ಹಾಸನ

ಮತ್ತೊಮ್ಮೆ ಸ್ಪರ್ಧಿಸುವಾಸೆ: ಸಂಸದೆ ರಮ್ಯಾ ಇಂಗಿತ

Published On :

ಹಾಸನ: ಮುಂಬರುವ ಲೋಕಸಭಾ ಚುನಾಣೆಯಲ್ಲಿ ಮತ್ತೊಮ್ಮೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಇದೆ ಎಂದು ಸಂಸದೆ ಹಾಗೂ ನಟಿ ರಮ್ಯಾ ಹೇಳಿದ್ದಾರೆ.
ಮಂಡ್ಯ ಜನತೆ ನನಗೆ ಪ್ರೀತಿ ತೋರಿದ್ದು, ಆದರೆ ಮುಂದಿನ ಲೋಕಸಭಾ ಚುನಾವಣೆಗೆ ಮಂಡ್ಯ ಅಭ್ಯರ್ಥಿ ಯಾರು ಅನ್ನೋದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ತಂದೆ ಕಳೆದುಕೊಂಡು ನಾನು ಕಷ್ಟದಲ್ಲಿ ಇದ್ದಾಗ ಮಂಡ್ಯ ಜನತೆ ಪ್ರೀತಿ ತೋರಿದ್ದಾರೆ. ಅವರ ಋಣ ತೀರಿಸುವ ತೀರಿಸುವ ಆಸೆಯಿಂದ ಮತ್ತೊಮ್ಮೆ ಸ್ಪರ್ಧೆ ಮಾಡುವ ಆಸೆ ಇದೆ ಎಂದು ಗುರುವಾರ ಸುದ್ದಿಗಾರೊಂದಿಗೆ ಮಾತನಾಡುತ್ತಾ ತಮ್ಮ ಮನದ ಆಸೆ ವ್ಯಕ್ತಪಡಿಸಿದರು.
ಹೆಮ್ಮೆ ಇದೆ: ಕಳೆದ 5 ತಿಂಗಳಲ್ಲಿ ಹಿಂದಿ ಲೋಕಸಭಾ ಸದಸ್ಯರು ಮಾಡದ ಕೆಲಸವನ್ನು ನಾನು ಮಾಡಿದ್ದೇನೆ. ಕೇಂದ್ರದಿಂದ ನನ್ನ ಕ್ಷೇತ್ರಕ್ಕೆ ಬೇಕಿರುವ ಯೋಜನೆಗಳನ್ನು ತರಲು ಶ್ರಮಿಸಿದ್ದೇನೆ. ಮಂಡ್ಯದ ಜನತೆ ನನ್ನ ಕುಟುಂಬ ಇದ್ದಂತೆ. ಅವರಿಗೋಸ್ಕರ ನಾನು ಎಲ್ಲವನ್ನು ತ್ಯಾಗ ಮಾಡಲು ಸಿದ್ದ, ನಾನು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಹೆಮ್ಮೆ ಇದೆ ಎಂದರು.
ತೀರ್ಮಾನಕ್ಕೆ ಬದ್ಧ: ಕನ್ನಡ ಚಿತ್ರರಂಗದಲ್ಲಿ ತಲೆದೋರಿರುವ ಡಬ್ಬಿಂಗ್ ವಿವಾದ ಹಿನ್ನೆಲೆಯಲ್ಲಿ ಜ. 27ರಂದು ಕರೆ ನೀಡಿರುವ ಚಿತ್ರೋದ್ಯಮ ಬಂದ್ ವೇಳೆ ನಾನು ದೆಹಲಿಯಲ್ಲಿ ಇರುವುದರಿಂದ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ.  ಆದರೆ, ಕನ್ನಡ ಚಿತ್ರರಂಗ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದ ಅವರು, ಸ್ವಂತ ಕಥೆಯಾಧರಿಸಿ ಚಿತ್ರ ಮಾಡಬೇಕು ಅನ್ನೋದು ನನ್ನ ಇಚ್ಛೆ. ಪರಭಾಷೆಯಲ್ಲಿ ಉತ್ತಮ ಪ್ರದರ್ಶನ ಕಂಡ ಸಿನಿಮಾ ರಿಮೇಕ್ ಅಥವಾ ಡಬ್ಬಿಂಗ್ ಮಾಡಿದರೆ ಅದನ್ನು ಜನ ನೋಡಬೇಕು. ಈ ಬಗ್ಗೆ ನನಗೂ ಗೊಂದಲವಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.