ನೇತ್ರದಾನ ಮಾಡಲು ಶಾಸಕ ಮಂಜು ಕರೆ
ರಾಮನಾಥಪುರ: ಇಲ್ಲಿನ ನೈರುತ್ಯ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದರ 151ನೇ ಜನ್ಮಶತಾಬ್ದಿ ಸವಿ ನೆನಪಿಗಾಗಿ ಸ್ವಯಂಪ್ರೇರಿತ ನೇತ್ರದಾನ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರವನ್ನು ಪಟ್ಟಣದ ಹೃದಯಭಾಗದಲ್ಲಿರುವ ಶ್ರೀ ಪಟ್ಟಾಭಿರಾಮ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಬದುಕಿಗೆ ಬೆಳಕು: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ. ಮಂಜು, ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾವು ನಿಶ್ಚಯ. ಹಾಗಾಗಿ ನಮ್ಮ ಮರಣದ ನಂತರ ನಮ್ಮೊಂದಿಗೆ ಮಣ್ಣಾಗಿ ಹೋಗುವ ಕಣ್ಣುಗಳನ್ನು ಅಂಧ ವ್ಯಕ್ತಿಗಳಿಗೆ ದಾನ ಮಾಡುವುದರಿಂದ ಅವರ ಕತ್ತಲೆಯ ಬದುಕಿಗೆ ಬೆಳಕು ನೀಡಿದಂತಾಗುತ್ತದೆ ಎಂದರು.
ದೇಶದಲ್ಲಿ ಅದೆಷ್ಟೋ ಲಕ್ಷಾಂತರ ಮಂದಿ ಸ್ತ್ರೀಯರು, ಪುರುಷರು ಮಕ್ಕಳಲ್ಲಿ ಈ ಅಂಧತ್ವಕ್ಕೆ ಗುರಿಯಾಗಿ ಕತ್ತಲೆಯ ಬದುಕು ನಡೆಸುತ್ತಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಕೂಡ ಈ ರೀತಿ ಸ್ವಯಂ ನೇತ್ರದಾನ ಮಾಡುವುದರಿಂದ ಅವರ ಬದುಕಿನ ಸಾರ್ಥಕತೆಗೆ ಒಂದು ಅರ್ಥ ಬರುತ್ತದೆ. ಸ್ವಾಮಿ ವಿವೇಕಾನಂದರು ತಮ್ಮ ಐಷಾರಾಮಿ ಜೀವನವನ್ನು ತ್ಯಜಿಸಿ ಪರರ ಹಿತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಸಿದ ಆದರ್ಶ ಗುಣಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಈ ರೀತಿ ಸಮಾಜಕ್ಕೆ ಸೇವೆ ಸಲ್ಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ನೈರುಧ್ಯ ಸಂಸ್ಥೆಯಂತೆ ಪ್ರತಿಯೊಬ್ಬರೂ ಮುಂದಾಗಬೇಕೆಂದರು.
ನೇತ್ರ ಶಸ್ತ್ರ ತಜ್ಞ ಡಾ.ರಾಕೇಶ್, ಡಾ. ರಾಜೇಶ್, ಸ್ಥಳೀಯ ಗ್ರಾಪಂ ಅಧ್ಯಕ್ಷೆ ಸರಸ್ವತಿ ನಾಗೇಗೌಡ, ಉಪಾಧ್ಯಕ್ಷ ಎಂ.ಹೆಚ್. ಕೃಷ್ಣಮೂರ್ತಿ, ಸಮಾಜ ಸೇವಕ ಲೋಕೇಶ್, ನೈರುದ್ಯ ಸಂಸ್ಥೆಯ ಉಪಾಧ್ಯಕ್ಷ ಸ್ವಾಮಿಗೌಡ ಪಿ.ವೈ., ಪ್ರಧಾನ ಕಾರ್ಯದರ್ಶಿ ಪಾಂಡುರಂಗ, ಖಜಾಂಚಿ ಶ್ರೀನಿವಾಸ್, ಸಂಚಾಲಕರಾದ ಲಕ್ಷ್ಮಿ ಭರತ್, ಸಾವಿತ್ರಿ ಭಟ್, ಸುಭದ್ರ ಕೆ.ಪಿ., ನಾರಾಯಣ್, ಕೃಷ್ಣ, ಗೂಳಿ ಸಿದ್ದಯ್ಯ, ಅಚ್ಚುತ, ಶಂಕರ್ನಾಯಕ್, ಮನೋಜ್ ಕುಮಾರ್, ಹೇಮಂತ್, ಶಿವಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

