ಹಾಸನ

ಫೆ.9ರಂದು ಬೆಂಗಳೂರಿಗೆ ಪಾದಯಾತ್ರೆ

Published On :

ಹಾಸನ: ಹಿರೀಸಾವೆ- ಶ್ರವಣಬೆಳಗೊಳ ಕುಡಿಯುವ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಫೆ. 9ರಂದು ಹಿರೀಸಾವೆಯಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿ ಕರ್ನಾಟಕ ರಕ್ಷಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ಯಾಡರಹಳ್ಳಿ ಯೋಗೇಶ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ- ಶ್ರವಣಬೆಳಗೊಳ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯ ಅಭಾವದಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಕುಡಿಯುವ ನೀರಿನ ಶಾಶ್ವತ ಏತ ನೀರಾವರಿ ಯೋಜನೆಗಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಸಂಘ- ಸಂಸ್ಥೆಗಳ ಸಾಥ್: ಆದ್ದರಿಂದ ಫೆ. 9ರಂದು ಹಿರೀಸಾವೆಯಿಂದ ಬೆಳಗ್ಗೆ 7ಕ್ಕೆ ಬೃಹತ್ ಪಾದಯಾತ್ರೆಯ ಪ್ರಾರಂಭಿಸಿ, ಫೆ. 12ರಂದು ಬೆಂಗಳೂರಿಗೆ ತಲುಪಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗುತ್ತದೆ. ಈ ಹೋರಾಟಕ್ಕೆ ರೈತ ಮುಖಂಡರ ಜೊತೆಗೆ ಹಿರೀಸಾವೆಯಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ನಡೆಸಲಾಗುತ್ತದೆ.
ಇನ್ನು ಹಲವಾರು ಉದ್ದೇಶದಿಂದ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಯೋಜನೆ ಕೈಗೊಳ್ಳಲು ಈ ಭಾಗದ ಎಲ್ಲಾ ರೈತರ ಮುಖಂಡರು ಮತ್ತು ಸಂಘ ಸಂಸ್ಥೆಯವರು ಕೈ ಜೋಡಿಸಲಿದ್ದಾರೆ ಎಂದರು.
ಮನವಿ: ಈ ಯೋಜನೆಯು ಜನವಾರ ಕೆರೆ, ಸಂಡುನಹಳ್ಳಿ ಕೆರೆ, ಜುಟ್ಟನಹಳ್ಳಿ ಕೆರೆ, ಮತ್ತಿಕಟ್ಟೆ, ಹಿರೀಸಾವೆ, ಬಾಳಗಂಜಿಕೆರೆಗಳಿಗೆ ನೀರನ್ನು ಒದಗಿಸುವಂತ ಯೋಜನೆಯಾಗಿದ್ದು, 35 ಕ್ಯೂಸೆಕಕ್ನೀರನ್ನು ಒದಗಿಸುವಂತಹವಾಗಿದೆ ಎಂದ ಅವರು, ಪಾದಯಾತ್ರೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಆದ್ದರಿಂದ ಜಿಲ್ಲೆಯ ಜನತೆಯು ಪಾದಯಾತ್ರೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಉಪಾಧ್ಯಕ್ಷರಾದ ಬಳಗಟ್ಟೆ ಲೋಕೇಶ್, ವಡ್ಡರಹಳ್ಳಿ ಗಣೇಶ್, ಹಿರೀಸಾವೆ ಹೋಬಳಿ ಘಟಕ ಅಧ್ಯಕ್ಷ ಎಚ್.ಬಿ.ಮಹೇಶ್, ಬೋರೇಗೌಡ ಹಾಗೂ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.