ಹಾಸನ

ಪ್ರತಿಭಟನೆ ವಾಪಸ್

Published On :

ಬೇಲೂರು: ಏತ ನೀರಾವರಿ ಕಾಮಗಾರಿಯನ್ನು ಮಾಚ್ 30 ರ ಒಳಗೆ ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿ ನೀಡಿದ ಭರವಸೆ ಮೇರೆಗೆ ಯಗಚಿ ಹೋರಾಟ ಸಮಿತಿ, ತಾಲೂಕು ರೈತ ಸಂಘ, ಹಸಿರುಸೇನೆ ಹಾಗೂ ಪ್ರಗತಿಪರ ಸಂಘಟನೆಗಳು ಕಳೆದ 5 ದಿನದಿಂದ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಶನಿವಾರ ಸಂಜೆ ಮುಕ್ತಾಯಗೊಳಿಸಲಾಯಿತು.
ತಾಲೂಕು ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್ ಹೋಬಳಿಗಳಿಗೆ ನೀರು ಪೂರೈಸುವಂತೆ ಆಗ್ರಹಿಸಿ ಇಲ್ಲಿನ ತಾಲೂಕು ಕಚೇರಿ ಮುಂಭಾಗ ಸೋಮವಾರದಿಂದ ರೈತರು  ಆಹೋರಾತ್ರಿ ಧರಣಿಯನ್ನು ಆರಂಭಿಸಿದ್ದರು. 3 ದಿನದ ನಂತರ ತೀವ್ರಗೊಂಡ ಹೋರಾಟದ ಸ್ಥಳಕ್ಕೆ ಶಾಸಕರು, ಜಿಲ್ಲಾಧಿಕಾರಿ ಬರಬೇಕು ಎಂದು ರೈತರು ಪಟ್ಟುಹಿಡಿದಿದ್ದರು.
ಧರಣಿಗೆ ಚಾಲನೆ: ಯಗಚಿ ಏತನೀರಾವರಿ ಕಾಮಗಾರಿ ಪೂರ್ಣಗೊಳ್ಳಲು 5 ಇಲಾಖೆಯ ಅಧಿಕಾರಿಗಳು ಅವಶ್ಯಕತೆಯಿದ್ದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮಾತ್ರ ಬಗೆಹರಿಯುವ ವಿಶ್ವಾಸವಿದ್ದು, ಅವರೇ ಬರಬೇಕು ಎಂಬುದು ರೈತ ಮುಖಂಡರ ಪ್ರಮುಖ ಬೇಡಿಕೆಯಾಗಿತ್ತು. ಇನ್ನು 1 ವಾರದಲ್ಲಿ ಏತ ನೀರಾವರಿ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ  ವಿವಿದ ಇಲಾಖೆಯ ತೊಡಕನ್ನು ಪರಿಹರಿಸಲಾಗುವುದು ಮತ್ತು ಮಾ. 30ಕ್ಕೆ ನೀರನ್ನು 3 ಹೋಬಳಿಗೆ ಹರಿಸಲಾಗುವುದು ಎಂದು ಭರವಸೆ ನೀಡಿರುವುದಾಗಿ ರೈತ ಮುಖಂಡರು ತಿಳಿಸಿದರು.
ರೈತ ಸಂಘದ ಮುಖಂಡರಾದ ಕೆ.ಪಿ.ಕುಮಾರ್, ಪರಮೇಶ್, ಗುರುಸ್ವಾಮೇಗೌಡ್ರು, ಅಡಗೂರು ಪದ್ಮಪ್ರಭು, ಪುಟ್ಟೇಗೌಡ, ಭೋಗ ಮಲ್ಲೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ. ಅನಂತ ಸುಬ್ಬರಾಯ, ಎಚ್.ಎಂ.ಗೋವಿಂದಪ್ಪ, ಕೆ. ಸುದರ್ಶನ್, ಬಸವೇಗೌಡ್ರು, ಜಾವಗಲ್ ಮಂಜುನಾಥ್, ಹಳೆಬೀಡು ರೈತ ಸಂಘದ ಅಧ್ಯಕ್ಷ ಚನ್ನೇಗೌಡ, ಗೌರವಾಧ್ಯಕ್ಷ ಪುಪ್ಪೇಗೌಡ, ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಇಂದೇಶ್, ಕರವೇ ಅಧ್ಯಕ್ಷ ಜಾವಗಲ್ ದಯಾನಂದ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.