಿವಾಣ ಸಾಧ್ಯವಾಗಿದೆ: ಈ ಕಾನೂನಿನ ಪ್ರಕಾರ ಮಾಹಿತಿ ಕೋರುವವರಿಗೆ ಅರ್ಜಿ ಹಾಕಿದ ಎಂಟು ದಿನಗಳೊಳಗೆ, ಮಾಹಿತಿ ನೀಡಬೇಕೆಂದು ಕಾನೂನು ಬಂದಿರುವುದು ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಕಳ್ಳಾಟ ನುಂಗಾಟಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದರು.
ಸಮಾರಂಭದಲ್ಲಿ ವಾಸವಿ ಕ್ಲಬ್ನ 2014 ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ವಾಸವಿ ಕ್ಲಬ್ನ ರಾಜ್ಯಪಾಲ ಕೆ.ಆರ್.ನಾಗರಾಜು ಪ್ರಮಾಣ ವಚನ ಬೋದಿಸಿದರು. ಸಮಾರಂಭದಲ್ಲಿ ಸಹಾಯಕ ರಾಜ್ಯಪಾಲ ಎ.ಅರ್.ರವಿಕುಮಾರ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್. ಅರುಣ್, ವಾಸವಿ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಜಿ.ನಟರಾಜ್, ಪತ್ರಕರ್ತ ಎಚ್.ವಿ. ಸುರೇಶ್ ಕುಮಾರ್, ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಎಚ್.ಎಸ್. ಸುದರ್ಶನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

