ಶೈಕ್ಷಣಿಕ ಪ್ರಗತಿಗೆ ಸಹಕಾರ ಅಗತ್ಯ: ರೇವಣ್ಣ
ಅರಕಲಗೂಡು: ಅರಕಲಗೂಡು: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಾರ್ವಜನಿಕ ಸಂಘ- ಸಂಸ್ಥೆಗಳ ಸಹಕಾರ ಅತ್ಯವಶ್ಯವಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರೇವಣ್ಣ ಹೇಳಿದರು.
ಕೊಣನೂರು ಬಿ.ವಿ.ಎಂ. ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಬೆಂಗಳೂರು ಕ್ಯಾಂಪ್ ಫೌಂಡೇಶನ್ ಸಂಸ್ಥೆ ಆಯೋಜಿಸಿದ್ದ ಶೈಕ್ಷಣಿಕ ಪರಿಕರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಒದಗಿಸುತ್ತಿರುವ ಹಲವಾರು ಸೌಲಭ್ಯಗಳ ಜೊತೆಗೆ ಸಂಘ- ಸಂಸ್ಥೆಗಳ ಕೊಡುಗೆ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಸಮಾಜಮುಖಿ ಚಿಂತನೆ ಇಟ್ಟುಕೊಂಡು ಕ್ಯಾಪ್ ಫೌಂಡೇಶನ್ ಸಂಸ್ಥೆ ಉಚಿತವಾಗಿ ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಮಕ್ಕಳು ಶಿಕ್ಷಣ ರಂಗದಲ್ಲಿ ಕಲಿಯುವುದು ಬಹಳಷ್ಟಿದೆ. ಶಿಕ್ಷಣವೆಂದರೆ ಓದಿಗೆ ಮಾತ್ರ ಸೀಮಿತವಲ್ಲ. ವಿದ್ಯಾರ್ಥಿ ದಿಸೆಯಲ್ಲಿಯೇ ಪಠ್ಯದ ಜೊತೆಗೆ ಪಶಿಸ್ತು, ಸಂಯಮ ರೂಢಿಸಿಕೊಂಡು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಕಡೆಗೆ ಹೆಚ್ಚು ಕಾಳಜಿ ವಹಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.
ಸಿ.ಆರ್.ಪಿ. ಬಿ.ಎಸ್. ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಪ್ ಫೌಂಡೇಶನ್ ಸಂಸ್ಥೆ ಮುಖ್ಯಸ್ಥ ಚಂದ್ರಶೇಖರ ಶೆಟ್ಟಿ, ಹನೀಶ್, ಪೂರ್ಣಿಮಾ ಶೆಟ್ಟಿ, ನಾಗಲಕ್ಷ್ಮಿ, ಭಾಸ್ಕರ್, ಮಂಜುನಾಥ್, ಇ.ಸಿ.ಓ. ಲೋಕೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಫಾಲಾಕ್ಷ, ಬಿ.ಆರ್.ಪಿ. ಮಹದೇವಪ್ಪ, ಬಸವರಾಜು, ಗುರುಮೂರ್ತಿ, ಸಿ.ಆರ್.ಪಿ. ವೆಂಕಟೇಶ್, ಚಂದ್ರಶೇಖರ್, ಶಿವಶಂಕರ್, ಪುಟ್ಟರಾಜು ಉಪಸ್ಥಿತರಿದ್ದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎಸ್.ಎಂ. ನಿರ್ವಾಣಪ್ಪ ಸ್ವಾಗತಿಸಿದರು. ಉಪನ್ಯಾಸಕ ಕೆ.ಎಲ್. ಕೆರೆಕೋಡಿ ಜಗದೀಶ್ ನಿರೂಪಿಸಿದರು.
ಸಂಸ್ಥೆ ವತಿಯಿಂದ ಕೊಣನೂರಿನ ಬೆಳಗೋಡು ವಿಶಾಲಾಕ್ಷಮ್ಮ ಮುತ್ಯಾಲಶೆಟ್ಟಿ ಬಾಲಿಕಾ ಪ್ರೌಢಶಾಲೆ, ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಎಕೆಎಲ್ಪಿಎಸ್ ಹಾಗೂ ಕೊಣನೂರು ಹೋಬಳಿಯ ಉಳ್ಳೇನಹಳ್ಳಿ, ಕೆರೆಕೋಡಿ, ಅಕ್ಕಲವಾಡಿ, ಕೆಸವತ್ತೂರು, ಅರಸೀಕಟ್ಟೆ ಕಾವಲು, ಹೆಣ್ಣೂರು ಕೊಂಗಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸುಮಾರು ರೂ. 7 ಲಕ್ಷ ಮೌಲ್ಯದ ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ವಿವಿಧ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

