ಹಾಸನ

ಪೇದೆ ಮೇಲೆ ಪುಂಡರ ಹಲ್ಲೆ

Published On :

ಚನ್ನರಾಯಪಟ್ಟಣ: ಖಾಸಗಿ ಶಾಲಾ ವಾರ್ಷಿಕೋತ್ಸವ ಸಮಾರಂಭದ ಭದ್ರತೆಗೆ ತೆರಳಿದ್ದ ಪಟ್ಟಣ ಪೊಲೀಸ್ ಠಾಣೆಯ ಪೇದೆಯೊಬ್ಬರ ಮೇಲೆ ವಾರ್ಷಿಕೋತ್ಸವ ವೀಕ್ಷಣೆಗೆ ಬಂದ ಕೆಲ ಪುಂಡರು ಹಲ್ಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ವಾರ್ಷಿಕೋತ್ಸವ ಸಮಾರಂಭದ ಸಂದರ್ಭದಲ್ಲಿ ವೇದಿಕೆಯ ಮುಂದೆ ಕೆಲ ಪುಂಡರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಅವರನ್ನು ಅಲ್ಲಿಂದ ಹೊರ ಕಳುಹಿಸಿದಾಗ ವಾರ್ಷಿಕೋತ್ಸವ ನಡೆಯುತ್ತಿದ್ದ ವೇದಿಕೆಯ ಮುಂಭಾಗದಲ್ಲಿದ್ದ ರಸ್ತೆಯಲ್ಲಿ ಪುಂಡರ ಗುಂಪು ರಸ್ತೆ ತಡೆ ಮಾಡಿ ರಸ್ತೆ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ.  ಸಂಚಾರವನ್ನು ಸುಗಮಕ್ಕೆ ಪೊಲೀಸ್ ಪೇದೆ ತಮ್ಮಯ್ಯ ಅವರ ಮೇಲೆ ಹಲ್ಲೆ ನಡೆಸಿ ಆತನನ್ನು ಎಳೆದಾಡಿ ಆತನ ಬಳಿಯಿಂದ ಲಾಠಿ ಕಿತ್ತುಕೊಂಡು ಅದರಲ್ಲಿಯೇ ಆತನಿಗೆ ಥಳಿಸಿದರಲ್ಲದೆ ಆತನ ಸಮವಸ್ತ್ರವನ್ನು ಹರಿದು ಹಾಕಿದ್ದಾರೆ.
ಈ ಘಟನೆಗೆ ಪ್ರಮುಖ ಕಾರಣರಾದ ಶ್ರೀನಿವಾಸಪುರದ ಪ್ರಮೋದ್, ಸಾಸಲುಪುರದ ರಾಜೇಶ್, ಹುಲಿವಾಲದ ವಿನೋದ್ ಇತರರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.