ದೇಶದ ಸಮಸ್ಯೆಗಳಿಗೆ ಸಂಘ ಪರಿವಾರದಿಂದ ಮಾತ್ರ ಉತ್ತರ
ಕ.ಪ್ರ.ವಾರ್ತೆ , ಸಕಲೇಶಪುರ , ಜ.16
ಹಿಂದೂಗಳ ಸಂಘಟನೆಯಿಂದ ಮಾತ್ರ ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವೆಂದು ಸಂಘಪರಿವಾರದ ಮುಖಂಡ ರಘು ಹೇಳಿದ್ದಾರೆ.
ಸಮಸ್ಯೆ ಉದ್ಭವ: ಮಂಗಳವಾರ ತಾಲೂಕಿನ ಕಿರುಹುಣಸೆ ಗ್ರಾಮದಲ್ಲಿ ನಡೆದ ನೂತನ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಘಟಕದ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಹಿಂದೂ ಸಮಾಜವು ವ್ಯಾಪಕ ಸಮಸ್ಯೆಗಳಿಂದ ತತ್ತರಿಸುತ್ತಿದೆ. ಇದಕ್ಕೆಲ್ಲಾ ಕಾರಣ, ದೇಶವನ್ನಾಳಿದ ಬಹುತೇಕ ಸರ್ಕಾರಗಳು ಓಟು ಬ್ಯಾಂಕ್ ದೃಷ್ಟಿಯಿಂದ ಅಲ್ಪ ಸಂಖ್ಯಾತರಿಗೆ ಮಣೆ ಹಾಕುತ್ತಾ ಬಹುಸಂಖ್ಯಾತರನ್ನು ನಿರ್ಲಕ್ಷಿಸಿದ್ದು. ಆದರೆ, ಈ ನೆಲದ ನೀರನ್ನು ಕುಡಿದು ಇಲ್ಲಯೇ ವಾಸಿಸುತ್ತಿರುವ ಕೆಲವು ಜಿಹಾದಿ ಮುಸ್ಲಿಮರು ದೇಶದಲ್ಲೆಡೆ ಭಯೋತ್ಪಾದನಾ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತಿದೆ ಎಂದರು.
ಕರೆ: ಇಂತಹ ಸಮಸ್ಯೆಗಳನ್ನು ಪರಿಹರಿಸಲು ಕೇವಲ ಹಿಂದೂ ಸಂಘಟನೆಯಿಂದ ಮಾತ್ರ ಸಾಧ್ಯ, ಹಾಸನ ಜಿಲ್ಲೆಯಲ್ಲಿ ಸಹ ವ್ಯಾಪಕ ಲವ್ ಇನ್ ಜಿಹಾದ್ ಪ್ರಕರಣಗಳು ನಡೆಯುತ್ತಿದ್ದು ಇದರ ವಿರುದ್ಧ ಹಿಂದೂ ಹೆಣ್ಣು ಮಕ್ಕಳು ಎಚ್ಚರಿಕೆ ವಹಿಸಬೇಕು ಹಾಗೂ ಮತಾಂತರ ಮಾಡವವರನ್ನು ಗ್ರಾಮದಲ್ಲಿ ಸೇರಿಸಬಾರದೆಂದು ಅವರು ಕರೆ ನೀಡಿದರು.ಕಾರ್ಯಕ್ರಮದ ಅಂಗವಾಗಿ ಕಿರುಹುಣಸೆ ಗ್ರಾಮವನ್ನು ಕೇಸರಿ ಧ್ವಜ ಹಾಗೂ ಬಂಟಿಂಗ್ಸ್ಗಳಿಂದ ಶೃಂಗಾರ ಮಾಡಲಾಗಿತ್ತು. ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು ಹಾಗೂ ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಮಾವಿನ ಮರದ ಸಸಿಯನ್ನು ನೆಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಿರುಹುಣಸೆ ಎಸ್ಟೇಟ್ನ ದೇವರಾಜು ಅವರನ್ನು ಸನಾನಿಸಲಾಯಿತು.
ಈ ಸಂಧರ್ಭದಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ವಿಜಯ್ ಕುಮಾರ್, ವಿಹೆಚ್ಪಿ ನಗರ ಅಧ್ಯಕ್ಷ ದುಷ್ಯಂತ್, ಕಿರುಹುಣಸೆ ಘಟಕದ ಮುಖಂಡರುಗಳಾದ ರಮೇಶ್, ಮಂಜುನಾಥ್, ಮಹೇಶ್, ಅರ್ಜುನ್, ವಿರುಪಾಕ್ಷ, ಹೊಂಕರವಳ್ಳಿ ಘಟಕದ ಪ್ರವೀಣ, ಬಾಬು ರೈ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

