ಬಜರಂಗ ದಳ ಕಾರ್ಯಕರ್ತರ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ
ಸಕಲೇಶಪುರ: ತಾಲ್ಲೂಕಿನ ಸೌಹಾರ್ದತೆಯನ್ನು ಹದಗೆಡಿಸುತ್ತಿರುವ ಬಜರಂಗದಳದ ಸಂಚಾಲಕ ರಘು ಮತ್ತು ಆತನ ಬೆಂಬಲಿಗರನ್ನು ಸಹಚರರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ನಾನಾ ಸಂಘಟನೆಯ ಮುಖಂಡರು ಗುರುವಾರ ಪಟ್ಟಣದ ಪ್ರಮುಖ ಬೀದಿಯಲ್ಲಿ ತಮಟೆ ಬಾರಿಸುತ್ತ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಆರೋಪ: ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ತಾಲ್ಲೂಕು ಬಜರಂಗದಳದ ಸಂಚಾಲಕನಾದ ರಘು ಮತ್ತು ಆತನ ಕಡೆಯವರಾದ ವಿಜಯ್, ಪ್ರದೀಪ್, ಟೈಲ್ಸ್ ರಮೇಶ, ಧರ್ಮೇಶ್, ನಂದನ್ ಇತರರು ಸಕಲೇಶಪುರ ತಾಲ್ಲೂಕಿನಲ್ಲಿ ಜಾತಿ-ಜಾತಿಗಳ ಮಧ್ಯೆ ದ್ವೇಷ ಭಾವನೆಯನ್ನು ಮೂಡಿಸುತ್ತಾ, ಗಲಾಟೆ, ಘರ್ಷಣೆಗಳನ್ನು ಮಾಡಲು ಸಂಚು ರೂಪಿಸುತ್ತಿದ್ದಾರೆ. ಜೊತೆಗೆ ಸಕಲೇಶಪುರ ತಾಲ್ಲೂಕಿನ ನಾನಾ ಸರ್ಕಾರಿ ಇಲಾಖೆ ಅಧಿಕಾರಿಗಳಿಗೆ ಹೆದರಿಸಿ, ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಚ್ಚರಿಕೆ: ರಘು ಮತ್ತವರ ತಂಡದವರು ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಪೋಲಿಸರು ಅನುಮತಿ ನೀಡಬಾರದು. ಸಂಬಂದ ಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಎಲ್ಲಾ ರೀತಿಯ ಅನಾಹುತಗಳಿಗೂ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘದ ತಾಲ್ಲೂಕು ಅಧ್ಯಕ್ಷ ಸುಪ್ರದೀಪ್ತ ಯಜಮಾನ್, ಶ್ರೀರಾಮ ಸೇನೆ ಅಧ್ಯಕ್ಷ ಉಮೇಶ್, ಬಿಜೆಪಿ ಮುಖಂಡ ಆಟೋ ರವಿ ಕುಮಾರ್, ಕಾಂಗ್ರೆಸ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಬೈಕೆರೆ ದೇವರಾಜ್, ರೈತ ಸಂಗದ ಜಿಲ್ಲಾಧ್ಯಕ್ಷ ಮೂರ್ತಿ. ದಸಂಸ ಮುಖಂಡರಾದ ಕುನಿಗನಹಳ್ಳಿ ನಿಂಗರಾಜ್, ಶೇಖರ್ ಮೀಸೆ ಮಂಜಯ್ಯ, ಕಾಂಗ್ರೆಸ್ ಮುಖಂಡ ಸಯ್ಯದ್ ಮುಫೀಝ್, ರೇವಣ್ಣ ಅಭಿಮಾನಿಗಳ ಸಂಘದ ಜಿಲ್ಲಾಕಾರ್ಯದರ್ಶಿ ರೋಹಿತ್ ಶೆಟ್ಟಿ, ನಾರ್ವ ಘಟಕದ ದಿನೇಶ್, ಬೆಳೆಗಾರರ ಸಂಘದ ಪ್ರವೀಣ್, ವೀರ ಕನ್ನಡಿಗರ ಟಿಪ್ಪು ಸೇನೆಯ ಅಧ್ಯಕ್ಷ ಜಾಕೀರ್ ಶಾಮಿಯಾನ, ಬಿಎಸ್ಪಿಯ ನಗರ ಘಟಕದ ಅದ್ಯಕ್ಷ ನಿಂಗರಾಜ್, ನಾನಾ ಸಂಘಟನೆಯ ಮುಖಂಡರಾದ ಬಾಳ್ಳು ಪೇಟೆ ಹರ್ಷ, ನಡ್ಡಳ್ಳಿ ನವೀನ್, ನಾಗರ ರಘು. ಲವಕುಮಾರ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

