ಹಾಸನ

ಕಾಂಗ್ರೆಸ್ ಮುಖಂಡರ ಆರೋಪ ಸತ್ಯಕ್ಕೆ ದೂರ

Published On :

ಅರಸೀಕೆರೆ: ತಾಲ್ಲೂಕಿನ ನಾನಾ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಒಂದು ವೇಳೆ ಅಕ್ರಮ ನಡೆದಿರುವುದನ್ನು ಸಾಬೀತುಪಡಿಸುವುದಾದರೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಜಿಪಂ ಉಪಾಧ್ಯಕ್ಷ ಬಿಳಿ ಚೌಡಯ್ಯ, ಸದಸ್ಯ ಹುಚ್ಚೇಗೌಡ ಸವಾಲು ಹಾಕಿದ್ದಾರೆ.
ದಿನಾಂಕ ನಿಗದಿಪಡಿಸಲಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಂ. ಶಿವಲಿಂಗೇಗೌಡರು ಶಾಸಕರಾದ ಅವಧಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ತಾಂತ್ರಿಕ ತಜ್ಞರು ಹಾಗೂ ಮಾಧ್ಯಮದ ಸ್ನೇಹಿತರೊಂದಿಗೆ ವೀಕ್ಷಣೆ ಮಾಡಲು ಬರುವ ತಾಕತ್ತು ಈ ಕಾಂಗ್ರೆಸ್ ಮುಖಂಡರಿಗಿದ್ದರೆ ಬಹಿರಂಗ ಚರ್ಚೆಗೆ ಬರುವ ಸವಾಲನ್ನು ನಾವು ಸ್ವೀಕರಿಸುತ್ತಿದ್ದೇವೆ. ತಾಕತ್ತಿದ್ದರೆ ದಿನಾಂಕ, ಸಮಯ, ಸ್ಥಳ ನಿಗದಿಪಡಿಸಲಿ ಎಂದು ಆಹ್ವಾನ ನೀಡಿದ್ದಾರೆ.
ಇ- ಪ್ರೊಕ್ಯೂರ್ಮೆಂಟ್: ಲೋಕೋಪಯೋಗಿ ಇಲಾಖೆಯಲ್ಲಿ ರು. 25.75 ಕೋಟಿ ಮೊತ್ತವನ್ನು ಒಂದೇ ಪ್ಯಾಕೇಜ್ ನೀಡಿ ಟೆಂಡರ್ ಕರೆದು ಆಂಧ್ರ ಮೂಲದ ಎಎಸ್ಐಪಿ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿದೆ ಎಂಬ ಹೇಳಿಕೆ ನೀಡಲಾಗಿದ್ದು ಇದು ಶುದ್ಧ ಸುಳ್ಳು. ಎಲ್ಲಾ ಕಾಮಗಾರಿಗಳು ಇ-ಪ್ರೊಕ್ಯೂರ್ಮೆಂಟ್ ಟೆಂಡರ್ ಕರೆದು ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಮೋಹನ್ ಕುಮಾರ್, ಮುಖಂಡರಾದ ಗಂಗಾಧರ್, ಎಚ್.ಆರ್. ರಾಜು, ಪುರಸಭಾ ಸದಸ್ಯರಾದ ಪಂಚಾಕ್ಷರಿ, ಸುರೇಶ್, ಕೃಷ್ಣೇಗೌಡ ಹಾಗೂ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.