ನಾಲ್ಕು ಅಂಗಡಿಗಳಿಗೆ ಬೆಂಕಿ; ಲಕ್ಷಾಂತರ ರು. ನಷ್ಟ
ಹಾಸನ: ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ಕು ಅಂಗಡಿಗಳು ಸುಟ್ಟು ಹೋಗಿ ಲಕ್ಷಾಂತರ ರು. ನಷ್ಟವಾಗಿರುವ ದುರ್ಘಟನೆ ನಗರದ ಹಳೆ ಮಟನ್ ಮಾರ್ಕೆಟ್ ವೃತ್ತದ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಮುಂಜಾನೆ 3.30 ರ ವೇಳೆಗೆ ಕೆಲ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಲಾಯಿತು. ಅವರು ಬರುವ ಹೊತ್ತಿಗೆ ಒಂದು ಅಂಗಡಿ ಪೂರ್ಣ ಸುಟ್ಟು ಕರಕಲಾಗಿ ಹೋಗಿತ್ತು. ಉಳಿದ ಅಂಗಡಿಗಳ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು.
ಪಕ್ಕದ ಅಂಗಡಿಯೂ ಭಸ್ಮ: ಅಬ್ದುಲ್ ಖಾಲೀದ್ ಎಂಬವರಿಗೆ ಸೇರಿದ ಟೀ ಅಂಗಡಿ ಪೂರ್ಣವಾಗಿ ಸುಟ್ಟು ಹೋದ ಪರಿಣಾಮ ಮರದ ವಸ್ತುಗಳು ಸೇರಿದಂತೆ ಇತರೆ ಉಪಕರಣಗಳು ಸೇರಿ ಒಟ್ಟು ರು. 50 ಸಾವಿರ ಮೌಲ್ಯದ ವಸ್ತುಗಳು ನಷ್ಟವಾಗಿದೆ. ಟೀ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ, ಆನಂತರ ಪಕ್ಕದಲ್ಲಿಯೇ ಇರುವ ಮುಸಿಮ್ ಎಂಬವರಿಗೆ ಸೇರಿದ ಕೋಳಿ ಅಂಗಡಿಗೂ ಬೆಂಕಿ ವ್ಯಾಪಿಸಿ ಅಲ್ಲಿದ್ದ ಟಿವಿ ಹಾಗೂ ಮಾರಾಟಕ್ಕೆ ಇಡಲಾಗಿದ್ದ ಕೋಳಿಗಳು ಸಾವನಪ್ಪಿವೆ.
ತನ್ವೀರ್ ಎಂಬವರಿಗೆ ಸೇರಿದ ಯೂನಿಕ್ ಆಟೋವರ್ಕ್ಸ್ ಒಳಗೂ ಬೆಂಕಿ ಕಾಣಿಸಿಕೊಂಡು ಸಾವಿರಾರು ರು. ಬೆಲೆ ಬಾಳುವ ವಸ್ತುಗಳು ನಷ್ಟವಾಗಿದೆ. ಈ ಅಂಗಡಿಗಳ ಎದುರು ಇರುವ ಸ್ಟಾರ್ ಹೋಂ ಅಪ್ಲೆಯನ್ಸ್ನ ಗ್ಯಾಸ್ ಅಂಗಡಿಯಲ್ಲೂ ಇದೇ ರೀತಿ ಬೆಂಕಿ ತಗುಲಿ ನಷ್ಟವಾಗಿದೆ.
ಅಗ್ನಿ ಅನಾಹುತ ಹೇಗಾಯಿತು ಎಂಬುದು ತಿಳಿದಿಲ್ಲ. ಸಮೀಪದಲ್ಲಿಯೇ ಸಿಸಿ ಕ್ಯಾಮೆರಾ ಅಳವಡಿಸಿರುವುದರಿಂದ ಪೊಲೀಸರಿಗೆ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

