ಹಾಸನ

ದಾಳಿ: ನಕಲಿ ಗೊಬ್ಬರ ವಶ

Published On :

ಹಾಸನ: ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದ 930 ಜೀಲ ಸಾವಯವ ಗೊಬ್ಬರ-ಪ್ರೆಸ್ ಮಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪರಿಶೀಲನೆ: ಹಾಸನದ ನವಭಾರತ್ ಫರ್ಟಿಲೈಸರ್ಸ್ ಇವರು ವಿಜಯಗ್ರೋಮಿನ್ ಎಂಬ ಹೆಸರಿನಲ್ಲಿ ಸಾವಯವ ಗೊಬ್ಬರ ಪ್ರೆಸ್ಮಡ್ ಅನ್ನು ಹಳ್ಳಿಹಳ್ಳಿಗೆ ಹೋಗಿ ರೈತರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಸುದ್ದಿ ತಿಳಿದ ಕೂಡಲೇ ಇಲಾಖಾ ಅಧಿಕಾರಿಗಳ ತಂಡ ರಚಿಸಿ, ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರಂತೆ, ಅಧಿಕಾರಿಗಳು ತಂಡ ಜ. 22ರಂದು ತಾಲೂಕಿನ ತಣ್ಣೀರುಹಳ್ಳದಲ್ಲಿ ಇರುವ ನವಭಾರತ್ ಫರ್ಟಿಲೈಸರ್ಗಳು ಹಾಗೂ ಜ. 23ರಂದು ತಾಲೂಕಿನ ಶಾಂತಿಗ್ರಾಮ ಹೋಬಳಿಯ ರಂಗನಾಥಪುರ ಗೇಟ್ನಲ್ಲಿ ಇರುವ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ.
ತಪ್ಪು ಮಾಹಿತಿ: ಪರವಾನಗಿ ಪಡೆಯದೇ ಸಾವಯವ ಗೊಬ್ಬರ- ಪ್ರೆಸ್ಮಡ್ ಎಂಬ ನಾಮಾಂಕಿತವನ್ನು ಚೀಲಗಳ ಮೇಲೆ ಮುದ್ರಿಸಿ, ಕಾನೂನು ಬಾಹಿರವಾಗಿ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ರೈತರಿಗೆ ಮಾರಾಟ ಮಾಡುತ್ತಿರುವುದು ತಿಳಿದುಬಂದಿದ್ದು, ಲಘು ಪೋಷಕಾಂಶಗಳ ಮಾರಾಟಕ್ಕೆ ಮಾತ್ರ ಪರವಾನಗಿ ಪಡೆದಿದ್ದಾರೆ. ಜೀಲಗಳ ಮೇಲೆ ಪ್ಯಾಕೇಜ್ ನಿಯಮಗಳನ್ನು ಉಲ್ಲಂಘಿಸಿ, ಮಾರಾಟ ಮಾಡಲಾಗುತ್ತಿದೆ.
  ಮೋಸಗೊಳಿಸುವಂತೆ ಹೇಳಿಕೆಗಳನ್ನು ಮುದ್ರಿಸಿರುವುದು ತಿಳಿದು ಬಂದಿದೆ. ಸಾವಯವ ಗೊಬ್ಬರ- ಪ್ರೆಸ್ ಮಡ್ ಎಂದು ಎರಡನ್ನು ಚೀಲದ ಮೇಲೆ ಮುದ್ರಿಸಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ: ಪ್ರೆಸ್ ಮಡ್ ಎಂಬುದು ಸಕ್ಕರೆ ಕಾರ್ಖಾನೆಯ ಉಪ-ಉತ್ಪನ್ನವಾಗಿದ್ದು, ಇದನ್ನು ರಸಗೊಬ್ಬರ ನಿಯಂತ್ರಣ ಆದೇಶ 1985ರ ಪ್ರಕಾರ ಮಾರಾಟ ಮಾಡಲು ಅವಕಾಶವಿಲ್ಲ.
ಪ್ರೆಸ್ ಮಡ್ ಆಧಾರದ ಸಾವಯವ ಗೊಬ್ಬರವನ್ನು ತಯಾರಿಸಿ, ದಾಸ್ತಾನು ಮಾಡಿ ರೈತರಿಗೆ ವಿತರಿಸಲು ಮಾರಾಟ ಮಾಡಲು ಅವಕಾಶವಿಲ್ಲ ಎಂದು ಅವರು ತಿಳಿಸಿದರು. ಚೀಲದಲ್ಲಿ ಮಾರಾಟ ಮಾಡುತ್ತಿರುವುದು ಯಾವ ಮೂಲದಿಂದ ಉತ್ಪಾದಿಸಲಾಗಿದೆ ಎಂಬುದರ ಬಗ್ಗೆ ಚೀಲದ ಮೇಲೆ ವಿವರಗಳನ್ನು ಕಂಪನಿಯವರು ಮುದ್ರಿಸಿಲ್ಲ ಎಂದು ಮಾಹಿತಿ ನೀಡಿದರು.
ತಡೆಯಾಜ್ಞೆ: ಕಂಪನಿಯ ಗೋದಾಮಿನಲ್ಲಿ ದಾಸ್ತಾನಿಟ್ಟಿದ್ದ ಪರಿಕರಗಳನ್ನು ಪರಿಶೀಲಿಸಲಾಗಿದೆ. ಗೋದಾಮಿನಲ್ಲಿ ದಾಸ್ತಾನು ಮಾಡಿರುವ 40 ಕೆಜಿ ತೂಕದ 930 ಜೀಲದ ವಿಜಯ ಗ್ರೋಮಿನ್ ಚೀಲಗಳನ್ನು ಮಾರಾಟ ಮಾಡದಂತೆ ತಡೆಯಾಜ್ಞೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.