ಮತ್ತೆ ಮೂಡಿತು ನೀರಾವರಿ ಹೊಂಗನಸು
ಮಾದಿಹಳ್ಳಿ ವೆಂಕಟೇಶ್
ಚನ್ನರಾಯಪಟ್ಟಣ: ಅತಿ ಶೀಘ್ರದಲ್ಲೇ ಬರುವ ಲೋಕಸಭೆ ಚುನಾವಣೆಯೋ, ಕುಡಿಯುವ ನೀರಿನ ಬವಣೆಯೋ ಅಥವಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯ ಹಿನ್ನಲೆಯಿಂದಲೋ ತಾಲೂಕಿನ ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು ಒಂದು ಸುವರ್ಣವಕಾಶ ಬಂದಂತೆ ಕಾಣುತ್ತಿದೆ.
ದಂಡಿಗನಹಳ್ಳಿ ಹೋಬಳಿ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದ್ದರೂ, ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ್ದು, ಹಿಂದಿನಿಂದಲೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಚ್.ಡಿ. ರೇವಣ್ಣ ಅವರಿಗೆ ರಾಜಕೀಯ ಭವಿಷ್ಯಕ್ಕೆ ಬುನಾದಿಯಾಗಿರುವ ಹೋಬಳಿ ಜನತೆಯ ಜಮೀನಿಗೆ ನೀರು ಹಾಯುವುದು ಸನ್ನಿಹಿತವಾದಂತೆ ಗೋಚರವಾಗುತ್ತಿದೆ.
ರೇವಣ್ಣಗೆ ಸವಾಲು: ಹೇಮಾವತಿ ನದಿಯಿಂದ ನೇರವಾಗಿ ಏತ ನೀರಾವರಿ ಮುಖೇನ ನೀರೆತ್ತುವ ವಿಶೇಷ ತಾಂತ್ರಿಕತೆಯಿಂದ ಕೂಡಿರುವ ಯೋಜನೆ ರಾಜಕೀಯ ದ್ವೇಷಕ್ಕೆ ನೆನೆಗುದಿಗೆ ಬಿದ್ದಿತ್ತಾದರೂ ಕಾಮಗಾರಿ ಪೂರ್ಣಗೊಳಿಸುವುದು ಎಚ್.ಡಿ. ರೇವಣ್ಣ ಅವರಿಗೆ ಸವಾಲಾಗಿ ನಿಂತಿದೆ.
ಕಾಮಗಾರಿ ನಡೆಯುವುದು ಮುಖ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವುದು ತಮ್ಮ ಕರ್ತವ್ಯವೆಂದು ದಂಡಿಗನಹಳ್ಳಿ, ಗಂಡಸಿ ಹಾಗೂ ದುದ್ದ ಹೋಬಳಿ ಜನತೆಗೆ ಭರವಸೆ ನೀಡಿದ ಕಾರಣ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಬಳಿ ಹೋಗಬೇಕಾದರೆ ಯೋಜನೆಯ ಕಾಮಗಾರಿ ಭರದಿಂದ ನಡೆಸುವುದು ಮುಖ್ಯವಾಗಿದೆ.
ಪ್ರಾಮುಖ್ಯತೆ: ವರ್ಷದ 365 ದಿನಗಳೂ ನದಿಯಿಂದ ನೀರೆತ್ತಲು ಅವಕಾಶವಿರುವುದರಿಂದ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಎಚ್.ಡಿ. ರೇವಣ್ಣ ಅವರು, ಈ ಭಾಗದ ಭಗೀರಥರಾಗುವ ಎಲ್ಲಾ ಸಂದರ್ಭಗಳೂ ಕೂಡಿ ಬರುತ್ತಿರುವುದರಿಂದ ಸರ್ಕಾರದ ಮಟ್ಟದಲ್ಲಿ ಯೋಜನೆಗೆ ಹಣ ತರಲು ತಾವೇ ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಸದಸ್ಯರೊಂದಿಗೆ ಬೇಟಿ ನೀಡಿ ಪರಿಶೀಲಿಸಿರುವುದು ಯೋಜನೆಗೆ ಪ್ರಾಮುಖ್ಯ ಸಿಕ್ಕಿದಂತಾಗಿದೆ. ಯೋಜನೆ ಅನುಷ್ಠಾನ ತಡೆಗೆ ಹಲವು ರಾಜಕೀಯ ವೈಷಮ್ಯಗಳೂ ಕಾರಣವೆನ್ನುವ ಈ ಭಾಗದ ಜನತೆ ಹಳೆಯ ರಾಜಕೀಯ ದ್ವೇಷವನ್ನು ಬಿಟ್ಟು, ಒತ್ತಾಯಕ್ಕೆ ಮಣಿದು ಕಾಮಗಾರಿ ಪರಿಶೀಲನೆಗಾಗಿ ಅಧಿಕೃತ ಪ್ರವಾಸ ಕೈಗೊಂಡಿರುವುದು ತಮ್ಮ 20 ವರ್ಷ ರಾಜಕೀಯದಲ್ಲಿ ಎರಡನೇ ಬಾರಿಯದಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

