ಹಲ್ಲೆಗೊಳಗಾದ ಶಿಕ್ಷಕರಿಗೆ ಪಟೇಲ್ ಶಿವರಾಂ ಸಾಂತ್ವನ
ಚನ್ನರಾಯಪಟ್ಟಣ: ಇತ್ತೀಚೆಗೆ ಶಿಕ್ಷರನ್ನು ಪ್ರೌಡಶಾಲೆ ವಿದ್ಯಾರ್ಥಿಯ ಪೋಷಕರು ಹಾಗೂ ಪುಂಡರ ಘಟನೆ ನಡೆದ ಪಟ್ಟಣದ ಪೇಟೆ ಪ್ರೌಢಶಾಲೆಗೆ ಮಂಗಳವಾರ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಬೇಟಿ ನೀಡಿ ಶಿಕ್ಷಕರಿಗೆ ಧೈರ್ಯ ತುಂಬಿದರು.
ಶಿಕ್ಷಕರ ಮೇಲೆ ಅಮಾನಿಯವಾಗಿ ನಡೆದುಕೊಂಡು ಶಿಕ್ಷಕರ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮುಖೇನ ಶಿಕ್ಷಣ ಇಲಾಖೆ ಆಯುಕ್ತರು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗುವುದು. ಜ. 10ರಂದು ಇದೇ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಶಿಕ್ಷಕರು ಹಲ್ಲೆಗೊಳಗಾಗಿದ್ದನ್ನು ಸ್ಮರಿಸಬಹುದು.
ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳಿಗೆ ಅದೇ ಶಾಲೆಯಲ್ಲಿ ಮತ್ತೆ ವ್ಯಾಸಂಗಕ್ಕಾಗಿ ಅವಕಾಶ ನೀಡುವಂತೆ ಪೋಷಕರು ಒತ್ತಾಯಿಸುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ತಮ್ಮ ಗಮನಕ್ಕೆ ತಂದಿದ್ದು, ಇಂತಹ ಶಿಕ್ಷಕರಿಗೆ ಯಾವುದೇ ಕಾರಣದಿಂದ ಇದೇ ಶಾಲೆಯಲ್ಲಿ ಅವಕಾಶ ನೀಡಬಾರದು. ಈ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಪುಂಡ ಹಾಗೂ ರೌಡಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಅಧಿಕಾರವನ್ನು ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಆಗ್ರಹ: ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ಸರ್ಕಾರ ನಿಗದಿ ಮಾಡಿರುವ ಸಮಯದಲ್ಲಿ ತರಗತಿ ತೆಗೆದುಕೊಳ್ಳುತ್ತಾರೆ. ಆದರೆ, ಫಲಿತಾಂಶದ ಮಟ್ಟವನ್ನು ಸುಧಾರಿಸಲು ವಿಶೇಷ ತರಗತಿಗಳನ್ನು ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು, ಇಂತಹ ಕಾರ್ಯ ಮಾಡುತ್ತಿರುವ ಶಿಕ್ಷಕರ ಮೇಲೆ ಹಲ್ಲೆ ಮಾಡಲು ಮುಂದಾದ ಪೋಷಕರು ಹಾಗೂ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
'ಕ್ರಾಂತಿ ಬುದ್ಧಿಯೇ ಸಂಘಟನೆಗೆ ಪ್ರೇರಣೆ'
ಹಾಸನ: ಮಕ್ಕಳಲ್ಲಿ ವಿಮರ್ಶೆ ಇಲ್ಲದೇ ಅಥವಾ ಸಂಶಯವಿಲ್ಲದೆ ಸ್ವೀಕರಿಸುವ ಭಾವನೆ ಇರುತ್ತದೆ. ಆದರೆ ತಾರುಣ್ಯದಲ್ಲಿ ಪ್ರತಿಭಟನೆ ಮತ್ತು ಕ್ರಾಂತಿ ಬುದ್ಧಿ ವಿವೇಕನಂದರಿಗೆ ಯುವಕರನ್ನು ಸಂಘಟಿಸಲು ಪ್ರೇರೇಪಿಸಿತು ಎಂದು ಭಾರತ ಜ್ಞಾನ- ವಿಜ್ಞಾನ ಸಮಿತಿಯ ಶಾಂತಿಗರ ಘಟಕದ ಕಾರ್ಯದರ್ಶಿ ಜಯಪ್ರಕಾಶ್ ತಿಳಿಸಿದರು.
ಯುವಕರಿಗೆ ಕರೆ: ಇತ್ತೀಚೆಗೆ ಬಿಜಿವಿಎಸ್ ಶಾಂತಿನಗರ ಘಟಕದ 13ನೇ ಅನಿಸಿಕೆ ಅಭಿವ್ಯಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವೇಕಾನಂದ ಒಂದು ಚಿಂತನೆ ಕುರಿತು ಮಾತನಾಡಿ, ವಿವೇಕಾನಂದರ ಪ್ರಕಾರ ಸೇವೆ ಎಂದರೆ ದೀನರ, ದಲಿತರ, ದುರ್ಬಲರ ಏಳಿಗೆಯಲ್ಲಿ ಶಿವನನ್ನು ಕಾಣುವುದು, ಭಯಂಕರ ದಾರಿದ್ರ್ಯದಿಂದ ಪುರೋಹಿತಶಾಹಿತ್ವದಿಂದ ಅಧೋಗತಿಗೆ ಇಳಿದಿರುವ ಭರತಖಂಡದ ಲಕ್ಷೋಪಲಕ್ಷ ಜೀವಿಗಳ ಏಳಿಗೆಗಾಗಿ ನಾವೆಲ್ಲರೂ ಪರಪ್ಪರ ಸಹಾಯದಿಂದ ಒಗ್ಗೂಡಿ ದುಡಿಯೋಣ ಎಂದು ವಿವೇಕಾನಂದರು ಯುವಕರಿಗೆ ಕರೆ ನೀಡಿದ್ದರು ಎಂದು ತಿಳಿಸಿದರು.
ಆಹಾರ, ಶಿಕ್ಷಣ ನೀಡಿ ಎಂದಿದ್ದರು: ಭ್ರಾತೃ- ಭಗಿನಿಯರೇ ಎಂದು ಸಂಬೋಧಿಸುವ ಮೂಲಕ ಸರ್ವಧರ್ಮ ಸಮ್ಮೇಳನದಲ್ಲಿ ಜಗತ್ತಿಗೆ ಪ್ರಸಿದ್ಧವಾದ ವಿವೇಕಾನಂದರು ಹಿಂದು ಧರ್ಮವೇ ಶ್ರೇಷ್ಠವೆಂದು ವಾದ ಮಂಡಿಸದೇ, ಧರ್ಮ ಪ್ರಚಾರಕ್ಕಿಂತ ಹಸಿದ ಹೊಟ್ಟೆಗಾಗಿ ಆಹಾರ ಮತ್ತು ಶಿಕ್ಷಣವನ್ನು ನೀಡುವಂತೆ ಕೇಳಿಕೊಂಡರು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

